Jupiter Retrograde 2023 : ವೈದಿಕ ಜ್ಯೋತಿಷ್ಯದಲ್ಲಿ, ಗುರುವಿಗೆ ದೇವಗುರುವಿನ ಸ್ಥಾನಮಾನವನ್ನು ನೀಡಲಾಗಿದೆ. ದೇವಗುರು ಬೃಹಸ್ಪತಿ ವರ್ಷಕ್ಕೊಮ್ಮೆ ರಾಶಿಯನ್ನು ಬದಲಿಸುತ್ತಾರೆ. ಈ ವರ್ಷ ಗುರು 12 ವರ್ಷಗಳ ನಂತರ ತನ್ನದೇ ಆದ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ.  ಏಪ್ರಿಲ್ 22, 2023 ರಂದು ಮೀನ ರಾಶಿಯನ್ನು ಪ್ರವೇಶಿಸಿರುವ ಗುರು, ಎಲ್ಲರ ಜಾತಕದ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನೇ ಬೀರಿದ್ದಾರೆ. ಗುರು ಮುಂದಿನ ವರ್ಷ ಮೇ 2024 ರವರೆಗೆ ಮೀನ ರಾಶಿಯಲ್ಲಿಯೇ ಇರುತ್ತಾನೆ. ಆದರೆ, ಗುರುವಿನ ಸಂಚಾರದಲ್ಲಿ ಕೆಲವು ಬದಲಾವಣೆಗಳಾಗಲಿವೆ. ಸೆಪ್ಟೆಂಬರ್ ತಿಂಗಳಲ್ಲಿ ಗುರುವಿನ ಹಿಮ್ಮುಖ ಚಲನೆ ಆರಂಭವಾಗಲಿದೆ. ಸೆಪ್ಟೆಂಬರ್‌ನಿಂದ, ಆರಂಭವಾಗುವ ಗುರು ಗ್ರಹದ ಹಿಮ್ಮುಖ ಚಲನೆಯು ಎಲ್ಲಾ 12 ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಗುರುವಿನ ಹಿಮ್ಮುಖ ಚಲನೆ ಮೂರು ರಾಶಿಯವರಿಗೆ ಉತ್ತಮ ಅವಕಾಶಗಳನ್ನು ನೀಡಲಿದೆ. 


COMMERCIAL BREAK
SCROLL TO CONTINUE READING

ಈ ರಾಶಿಯವರ ಅದೃಷ್ಟವನ್ನು ಬೆಳಗಲಿದ್ದಾನೆ ಹಿಮ್ಮುಖ ಗುರು : 
ಮೇಷ ರಾಶಿ : ಸೆಪ್ಟೆಂಬರ್ ತಿಂಗಳಿನಿಂದ ಮೇಷ ರಾಶಿಯವರ ಅದೃಷ್ಟದ ದಿನಗಳು ಆರಂಭ. ಈ ರಾಶಿಯವರಿಗೆ ಹಿಮ್ಮುಖ ಚಲನೆಯಲ್ಲಿರುವ ಗುರು  ಸಂಪತ್ತನ್ನು ಕರುಣಿಸುತ್ತಾನೆ. ಮೇಷ ರಾಶಿಯವರು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟ ಜೊತೆಗಿರುತ್ತದೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಪ್ರಗತಿ ಇರುತ್ತದೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿ ಇರುವವರ ನಿರೀಕ್ಷೆ ಪೂರ್ಣಗೊಳ್ಳುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. 


ಇದನ್ನೂ ಓದಿ : ಶನಿಯ ಹಿಮ್ಮುಖ ಚಲನೆ: ಈ 3 ರಾಶಿಗಳಿಗೆ ನವೆಂಬರ್‌ವರೆಗೆ ಬಂಪರ್.. ಆದಾಯ ದುಪ್ಪಟ್ಟು, ಸಂಪತ್ತಿನ ಸುರಿಮಳೆ!


ಮಿಥುನ ರಾಶಿ : ಗುರುಗ್ರಹದ ಹಿಮ್ಮುಖ ಚಲನೆಯು ಮಿಥುನ ರಾಶಿಯವರ ಆದಾಯವನ್ನು ಹೆಚ್ಚಿಸುತ್ತದೆ. ಇದರಿಂದ ಬಹಳಷ್ಟು ಲಾಭವಾಗುತ್ತದೆ. ಇದ್ದಕ್ಕಿದ್ದಂತೆ ಹಣ ಹರಿದು ಬರುತ್ತದೆ. ಇದು ಅನೇಕ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಮಿಥುನ ರಾಶಿಯವರ ಆದಾಯ ಹೆಚ್ಚಾಗುತ್ತದೆ. ಕೆಲವು ಐಷಾರಾಮಿ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಸಂತೋಷ ಮನೆ ಮಾಡುತ್ತದೆ. ಹೊಸ ಆಸ್ತಿ ಖರೀದಿಸುವ ಯೋಗವಿದೆ. 


ಕರ್ಕ ರಾಶಿ: ಕರ್ಕ ರಾಶಿಯವರಿಗೆ ಗುರುವಿನ ಹಿಮ್ಮುಖ ಚಲನೆಯು ವರದಾನವಾಗಿ ಪರಿಣಮಿಸುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವುದು. ಹೊರಗೆ ಸಿಕ್ಕಿ  ಹಾಕಿಕೊಂಡಿರುವ ಹಣ ಮತ್ತೆ ಕೈ ಸೇರುವುದರಿಂದ ಮನಸ್ಸಿನ ಸಮಾಧಾನ ಹೆಚ್ಚುವುದು.  ಗೌರವ ಹೆಚ್ಚಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ.  


ಇದನ್ನೂ ಓದಿ : Ketu Gochara 2023: ಅಕ್ಟೋಬರ್‌ನಿಂದ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.