ದಿನಭವಿಷ್ಯ 02-01-2025: ಗುರುವಾರದಂದು ಶ್ರವಣ ನಕ್ಷತ್ರದಲ್ಲಿ ಹರ್ಷಣ ಯೋಗ, ಈ ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು
Today Horoscope 02nd January 2025: ಗುರುವಾರದ ಈ ದಿನ ಶ್ರವಣ ನಕ್ಷತ್ರ, ಹರ್ಷಣ ಯೋಗ, ತೈತಿಲ್ ಕರಣ. ಇಂದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ತೃತೀಯ ತಿಥಿ, ಗುರುವಾರದ ಈ ದಿನ ಶ್ರವಣ ನಕ್ಷತ್ರ, ಹರ್ಷಣ ಯೋಗ, ತೈತಿಲ್ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದಿನ ದಿನ ತುಂಬಾ ಒತ್ತದಭರಿತವಾಗಿರುತ್ತದೆ. ಆದಾಗ್ಯೂ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮರೆಯಬೇಡಿ. ದೈಹಿಕ ಚಟುವಟಿಗಳಿಗೆ ಆದ್ಯತೆ ನೀಡಿ. ಶಾಂತ ಮನಸ್ಥಿತಿಗಾಗಿ ಧ್ಯಾನ ಮಾಡುವುದು ಉತ್ತಮ. ದೂರದ ಊರಿಗೆ ಪ್ರಯಾಣಿಸುವಾಗ ಎಚ್ಚರ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ನೀವಿಂದು ಭಾವನಾತ್ಮಕವಾಗಿ ಕುಸಿಯಬಹುದು. ಇದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಸರಿಯಾಗಿ ಯೋಚಿಸಿ ನಿರ್ಧರಿಸಿ. ಸವಾಲುಗಳನ್ನು ಯಶಸ್ಸಿನ ಅವಕಾಶಗಳಾಗಿ ಬಳಸಿಕೊಳ್ಳುವ ಸಾಮರ್ಥ್ಯ ನಿಮ್ಮಲ್ಲಿದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಕೆಲಸ ಸ್ಥಳದಲ್ಲಿ ಸವಾಲುಗಳು ಹೆಚ್ಚಾಗಬಹುದು. ಆದರೆ, ಸವಾಲುಗಳಿಗೆ ಎದೆಯೊಡ್ಡಿ ನಿಂತರೆ ಮಾತ್ರ ಜಯ ಪ್ರಾಪ್ತಿಯಾಗುತ್ತದೆ. ಹೊಸ ಆಲೋಚನೆಗಳು ಕೆಲವು ಚಮತ್ಕಾರಕ್ಕೆ ಕಾರಣವಾಗಬಹುದು. ವೃತ್ತಿ ಬದುಕಿನಲ್ಲಿ ಅತ್ಯಾಕರ್ಷಕ ಅವಕಾಶಗಳನ್ನು ಪಡೆಯುವಿರಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಒತ್ತಡದಿಂದಾಗಿ ಇಂದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ವಿಶ್ರಾಂತಿ ಪಡೆಯಲು ಧ್ಯಾನದ ಮೊರೆ ಹೋಗುವುದು ಉತ್ತಮ. ಇದು ಭಾವನಾತ್ಮಕವಾಗಿ ಸಮತೋಲನ ಕಾಪಾಡಿಕೊಳ್ಳಲು ಕೂಡ ಲಾಭದಾಯಕವಾಗಿದೆ.
ಇದನ್ನೂ ಓದಿ- Baba Vanga Predictions: ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಲಕ್ಷ್ಮಿಕಟಾಕ್ಷ, ಹರಿದು ಬರಲಿದೆ ಸಂಪತ್ತಿನ ಹೊಳೆ...!
ಸಿಂಹ ರಾಶಿಯವರ ಭವಿಷ್ಯ (Leo Horoscope):
ಕೆಲಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಒಳ್ಳೆಯದು. ವೃತ್ತಿ- ವ್ಯವಹಾರದಲ್ಲಿ ಯಶಸ್ಸು ಪಡೆಯಲು ಹೆಚ್ಚಿನ ಶ್ರಮದ ಅಗತ್ಯವಿರುತ್ತದೆ. ಉತ್ತಮ ಭಾವನೆಯೊಂದಿಗೆ ಮಾಡುವ ಕೆಲಸದಲ್ಲಿ ಭಾರೀ ಯಶಸ್ಸನ್ನು ಗಳಿಸುವಿರಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಪೂರ್ವಯೋಜಿತ ಕೆಲಸಗಳಲ್ಲಿ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಹಳೆಯ ಆರೋಗ್ಯ ಸಮಸ್ಯೆಗಳು ಮರುಕಳಿಸಬಹುದು. ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಹೂಡಿಕೆಯಿಂದ ಲಾಭ ಪಡೆಯುವ ಸಾಧ್ಯತೆ ಇದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ಮಾನಸಿಕ ಯೋಗ ಕ್ಷೇಮದ ದೃಷ್ಟಿಯಿಂದ ಕೋಪವನ್ನು ನಿಯಂತ್ರಿಸುವುದು ಉತ್ತಮ. ಮನೆಯಲ್ಲಿ ಮಕ್ಕಳೊಂದಿಗೆ ಸಮಯ ಕಳೆಯುವುದು ಆಹ್ಲಾದಕರವಾಗಿರುತ್ತದೆ. ಬಹುದಿನಗಳ ನಿಮ್ಮ ಕನಸೊಂದು ನನಸಾಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು ವ್ಯಾಯಾಮ, ಧ್ಯಾನದಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ನಿಮ್ಮ ಆಲೋಚನೆಗಳನ್ನು ಧನಾತ್ಮಕವಾಗಿರಿಸಿ. ಹೂಡಿಕೆಗಾಗಿ ಸಮಯ ಸೂಕ್ತವಾಗಿದ್ದು, ಇದರಿಂದ ಭಾರೀ ಲಾಭವನ್ನು ಗಳಿಸುವಿರಿ.
ಇದನ್ನೂ ಓದಿ- 2025ರ ಹೊಸ ವರ್ಷದ ಮೊದಲ ದಿನದಿಂದಲೇ ಈ ಮೂರು ರಾಶಿಗಳಿಗೆ ಅದ್ಭುತ ಯಶಸ್ಸಿನ ಯೋಗವಿದೆ!!
ಧನು ರಾಶಿಯವರ ಭವಿಷ್ಯ (Sagittarius Horoscope):
ಫಿಟ್ನೆಸ್ ಗಾಗಿ ನಿಯಮಿತ ದೈಹಿಕ ಚಟುವಟಿಕೆಗಳನು ಅಳವಡಿಸಿಕೊಳ್ಳಿ. ಪ್ರಮುಖ ಕೆಲಸಗಳಲ್ಲಿ ಹಿರಿಯರ ಸಲಹೆ ಪಡೆಯುವುದನ್ನು ಮರೆಯಬೇಡಿ. ಸದಾ ನಕಾರಾತ್ಮಕವಾಗಿ ಪ್ರತಿಕ್ರಿಯಿಸುವವರಿಂದ ಅಂತರ ಕಾಯ್ದುಕೊಳ್ಳಿ. ನಿಮಗೆ ಇದರ ಅವಶ್ಯಕತೆ ತುಂಬಾ ಇದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಗ್ರಹ ಸ್ಥಿತಿಗತಿಗಳು ನಿಮ್ಮ ಪರವಾಗಿದ್ದು ನೀವು ಜೀವನದಲ್ಲಿ ಹೊಸ ಎತ್ತರವನ್ನು ಏರುವಿರಿ. ನಿಮ್ಮ ದಾರಿಯಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಿ ಹಿಡಿದ ಕೆಲಸಗಳನ್ನು ಸಾಧಿಸುವಿರಿ. ಆರೋಗ್ಯದ ದೃಷ್ಟಿಯಿಂದಲೂ ಇದು ಲಾಭದಾಯಕವಾದ ದಿನ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ವೃತ್ತಿ ಬದುಕಿನಲ್ಲಿ ಎದುರಾಗಿರುವ ಸಮಸ್ಯೆಗಳನ್ನು ನಿವಾರಿಸಲು ಹೊಸ ಹಾದಿಯನ್ನು ಹುಡುಕಿ. ವ್ಯವಹಾರದಲ್ಲಿ ವಿನೂತನವಾದುದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿ. ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಕೆಲಸದಲ್ಲಿ ಇಂದು ಒತ್ತಡ ಹೆಚ್ಚಾಗುವುದರಿಂದ ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ದಿನವಿಡೀ ಸಮತೋಲಿತ ಮನಸ್ಥಿತಿಯನ್ನು ಕಾಪಾಡಿಕೊಳ್ಳಲು ಕೋಪಕ್ಕೆ ಕಡಿವಾಣ ಹಾಕುವುದನ್ನು ಪರಿಗಣಿಸಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.