ಕನಸಿನಲ್ಲಿ ಮಳೆ ಕಂಡರೆ ನಿಮ್ಮ ಜೀವನದಲ್ಲಿ ಹೀಗಾಗುತ್ತದೆಯಂತೆ ! ಸ್ವಪ್ನ ಶಾಸ್ತ್ರದಲ್ಲಿ ಹೇಳಿರುವ ಮಾತಿದು !
Dream Astrology :ನಿದ್ದೆಯಲ್ಲಿ ಕಾಣುವ ಕನಸಿಗೂ ನಿಜ ಜೀವನಕ್ಕೂ ಏನಾದರೂ ಸಂಬಂಧ ಇದೆಯೇ ಎನ್ನುವ ಪ್ರಶ್ನೆ ಕೂಡಾ ಅನೇಕ ಬಾರಿ ಕಾಡುತ್ತದೆ.
Dream Astrology : ಮಲಗಿದ ನಂತರ, ನಮ್ಮ ಮನಸ್ಸು ಕಾಲ್ಪನಿಕ ವಿಷಯಗಳನ್ನು ನೋಡಲು ಪ್ರಾರಂಭಿಸುತ್ತದೆ.ಯಾಕೆಂದರೆ ಈ ಸಮಯದಲ್ಲಿ ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ.ರಾತ್ರಿ ಮಲಗಿದ ನಂತರ,ಕನಸುಗಳು ಬರುತ್ತವೆ. ಆದರೆ ಈ ಕನಸುಗಳು ಯಾಕೆ ಬೀಳುತ್ತವೆ ಎನ್ನುವುದು ಯಾರಿಗೂ ಗೊತ್ತಿಲ್ಲ.ಕೆಲವೊಂದು ಕನಸುಗಳಿಗೆ ಯಾವ ಅರ್ಥವೂ ಇರುವುದಿಲ್ಲ.ಈ ಘಟನೆ ನಿಜ ಜೀವನದಲ್ಲಿ ಘಟಿಸಲು ಸಾಧ್ಯವೇ ಇಲ್ಲ ಎನ್ನುವ ಹಾಗಿರುತ್ತದೆ. ಆದರೆ ನಿದ್ದೆಯಲ್ಲಿ ಕಾಣುವ ಕನಸಿಗೂ ನಿಜ ಜೀವನಕ್ಕೂ ಏನಾದರೂ ಸಂಬಂಧ ಇದೆಯೇ ಎನ್ನುವ ಪ್ರಶ್ನೆ ಕೂಡಾ ಅನೇಕ ಬಾರಿ ಕಾಡುತ್ತದೆ.
ಹೌದು,ರಾತ್ರಿ ಗಾಢ ನಿದ್ರೆಯಲ್ಲಿ ಕಾಣುವ ಕನಸುಗಳಿಗೂ ನಮ್ಮ ನಿಜ ಜೀವನಕ್ಕೂ ಸಂಬಂಧವಿದೆ ಎಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ.ಹಾಗಿದ್ದರೆ ಸ್ವಪ್ನ ಶಾಸ್ತ್ರದ ಪ್ರಕಾರ ನಮಗೆ ಕನಸಿನಲ್ಲಿ ಮಳೆ ಕಂಡರೆ ಅದು ಯಾವ ಸಂಕೇತ ಎನ್ನುವುದನ್ನು ತಿಳಿದುಕೊಳ್ಳೋಣ.
ಇದನ್ನೂ ಓದಿ : ಈ ರಾಶಿಯವರಿಗೆ ಇನ್ನು ಶುಕ್ರದೆಸೆ : ಬೆನ್ನ ಹಿಂದೆಯೇ ಇರುವುದು ಅದೃಷ್ಟ : ಒಲಿದು ಬರುವುದು ಅಷ್ಟೈಶ್ವರ್ಯ
ಕನಸಿನಲ್ಲಿ ಮಳೆ :
ಕನಸಿನ ಶಾಸ್ತ್ರದ ಪ್ರಕಾರ, ನಿಮ್ಮ ಕನಸಿನಲ್ಲಿ ಮಳೆ ಬೀಳುವುದನ್ನು ಕಂಡರೆ ನಿಮ್ಮ ಜೀವನದಲ್ಲಿ ಶೀಘ್ರದಲ್ಲೇ ಸಂತೋಷದ ಕ್ಷಣಗಳು ಬರಲಿವೆ ಎಂದರ್ಥ. ಕನಸಿನಲ್ಲಿ ಧಾರಾಕಾರ ಮಳೆಯನ್ನು ನೋಡುವುದು ಎಂದರೆ, ನಿಮ್ಮ ಜೀವನದಲ್ಲಿ ನೀವು ಎದುರಿಸುತ್ತಿರುವ ಹಣಕಾಸಿನ ಸಮಸ್ಯೆಗಳು ಶೀಘ್ರದಲ್ಲೇ ದೂರವಾಗಲಿವೆ ಎಂದರ್ಥ.
ಮಳೆಯಲ್ಲಿ ಒದ್ದೆಯಾಗಿರುವುದನ್ನು ಕಂಡರೆ :
ಕನಸಿನಲ್ಲಿ ಒದ್ದೆಯಾಗಿದ್ದನ್ನು ಕಂಡರೆ ನೀವು ಮಾಡುವ ಯಾವುದಾದರೂ ಕೆಲಸ ಅರ್ಧಕ್ಕೆ ನಿಂತಿದ್ದರೆ ಅದು ಬೇಗನೆ ಪೂರ್ಣವಾಗುತ್ತದೆ ಎನ್ನುವುದನ್ನು ಸೂಚಿಸುತ್ತದೆ.ಮಾತ್ರವಲ್ಲ ಸಮಾಜದಲ್ಲಿ ಗೌರವವೂ ಹೆಚ್ಚುತ್ತದೆ ಎನ್ನುವುದನ್ನು ತಿಳಿಸುತ್ತದೆ. ಅಲ್ಲದೆ,ಕೆಲಸ ಮಾಡುವವರಿಗೆ ಬಡ್ತಿ ಸಿಗಬಹುದು.
ಇದನ್ನೂ ಓದಿ : Shani Vakri: ಮುಂದಿನ 137 ದಿನಗಳವರೆಗೆ ಈ ರಾಶಿಯವರಿಗೆ ಶನಿ ಕೃಪೆ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್
ಈ ಕನಸು ಕೆಟ್ಟದ್ದಾಗಿರಬಹುದು :
ಕನಸಿನಲ್ಲಿ ನಿಮ್ಮ ಮನೆ ಮಳೆ ನೀರಿನಿಂದ ತುಂಬಿರುವುದನ್ನು ಕಂಡರೆ, ತೊಂದರೆಗೆ ಸಿಲುಕುವ ಸಾಧ್ಯತೆಯನ್ನು ತೋರಿಸುತ್ತದೆ.ಇದಲ್ಲದೆ,ನೀವು ಮಳೆ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡರೂ ಅದು ಶುಭವಲ್ಲ ಎಂದು ಹೇಳಲಾಗಿದೆ.ಒಂದು ವೇಳೆ ನ್ಯಾಯಾಲಯದಲ್ಲಿ ಯಾವುದಾದರೊಂದು ಕೇಸ್ ನಡೆಯುತ್ತಿದ್ದರೆ ಅದರಲ್ಲಿ ನಿಮ್ಮ ಸೋಲು ಖಚಿತ ಎನ್ನುವುದನ್ನು ಇದು ಸೂಚಿಸುತ್ತದೆಯಂತೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.