Horoscope Today September 9 in Kannada: ಇಂದು ಅಂದರೆ ಸೆಪ್ಟೆಂಬರ್ 09 ಎಲ್ಲಾ ರಾಶಿಯವರಿಗೆ ಮಿಶ್ರ ದಿನವಾಗಿರುತ್ತದೆ. ಇಂದು ಕೆಲವು ರಾಶಿಗಳು ವ್ಯಾಪಾರ ಇತ್ಯಾದಿಗಳಲ್ಲಿ ಉತ್ತಮ ಲಾಭವನ್ನು ಪಡೆದರೆ, ಇನ್ನೂ ಕೆಲವರು, ಯಶಸ್ಸನ್ನು ಪಡೆಯುತ್ತಾರೆ. ಜೊತೆಗೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಈ ದಿನದಂದು ಕೆಲ ರಾಶಿಗಳ ಮೇಲೆ ಧನಲಕ್ಷ್ಮೀ ಸಹಿತ ಶನಿ ದೇವನ ಕೃಪೆ ಇರಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮುಂದಿನ 2 ವರ್ಷ ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ: ಇನ್ಮುಂದೆ ತ್ವರಿತ ಯಶಸ್ಸು-ಅಗಾಧ ಸಂಪತ್ತು, ಕೈಹಿಡಿಯುವಳು ತಾಯಿ ಲಕ್ಷ್ಮೀ


ಪಂಚಾಂಗದ ಪ್ರಕಾರ ಇಂದು ಭಾದ್ರಪದ ಮಾಸದ ಕೃಷ್ಣ ಪಕ್ಷದ ದಶಮಿ ತಿಥಿ ಸಂಜೆ 07:17 ರವರೆಗೆ ಇರುತ್ತದೆ. ಈ ದಿನ ಯಾವ ರಾಶಿಗಳಿಗೆ ಒಳ್ಳೆಯದು, ಕೆಟ್ಟದು ಎಂಬುದನ್ನು ತಿಳಿಯೋಣ.


ಮೇಷ ರಾಶಿ: ಇಂದು ನಿಮ್ಮ ದಿನವು ಏರಿಳಿತಗಳಿಂದ ತುಂಬಿರುತ್ತದೆ. ಆರೋಗ್ಯದ ಬಗ್ಗೆ ಚಿಂತಿಸುತ್ತಿರಬಹುದು. ಕಾಲೋಚಿತ ರೋಗಗಳಿಗೆ ಗುರಿಯಾಗಬಹುದು. ಹಳೆಯ ಕೌಟುಂಬಿಕ ಕಲಹಗಳು ಮುನ್ನೆಲೆಗೆ ಬರುತ್ತವೆ. ಇದರಿಂದಾಗಿ ಕುಟುಂಬದಲ್ಲಿ ಮಾನಸಿಕ ಒತ್ತಡದ ಪರಿಸ್ಥಿತಿ ಉಂಟಾಗುತ್ತದೆ.


ವೃಷಭ ರಾಶಿ: ಇಂದು ನಿಮ್ಮ ಮನಸ್ಸು ಚಂಚಲವಾಗಿ ಉಳಿಯುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಕುಸಿತ ಉಂಟಾಗಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರಬಹುದು. ಇಂದು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.


ಮಿಥುನ ರಾಶಿ: ಇಂದು ನೀವು ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಕುಟುಂಬದದ ವಿವಾದಗಳಲ್ಲಿ ಸಿಲುಕಿಕೊಳ್ಳಬಹುದು. ಹೆಂಡತಿ ಮತ್ತು ಮಕ್ಕಳಿಗೆ ಮಾನಸಿಕ ಒತ್ತಡ ಇರುತ್ತದೆ.


ಕರ್ಕಾಟಕ ರಾಶಿ: ಇಂದು ನೀವು ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರದಲ್ಲಿ ಪಾಲುದಾರರು ಮೋಸ ಮಾಡಬಹುದು. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು.


ಸಿಂಹ ರಾಶಿ: ಇಂದು ನಿಮಗೆ ತುಂಬಾ ಒಳ್ಳೆಯ ದಿನವಾಗಲಿದೆ. ವ್ಯಾಪಾರದಲ್ಲಿ ದೊಡ್ಡ ಲಾಭದ ಸಾಧ್ಯತೆಗಳಿವೆ. ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಗೌರವ ಹೆಚ್ಚಾಗಲಿದೆ.


ಕನ್ಯಾ ರಾಶಿ: ಇಂದು ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಆರ್ಥಿಕ ಲಾಭದಿಂದ ಪ್ರಯೋಜನ ಪಡೆಯಲಿದ್ದೀರಿ. ಇಂದು ವ್ಯವಹಾರದಲ್ಲಿ ಲಾಭದ ಅವಕಾಶಗಳಿವೆ. ಪೂರ್ವಿಕರ ಆಸ್ತಿಗೆ ಸಂಬಂಧಿಸಿದಂತೆ ಕುಟುಂಬದಲ್ಲಿ ನಡೆಯುತ್ತಿರುವ ವಿವಾದಗಳು ಕೊನೆಗೊಳ್ಳುತ್ತವೆ.


ತುಲಾ ರಾಶಿ: ಇಂದು ಮಾತಿನಲ್ಲಿ ಸಂಯಮ ಇಟ್ಟುಕೊಂಡು ವಿವಾದಗಳಿಂದ ದೂರವಿರುವುದು ಉತ್ತಮ. ಹೊಸ ಉದ್ಯೋಗ ಆರಂಭಿಸುವ ಯೋಚನೆ ಬರಬಹುದು. ಆದರೆ ಈ ಸಂದರ್ಭದಲ್ಲಿ ಸರಿಯಲ್ಲ. ಕುಟುಂಬದೊಂದಿಗೆ ಭಿನ್ನಾಭಿಪ್ರಾಯದ ಪರಿಸ್ಥಿತಿ ಇರುತ್ತದೆ.


ವೃಶ್ಚಿಕ ರಾಶಿ: ಇಂದು ವಾಹನ ಚಾಲನೆಯನ್ನು ಎಚ್ಚರಿಕೆಯಿಂದ ಮಾಡಬೇಕು, ದೈಹಿಕ ಆಯಾಸ ಅನುಭವಿಸಬೇಕಾಗುತ್ತದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಕಂಡುಬರುವುದು. ಮಾತಿನ ಮೇಲೆ ಸಂಯಮ ಇಟ್ಟುಕೊಳ್ಳಿ.


ಧನು ರಾಶಿ: ಇಂದು, ನೀವು ಬಹಳ ಸಮಯದಿಂದ ಯೋಚಿಸುತ್ತಿದ್ದ ಕೆಲಸವು ಪೂರ್ಣಗೊಳ್ಳುತ್ತದೆ, ವಿಶೇಷ ವ್ಯಕ್ತಿಯನ್ನು ಭೇಟಿಯಾಗುತ್ತೀರಿ. ಮನಸ್ಸು ಸಂತೋಷದಿಂದ ತುಂಬಿರುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ


ಮಕರ ರಾಶಿ: ಇಂದು ತುಂಬಾ ಬಿಡುವಿಲ್ಲದ ದಿನವಾಗಿರುತ್ತದೆ. ವ್ಯವಹಾರದಲ್ಲಿ ಸಹೋದ್ಯೋಗಿಗಳ ನಡವಳಿಕೆಯು ಉತ್ತಮವಾಗಿರುತ್ತದೆ. ಹಣಕಾಸಿನ ನೆರವು ಪಡೆಯಬಹುದು. ಕುಟುಂಬದಲ್ಲಿ ಹೊಸ ಅತಿಥಿ ಬರಬಹುದು.


ಕುಂಭ ರಾಶಿ: ಇಂದು ನೀವು ಕೆಲವು ವಿಷಯಗಳ ಬಗ್ಗೆ ಅನಗತ್ಯವಾಗಿ ಚಿಂತಿಸುತ್ತಿರಬಹುದು. ಆದರೆ ವ್ಯಾಪಾರದಲ್ಲಿ ಲಾಭ ಇರುತ್ತದೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ


ಮೀನ ರಾಶಿ: ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಗಳಿವೆ. ದೂರ ಪ್ರಯಾಣದ ಯೋಗವಿದೆ.


ಇದನ್ನೂ ಓದಿ:  ಇಂತಹ ಪುರುಷರನ್ನು ಪತಿಯಾಗಿ ಸ್ವೀಕರಿಸಲು ಮಹಿಳೆಯರು ಒಪ್ಪುವುದಿಲ್ಲ, ದ್ವೇಷಿಸುತ್ತಾರೆ!


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.