Horoscope Today (24-09-2022): ಶನಿವಾರದಂದು ವೃಷಭ ರಾಶಿಯ ಜನರು ತಮ್ಮ ವಿವಾದಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ಅದೇ ರೀತಿ ವೃಶ್ಚಿಕ ರಾಶಿಯ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ಮೇಷ ರಾಶಿ: ಈ ರಾಶಿಯವರ ಕಚೇರಿಯ ಕೆಲಸಗಳು ಕಾಲಕಾಲಕ್ಕೆ ಪೂರ್ಣಗೊಳಿಸಬೇಕು. ತೈಲ ವ್ಯಾಪಾರ ಮಾಡುವ ಉದ್ಯಮಿಗಳು ಇಂದು ಉತ್ತಮ ಲಾಭ ಗಳಿಸುವ ಸ್ಥಿತಿಯಲ್ಲಿರುತ್ತಾರೆ. ಕೆಲಸದಲ್ಲಿ ಪ್ರಾಮಾಣಿಕವಾಗಿರುವುದು ಯುವಕರ ಆದ್ಯತೆಯಾಗಬೇಕು. ನಿಗದಿಪಡಿಸಿದ ಕೆಲಸವನ್ನು ಅತ್ಯಂತ ಎಚ್ಚರಿಕೆಯಿಂದ ಮಾಡಿ ಮುಗಿಸಿ. ಅಮ್ಮನ ಸೇವೆ ಮಾಡುವ ಅವಕಾಶ ಸಿಕ್ಕರೆ ನಿಮಗೆ ಪುಣ್ಯ. ಸಮಾಜದ ನಿರ್ಗತಿಕರಿಗೆ ಸಹಾಯ ಮಾಡಿ.  


ವೃಷಭ ರಾಶಿ: ವೃಷಭ ರಾಶಿಯ ಜನರು ತಮ್ಮ ವಿವಾದಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ವ್ಯಾಪಾರಸ್ಥರು ತಮ್ಮ ವ್ಯಾಪಾರ ಸ್ಥಳ, ಗೋದಾಮಿನಲ್ಲಿ ಯಾವುದೇ ರೀತಿಯ ನಷ್ಟವಾಗದಂತೆ ದಾಸ್ತಾನು ಪರಿಶೀಲಿಸುತ್ತಲೇ ಇರುತ್ತಾರೆ. ಯುವಕರು ತಮ್ಮ ನೆಚ್ಚಿನ ಕೆಲಸಕ್ಕೆ ಆದ್ಯತೆ ನೀಡಬೇಕು, ಕಾಲಮಿತಿಯೊಳಗೆ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಕುಟುಂಬದಿಂದ ಕೆಲವು ಉತ್ತಮ ಮಾಹಿತಿ ಪಡೆಯುವ ಸಾಧ್ಯತೆಯಿದೆ. ಆರೋಗ್ಯ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಎಚ್ಚರದಿಂದಿರಬೇಕು. ಆತ್ಮವಿಶ್ವಾಸ ತುಂಬಾ ಒಳ್ಳೆಯದು, ಆದರೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.


ಮಿಥುನ ರಾಶಿ: ಈ ರಾಶಿಯ ಜನರು ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಮಾಡುವ ಪ್ರಯತ್ನಕ್ಕೆ ಪ್ರತಿಫಲ ಸಿಗುತ್ತದೆ. ನಿಮಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಚಿಲ್ಲರೆ ವ್ಯಾಪಾರಿಗಳು ಇಂದು ಉತ್ತಮ ಗ್ರಾಹಕರನ್ನು ಪಡೆಯುವ ಸಾಧ್ಯತೆಯಿದೆ. ಯುವಕರು ತಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಕೋಪ ಸರಿಯಲ್ಲ. ಹೆಚ್ಚುತ್ತಿರುವ ಮನೆಕೆಲಸದ ಹೊರೆ ನಿಮ್ಮನ್ನು ಚಿಂತೆಗೀಡುಮಾಡಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸಮತೋಲಿತ ಮತ್ತು ಪೌಷ್ಟಿಕ ಆಹಾರ ಸೇವಿಸಬೇಕು. ವ್ಯಕ್ತಿತ್ವ ಮತ್ತು ಸೃಜನಶೀಲತೆಯಿಂದ ನಿಮ್ಮ ಸಾಮಾಜಿಕ ಪ್ರಾಬಲ್ಯವು ವೇಗವಾಗಿ ಹೆಚ್ಚಾಗುತ್ತದೆ.


ಕರ್ಕ ರಾಶಿ: ಕರ್ಕಾಟಕ ರಾಶಿಯವರಿಗೆ ಶೀಘ್ರವೇ ಒಳ್ಳೆಯ ಸುದ್ದಿ ಸಿಗಲಿದೆ. ಎಲೆಕ್ಟ್ರಾನಿಕ್ ವ್ಯಾಪಾರಿಗಳಿಗೆ ಉತ್ತಮ ಮಾರಾಟ ಸಾಧ್ಯ. ಯುವಕರು ಯಾವುದೇ ಕಾರಣಕ್ಕೂ ಅಸಮಾಧಾನಗೊಳ್ಳಬಾರದು ಮತ್ತು ಚಿಂತಿಸಬಾರದು. ಸಂಸಾರದಲ್ಲಿ ದಾಯಾದಿಗಳ ಮಧ್ಯೆ ಕಲಹ ಉಂಟಾಗುವ ಸಂಭವವಿದ್ದು, ಜಾಣತನದಿಂದ ವರ್ತಿಸಿದರೆ ದೂರವಾಗಬಹುದು. ಆರೋಗ್ಯದ ವಿಷಯದಲ್ಲಿ ಯಾವುದೇ ರೀತಿಯ ಅಜಾಗರೂಕತೆ ವಹಿಸಬಾರದು. ದೇವರ ದಯೆಯಿಂದ ನಿಮ್ಮ ಎಲ್ಲಾ ಕೆಲಸಗಳು ಸಲಿಸಾಗಿ ನೆರವೇರುತ್ತವೆ.


ಇದನ್ನೂ ಓದಿ: Mole on Body: ನಿಮ್ಮ ದೇಹದ ಈ ಭಾಗದಲ್ಲಿರುವ ಮಚ್ಚೆ ಹೇಳುತ್ತೆ ಜೀವನ ಸಂಗಾತಿಯ ಗುಟ್ಟು!


ಸಿಂಹ ರಾಶಿ: ಈ ರಾಶಿಯ ಜನರು ಕಚೇರಿಯಲ್ಲಿ ತಮ್ಮ ಸಹೋದ್ಯೋಗಿಗಳ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಪಾಲುದಾರಿಕೆ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯಮಿಗಳು ಉತ್ತಮ ಲಾಭ ಗಳಿಸುವ ಅವಕಾಶ ಪಡೆಯುತ್ತಾರೆ. ಯುವಕರು ತಮ್ಮ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಲು ಅವಕಾಶ ಪಡೆಯುತ್ತಾರೆ. ನರಗಳಿಗೆ ಸಂಬಂಧಿಸಿದ ರೋಗಗಳ ಬಗ್ಗೆ ಜಾಗರೂಕರಾಗಿರಿ ಮತ್ತು ವೈದ್ಯರು ಸೂಚಿಸಿದ ಕ್ರಮಗಳನ್ನು ಅನುಸರಿಸಿ.  


ಕನ್ಯಾ ರಾಶಿ: ವಿದೇಶದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಮತ್ತು ಪ್ರಯತ್ನ ಮಾಡುತ್ತಿರುವವರಿಗೆ ಯಶಸ್ಸು ಸಿಗುವ ಸಾಧ್ಯತೆಯಿದೆ. ಪೂರ್ವಿಕರ ವ್ಯವಹಾರದಲ್ಲಿ ಲಾಭ ಸಿಗುವ ಸಂಭವವಿದ್ದು, ಕಠಿಣ ಪರಿಶ್ರಮದ ಜೊತೆಗೆ ಬುದ್ಧಿವಂತಿಕೆಯಿಂದ ವ್ಯವಹಾರ ಮಾಡಬೇಕಾಗುತ್ತದೆ. ಯುವಕರು ಸ್ಥಗಿತಗೊಂಡಿರುವ ಶಿಕ್ಷಣವನ್ನು ಪೂರ್ಣಗೊಳಿಸಬೇಕು, ಉನ್ನತ ಶಿಕ್ಷಣದಿಂದ ಅವಕಾಶಗಳು ಹೆಚ್ಚು ಸಿಗುತ್ತವೆ. ಗುರಿ ಇಟ್ಟುಕೊಂಡು ಕೆಲಸ ಮಾಡಿದ್ರೆ ನೀವು ಖಂಡಿತ ಯಶಸ್ಸನ್ನು ಪಡೆಯುತ್ತೀರಿ.


ತುಲಾ ರಾಶಿ: ಈ ರಾಶಿಯ ಜನರಿಗೆ ಕಚೇರಿಯಲ್ಲಿ ಕೆಲವು ದೊಡ್ಡ ಜವಾಬ್ದಾರಿ ದೊರೆಯಲಿದೆ. ನೀವು ವ್ಯಾಪಾರ ಹೆಚ್ಚಿಸುವ ಬಗ್ಗೆ ಯೋಚಿಸುತ್ತಿದ್ದರೆ ಹಿರಿಯರ ಸಲಹೆ ಪಡೆಯಿರಿ. ಯುವಕರು ಮಹತ್ವದ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಭವಿಷ್ಯಕ್ಕೆ ಉತ್ತಮ. ಎಣ್ಣೆಯುಕ್ತ ಆಹಾರವು ನಿಮಗೆ ಹಾನಿಕಾರಕ.


ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜನರು ತೊಂದರೆ ಎದುರಿಸುತ್ತಿದ್ದರೆ ಎದೆಗುಂದಬೇಡಿ. ಈ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರೆ ಯಶಸ್ಸನ್ನು ಪಡೆಯುತ್ತೀರಿ. ನೀವು ಯಾವುದೇ ವ್ಯವಹಾರ ಮಾಡಿದರೂ ಲಾಭ ಸಿಗಲಿದೆ. ಯುವಕರು ತಾಳ್ಮೆಯಿಂದ ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ. ಕುಟುಂಬ ಸದಸ್ಯರ ಬೆಂಬಲ ಇರುತ್ತದೆ. ಸಂಗಾತಿಯ ಸಂಪೂರ್ಣ ಬೆಂಬಲದೊಂದಿಗೆ ನೀವು ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ. ಧನು ರಾಶಿ: ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಧನಲಾಭದ ಸಾಧ್ಯತೆ ಇದೆ. ಕಾಸ್ಮೆಟಿಕ್ಸ್ ಉದ್ಯಮಿಗಳು ಇಂದು ಉತ್ತಮ ಲಾಭ ಗಳಿಸಲು ಸಾಧ್ಯವಾಗುತ್ತದೆ. ಕುಟುಂಬದ ಸದಸ್ಯರ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲಿ ಎಲ್ಲರೂ ಜಾಗೃತರಾಗಬೇಕು. ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ನಿಯಮಗಳನ್ನು ಪಾಲಿಸಬೇಕು. ನಿಮಗೆ ಹಠಾತ್ ಪ್ರಯೋಜನಗಳು ಸಿಗುವ ಸಾಧ್ಯತೆಯಿದೆ.


ಇದನ್ನೂ ಓದಿ: Unmarried Life: ದೀರ್ಘಕಾಲ ಒಂಟಿಯಾಗಿ ಬಾಳುವುದು ನಿಮ್ಮ ಜೀವಕ್ಕೆ ಕುತ್ತು ತರಬಹುದು ಎಚ್ಚರ!


ಮಕರ ರಾಶಿ: ಮಕರ ರಾಶಿಯವರು ಕಚೇರಿಯಲ್ಲಿ ಸಮಯ ಹಾಳು ಮಾಡದೆ ತಮ್ಮ ಕೆಲಸದ ಕಡೆ ಗಮನ ಹರಿಸಿದರೆ ಸೂಕ್ತ. ಈ ರಾಶಿಯ ವ್ಯಾಪಾರಿಗಳು ಗ್ರಾಹಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮನೆಯ ವಾತಾವರಣ ತುಂಬಾ ಗಂಭೀರವಾಗಲು ಬಿಡಬೇಡಿ. ನಿಮಗೆ ಕ್ಯಾಲ್ಸಿಯಂ ಸಮಸ್ಯೆ ಇರಬಹುದು, ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳು ದುರ್ಬಲವಾಗುತ್ತವೆ. ಹೀಗಾಗಿ ಆರೋಗ್ಯದ ಬಗ್ಗೆ ಗಮನಹರಿಸಿ. ಕಷ್ಟಪಟ್ಟು ದುಡಿದ ಹಣವನ್ನು ಅನಗತ್ಯ ಕೆಲಸಗಳಿಗೆ ಖರ್ಚು ಮಾಡಬೇಡಿ.


ಕುಂಭ ರಾಶಿ: ಈ ರಾಶಿಯ ಜನರು ತಾಂತ್ರಿಕ ಸಂಬಂಧಿತ ಕೆಲಸಗಳಲ್ಲಿ ಜಾಗರೂಕರಾಗಿರಬೇಕು. ಚಿಲ್ಲರೆ ವ್ಯಾಪಾರಿಗಳ ಲಾಭವು ಇಂದು ಕಡಿಮೆಯಾಗುವ ನಿರೀಕ್ಷೆಯಿದೆ. ನಿಮಗೆ ಉತ್ತಮ ಲಾಭವನ್ನು ಗಳಿಸುವ ಸಮಯ ಬರುತ್ತದೆ. ಕೆಲಸವನ್ನು ಹೊರೆ ಎಂದು ಪರಿಗಣಿಸಬೇಡಿ, ಅದನ್ನು ಆನಂದಿಸಿ ಪೂರ್ಣ ಸಂತೋಷದಿಂದ ಮಾಡಿದರೆ ಉತ್ತಮ. ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರಿ ಮತ್ತು ಯಾವುದೇ ಸಮಸ್ಯೆಯಿದ್ದರೆ ವೈದ್ಯರನ್ನು ಸಂಪರ್ಕಿಸಿ. ಗೋವಿನ ಸೇವೆ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ, ಸಮಾಜದಲ್ಲಿ ವಯಸ್ಸಾದ ಮಹಿಳೆಯರ ಸೇವೆಯಿಂದ ಹಿಂದೆ ಸರಿಯಬಾರದು.


ಮೀನ ರಾಶಿ: ಈ ರಾಶಿಯ ಜನರಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ವ್ಯಾಪಾರದಲ್ಲಿ ನಿಮಗೆ ಉತ್ತಮ ಲಾಭ ದೊರೆಯಲಿದೆ. ಯುವಕರು ಗುರಿ ಸಾಧಿಸಲು ಪ್ರಯತ್ನಿಸಬೇಕು. ಕೌಟುಂಬಿಕ ಕಾರ್ಯಕ್ರಮವಿದ್ದರೆ ನೀವೂ ಅದರಲ್ಲಿ ಭಾಗವಹಿಸಬೇಕು, ಖುಷಿಯಿಂದ ಇರಬೇಕು. ಆರೋಗ್ಯದ ದೃಷ್ಟಯಿಂದ ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡಬೇಕು.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.