Unmarried Life: ದೀರ್ಘಕಾಲ ಒಂಟಿಯಾಗಿ ಬಾಳುವುದು ನಿಮ್ಮ ಜೀವಕ್ಕೆ ಕುತ್ತು ತರಬಹುದು ಎಚ್ಚರ!

ಇತ್ತೀಚಿನ ದಿನಗಳಲ್ಲಿ ಅನೇಕ ಯುವಜನರು ಮದುವೆಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಅವಿವಾಹಿತರಾಗಿ ಉಳಿಯಲು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬದುಕಲು ಇದು ಸರಿಯಾದ ಮಾರ್ಗವೇ? ಈ ಕುರಿತ ತಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Sep 24, 2022, 06:35 AM IST
  • ಒಂಟಿಯಾಗಿ ಬದುಕುವ ಯುವಕರು ಸಮಸ್ಯೆಗೆ ಪರಿಹಾರ ಸಿಗದಿದ್ದಾಗ ಅಸಮಾಧಾನಗೊಳ್ಳುತ್ತಾರೆ
  • ಏಕಾಂಗಿ ಮನಸ್ಥಿತಿ ಹೊಂದಿರುವ ಯುವಕರು ಸಮಾಜದಲ್ಲಿ ಜನರೊಂದಿಗೆ ಬೆರೆಯುವುದನ್ನು ನಿಲ್ಲಿಸುತ್ತಾರೆ
  • ಒಂಟಿ ಜೀವನ ನಡೆಸುವ ಜನರಲ್ಲಿ ಹೊಂದಾಣಿಕೆ ಮನೋಭಾವ ಇರುವುದಿಲ್ಲ
Unmarried Life: ದೀರ್ಘಕಾಲ ಒಂಟಿಯಾಗಿ ಬಾಳುವುದು ನಿಮ್ಮ ಜೀವಕ್ಕೆ ಕುತ್ತು ತರಬಹುದು ಎಚ್ಚರ! title=
Disadvantages of Being Single

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರಲ್ಲಿ ಒಂಟಿಯಾಗಿರುವ ಪ್ರವೃತ್ತಿ ಹೆಚ್ಚುತ್ತಿದೆ. ಇದಕ್ಕೆ ಕಾರಣ ಅವರು ತಮ್ಮ ಜೀವನದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದೆಂದು ಬಯಸುತ್ತಾರೆ. ತಮ್ಮ ವೈಯಕ್ತಿಕ ಜೀವನಕ್ಕೆ ಯಾರೂ ಅಡ್ಡಿಪಡಿಸುವುದನ್ನು ಅವರು ಬಯಸುವುದಿಲ್ಲ. ಇದರಿಂದ ಮದುವೆಯಾಗದೆ ಒಂಟಿ ಜೀವನ ಸಾಗಿಸುತ್ತಿರುತ್ತಾರೆ. ಮದುವೆ ಹೆಸರು ತೆಗೆದರೆ ಸಾಕು ಯಾವುದೋ ನೆಪ ಹೇಳಿ ಓಡಿಹೋಗುತ್ತಾರೆ. ವಾಸ್ತವವಾಗಿ ಇಂತವರು ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳಲು ಹೆದರುತ್ತಾರೆ. ಇಂತಹವರು ತಮ್ಮ ಸ್ವಾತಂತ್ರ್ಯ ಕಳೆದುಕೊಳ್ಳುವ ಭಯದಲ್ಲಿರುತ್ತಾರೆ. ಆದರೆ ಬದುಕಲು ಇದು ಸರಿಯಾದ ಮಾರ್ಗವೇ? ಈ ಪ್ರವೃತ್ತಿಯ ಎಲ್ಲಾ ಅಂಶಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಅಜ್ಞಾತ ಭಯ!

ಸಂಬಂಧ ತಜ್ಞರ ಪ್ರಕಾರ, ತಮ್ಮ ಜೀವನದಲ್ಲಿ ಏಕಾಂಗಿಯಾಗಿ ಉಳಿಯಲು ನಿರ್ಧರಿಸುವ ಯುವಜನರು ಭಾವನಾತ್ಮಕವಾಗಿ ದುರ್ಬಲರಾಗುತ್ತಾರೆ. ಇಂತಹ ಜನರು ತಮ್ಮ ಮೇಲೆ ವಿಶ್ವಾಸ ಹೊಂದಿರುವುದಿಲ್ಲ ಮತ್ತು ಇವರು ಯಾವಾಗಲೂ ಕೆಲವು ವಿಷಯಗಳಿಗೆ ಹೆದರುತ್ತಾರೆ. ಇವರಲ್ಲಿ ಜೀವನದ ಬಗ್ಗೆ ಹತಾಶೆ ಮತ್ತು ಭಯ ಇರುತ್ತದ. ಇಂತಹ ಜನರು ಸಂತೋಷವಾಗಿರುವಂತೆ ನಟಿಸುತ್ತಾರೆ ಆದರೆ ಒಳಗೆ ಅವರು ಕ್ರಮೇಣ ದುರ್ಬಲರಾಗುತ್ತಾರೆ. ಒಂಟಿ ವ್ಯಕ್ತಿಗಳು ಬಹುಬೇಗ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.

ಇದನ್ನೂ ಓದಿ: ʼಪ್ರೀತಿ ಮಾಯೆ ಹುಷಾರುʼ : ಲವ್‌ ಫೈಲ್ಯೂರ್‌ ಆಗಿದ್ರೆ ಹೀಗೆ ಮಾಡಿ..!

ಸಣ್ಣ ಸಣ್ಣ  ವಿಷಯಗಳಿಗೆ ಕೋಪ 

ಮದುವೆಯಾಗದೆ ಒಂಟಿಯಾಗಿ ಬದುಕುವ ಯುವಕರು ತಮ್ಮ ಜೀವನದ ಸಣ್ಣ-ದೊಡ್ಡ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳಬೇಕು. ಸಮಸ್ಯೆಗೆ ಪರಿಹಾರ ಸಿಗದಿದ್ದಾಗ ಅವರು ಅಸಮಾಧಾನಗೊಳ್ಳುತ್ತಾರೆ. ಇಂತಹವರು ಒಂಟಿಯಾಗಿರುವುದರಿಂದ, ಅವರಿಗೆ ಸರಿಯಾದ ಸಲಹೆ ಮತ್ತು ಬೆಂಬಲ ನೀಡಲು ಯಾರೂ ಇರುವುದಿಲ್ಲ. ಇದರ ಪರಿಣಾಮವೆಂದರೆ ಅವರು ಸಣ್ಣ ಸಣ್ಣ  ವಿಷಯಗಳಿಗೆ ಬೇಜಾರು ಮಾಡಿಕೊಳ್ಳುತ್ತಾರೆ. ಕುಟುಂಬದವರು ತನಗೆ ಅನ್ಯಾಯ ಮಾಡಿದ್ದಾರೆಂದು ಅವರು ಭಾವಿಸುತ್ತಾರೆ. ಅವರು ತಮ್ಮ ಪ್ರತಿಯೊಂದು ವೈಫಲ್ಯಕ್ಕೂ ಇತರ ಕುಟುಂಬ ಸದಸ್ಯರನ್ನು ದೂಷಿಸಲು ಪ್ರಾರಂಭಿಸುತ್ತಾರೆ.

ಕುಟುಂಬದಲ್ಲಿ ಹೆಚ್ಚಿನವರು ದೂರವಾಗುತ್ತಾರೆ

ಏಕಾಂಗಿಯಾಗಿದ್ದು ಕುಟುಂಬದ ಜವಾಬ್ದಾರಿ ತಪ್ಪಿಸಿಕೊಳ್ಳುವ ಯುವಕರು ಸಮಾಜದಲ್ಲಿ ಜನರೊಂದಿಗೆ ಬೆರೆಯುವುದನ್ನು ನಿಲ್ಲಿಸುತ್ತಾರೆ. ಇವರು ಜನರ ಸಂತೋಷ ಮತ್ತು ದುಃಖದಲ್ಲಿ ಭಾಗಿಯಾಗುವುದಿಲ್ಲ ಮತ್ತು ಯಾವುದೇ ಸಂಬಂಧದಲ್ಲಿ ಸುಲಭವಾಗಿ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮವೆಂದರೆ ಕ್ರಮೇಣ ಅವರು ಕುಟುಂಬ ಮತ್ತು ಸಮಾಜ ಎರಡರಿಂದಲೂ ದೂರ ಹೋಗುತ್ತಾರೆ. ಒಂಟಿಯಾಗಿರುವುದು ಅವರನ್ನು ಕೆರಳಿಸುತ್ತದೆ. ಅವರು ತೊಂದರೆಗೆ ಸಿಲುಕಿದಾಗ, ಅವರ ಕೆಟ್ಟ ನಡವಳಿಕೆಯಿಂದಾಗಿ ಯಾರೂ ಅವರಿಗೆ ಸಹಾಯ ಮಾಡಲು ಮುಂದೆ ಬರುವುದಿಲ್ಲ.

ಇದನ್ನೂ ಓದಿ: Mole on Body: ನಿಮ್ಮ ದೇಹದ ಈ ಭಾಗದಲ್ಲಿರುವ ಮಚ್ಚೆ ಹೇಳುತ್ತೆ ಜೀವನ ಸಂಗಾತಿಯ ಗುಟ್ಟು!

ಸಂಬಂಧಗಳಲ್ಲಿ ಹೊಂದಾಣಿಕೆ ಸಾಧ್ಯವಿಲ್ಲ

ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆಯಿಂದ ಇರಬೇಕು. ಇದಕ್ಕಾಗಿ ಸಂಸಾರದಲ್ಲಿ ಒಟ್ಟಾಗಿ ಕೆಲಸ ಮಾಡಿ ಪರಸ್ಪರರ ವಿಷಯಗಳನ್ನು ಹಂಚಿಕೊಳ್ಳಬೇಕು. ಆದರೆ ಒಂಟಿಯಾಗಿರುವ ಅಭ್ಯಾಸ ಅಳವಡಿಸಿಕೊಂಡ ಜನರಲ್ಲಿ ಈ ಹೊಂದಾಣಿಕೆ ಪ್ರವೃತ್ತಿ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದ ಇತರ ಜನರೊಂದಿಗೆ ಒಂಟಿಯಾಗಿರಬಯಸುವ ಜನರು ಸುಲಭವಾಗಿ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ಸಂಬಂಧದಲ್ಲಿ ಬಿರುಕು ಹೆಚ್ಚುತ್ತಲೇ ಹೋಗುತ್ತದೆ.

ಅಕಾಲಿಕ ಮರಣದ ಅಪಾಯ!

ದೀರ್ಘ ಕಾಲದವರೆಗೆ ಒಂಟಿಯಾಗಿರುವುದರಿಂದ ಅಂದರೆ ಅವಿವಾಹಿತ ಜೀವನದಿಂದ ಅಕಾಲಿಕ ಮರಣದ ಅಪಾಯವೂ ಹೆಚ್ಚು ಎಂಬುದು ಹಲವು ಸಂಶೋಧನೆಗಳಲ್ಲಿ ಬಹಿರಂಗವಾಗಿದೆ. ಇದಕ್ಕೆ ಕಾರಣವೆಂದರೆ ಒಂಟಿಯಾಗಿ ವಾಸಿಸುವ ಹೆಚ್ಚಿನ ಜನರು ಅಧಿಕ ರಕ್ತದೊತ್ತಡ, ಅಧಿಕ ಬಿಪಿ ಮತ್ತು ಖಿನ್ನತೆಯ ರೋಗಿಗಳಾಗುತ್ತಾರೆ. ಈ 3 ರೋಗಗಳು ಅವರನ್ನು ಕ್ರಮೇಣ ಸಾವಿನ ದವಡೆಗೆ ದೂಡುತ್ತದೆ. ಮದುವೆಯಾದರೆ ಕುಟುಂಬದ ಇತರ ಸದಸ್ಯರು ಜೊತೆಗೆ ಖುಷಿ ಖುಷಿಯಾಗಿ ಒತ್ತಡದಿಂದ ಹೊರಬರಬಹುದು. ಆಗ ಆ ವ್ಯಕ್ತಿಯು ದೀರ್ಘಾಯುಷ್ಯ ಹೊಂದಲು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News