Tulsi Tips: ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ಹೇಳಲ್ಪಡುವ ತುಳಸಿ ಸಸ್ಯಕ್ಕೆ ತುಂಬಾ ಮಹತ್ವವಿದೆ. ಧರ್ಮಗ್ರಂಥಗಳ ಪ್ರಕಾರ, ತುಳಸಿ ಸಸ್ಯದಲ್ಲಿ ಸಂಪತ್ತಿನ ದೇವತೆಯಾದ ತಾಯಿ ಮಹಾಲಕ್ಷ್ಮೀ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಮಾತ್ರವಲ್ಲ, ಯಾರ ಮನೆಯಲ್ಲಿ ನಿತ್ಯ ತುಳಸಿ ಸಸ್ಯವನ್ನು ಪೂಜಿಸಲಾಗುತ್ತದೆಯೋ ಅಂತಹ ಮನೆಯಲ್ಲಿ ಸಂಪತ್ತಿನ ಅಧಿದೇವತೆ ತಾಯಿ ಮಹಾಲಕ್ಷ್ಮೀ ಸದಾ ನೆಲೆಸಿರುತ್ತಾಳೆ ಎಂಬ ನಂಬಿಕೆಯೂ ಇದೆ. 


COMMERCIAL BREAK
SCROLL TO CONTINUE READING

ತುಳಸಿ ಸಸ್ಯಕ್ಕೆ ಭಕ್ತಿಯಿಂದ ಪೂಜಿಸುವ, ನಿತ್ಯ ಸಂಧ್ಯಾ ಸಮಯದಲ್ಲಿ ತುಳಸಿ ಮಾತೆಗೆ  ದೀಪ ಬೆಳಗಿಸುವ ಮನೆಯಲ್ಲಿ ಎಂದಿಗೂ ಕೂಡ ಯಾವುದೇ ದುಷ್ಟ ಶಕ್ತಿಯ ಪ್ರವೇಶವಾಗುವುದಿಲ್ಲ. ಅಷ್ಟೇ ಅಲ್ಲದೆ, ಅಂತಹ ಮನೆಯಲ್ಲಿ ಸುಖ-ಸಂತೋಷ, ಹಣ, ಸಂಪತ್ತಿಗೆ ಕೊರತೆಯೇ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಕೆಲವೊಮ್ಮೆ, ನಾವು ಎಷ್ಟೇ ಭಕ್ತಿಯಿಂದ ಪೂಜಿಸಿದರೂ, ವಿನಾಕಾರಣ ತುಳಸಿ ಸಸ್ಯ ಒಣಗುತ್ತದೆ. ಮನೆಯಲ್ಲಿ ತುಳಸಿ ಸಸ್ಯ ಒಣಗುವುದನ್ನು ಅಶುಭ, ಅಮಂಗಳಕರ ಎಂತಲೂ ಬಣ್ಣಿಸಲಾಗುತ್ತದೆ. ಇದಕ್ಕೆ ನಾವು ಮಾಡುವ ಕೆಲವು ತಪ್ಪುಗಳು ಕೂಡ ಕಾರಣ ಎಂದು ನಿಮಗೆ ತಿಳಿದಿದೆಯೇ? 


ಇದನ್ನೂ ಓದಿ- Tulsi Remedis: ಒಣಗಿದ ತುಳಸಿ ಸಸ್ಯದಿಂದ ನಿಮ್ಮ ಖಜಾನೆಯನ್ನೂ ತುಂಬಿಸಬಹುದು 


ನಿಮಗೆ ಗೊತ್ತೋ, ಗೊತ್ತಿಲ್ಲದೆಯೋ ತುಳಸಿ ಸಸ್ಯದ ಬಳಿ ಇಡುವ ಕೆಲವು ವಸ್ತುಗಳಿಂದಾಗಿ ನಿಮ್ಮ ಬದುಕಿನಲ್ಲಿ ಬಿರುಗಾಳಿ ಏಳಬಹುದು. ಇದು ಬದುಕಿನ ಅವನತಿಗೂ ಕಾರಣವಾಗಲೂಬಹುದು ಎಂದು ಹೇಳಲಾಗುತ್ತದೆ. ಅಷ್ಟಕ್ಕೂ ತುಳಸಿ ಸಸ್ಯದ ಬಳಿ ಏನನ್ನು ಇಡಬಾರದು. ಜ್ಯೋತಿಷ್ಯದಲ್ಲಿ ಅಂತಹ ಕೆಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ. ಹಾಗಿದ್ದಾರೆ ಯಾವ ವಸ್ತುಗಳನ್ನು ತುಳಸಿ ಸಸ್ಯದ ಬಳಿ ಇಟ್ಟರೆ ಅಶುಭ ಎಂದು ತಿಳಿಯೋಣ... 


ಈ ವಸ್ತುಗಳನ್ನು ಅಪ್ಪಿತಪ್ಪಿಯೂ ತುಳಸಿ ಬಳಿ ಇಡಲೇಬಾರದು: 
ತ್ರಿಮೂರ್ತಿಗಳಲ್ಲಿ ಶಿವನೂ ಕೂಡ ಒಬ್ಬ. ಭಕ್ತರು ಭಕ್ತಿಯಿಂದ ಮನಸ್ಸಿನಲ್ಲಿ ನೆನೆದರೆ ಸಾಕು ಭಕ್ತರ ಕಷ್ಟಗಳನ್ನು ಕರಗಿಸುವ ದಯಾಮಯಿ ಶಿವ. ಆದರೆ, ಎಂದಿಗೂ ಕೂಡ ಶಿವನ ವಿಗ್ರಹವಾಗಲಿ ಅಥವಾ ಶಿವನಿಗೆ ಪ್ರಿಯವಾದ ವಸ್ತುಗಳನ್ನೇ ಆಗಲಿ ತುಳಸಿ ಸಸ್ಯದ ಬಳಿ ಇಡಬಾರದು ಎಂದು ನಿಮಗೆ ತಿಳಿದಿದೆಯೇ? 


ಇದನ್ನೂ ಓದಿ- ಈ ವರ್ಷ ತುಳಸಿ ವಿವಾಹದಂದು ಅದ್ಭುತ ಶುಭ ಯೋಗ


ಧರ್ಮಶಾಸ್ತ್ರಗಳ ಪ್ರಕಾರ, ತುಳಸಿಯನ್ನು ವಿಷ್ಣು ಪ್ರಿಯೆ ಎಂದು ಹೇಳಲಾಗುತ್ತದೆ. ತುಳಸಿಯ ಜನ್ಮನಾಮ ವೃಂದಾ ಮತ್ತು ಅವಳು ಜಲಂಧರ್ ಎಂಬ ರಾಕ್ಷಸನ ಹೆಂಡತಿ. ಜಲಂಧರನ ದೌರ್ಜನ್ಯವನ್ನು ಕಂಡ ಶಿವನು ಆತನನ್ನು ಕೊಲ್ಲುತ್ತಾನೆ. ಹಾಗಾಗಿ, ತುಳಸಿಗೆ ಶಿವನನ್ನು ಕಂಡರೆ ಆಗುವುದಿಲ್ಲ ಎಂಬುದು ನಂಬಿಕೆಯಾಗಿದೆ. ತುಳಸಿ ಸಸ್ಯದ ಬಳಿ ಶಿವಲಿಂಗವನ್ನು ಇಲ್ಲವೇ ಶಿವನಿಗೆ ಪ್ರಿಯವಾದ ಪತ್ರಗಳನ್ನು ಇಡುವುದರಿಂದ ತುಳಸಿ ಸಸ್ಯಕ್ಕೆ ನೀರು ಅರ್ಪಿಸಿದಾಗ ಎರಡಕ್ಕೂ ಒಂದೇ ಸಮಯದಲ್ಲಿ ನೀರನ್ನು ಅರ್ಪಿಸಲಾಗುತ್ತದೆ. ಇದು ಲಕ್ಷ್ಮೀ ಸ್ವರೂಪಿಣಿಯಾದ ತುಳಸಿಯ ಕೋಪಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ನೆಮ್ಮದಿಗೆ ಭಂಗವಾಗುತ್ತದೆ. ಅಂತಹ ಮನೆಯಲ್ಲಿ ಸುಖ-ಶಾಂತಿ ಎಂಬುದೇ ಕಣ್ಮರೆಯಾಗುತ್ತದೆ ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.