ಈ ವರ್ಷ ತುಳಸಿ ವಿವಾಹದಂದು ಅದ್ಭುತ ಶುಭ ಯೋಗ

Tulsi Vivah: ಹಿಂದೂ ಧರ್ಮದಲ್ಲಿ ತುಳಸಿ ವಿವಾಹಕ್ಕೆ ಬಹಳ ಪ್ರಾಮುಖ್ಯತೆ ಇದೆ. ಧರ್ಮ ಶಾಸ್ತ್ರಗಳ ಪ್ರಕಾರ, ಆ ತುಳಸಿ ವಿವಾಹದೊಂದಿಗೆ ಮಂಗಳಕರ ಕಾರ್ಯಗಳು ಆರಂಭವಾಗುತ್ತವೆ. ಈ ವರ್ಷ ತುಳಸಿ ವಿವಾಹದಂದು ಅದ್ಭುತ ಯೋಗ ನಿರ್ಮಾಣವಾಗುತ್ತಿದೆ.

Written by - Yashaswini V | Last Updated : Jun 23, 2023, 12:32 PM IST
  • ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ತುಳಸಿ ವಿವಾಹವನ್ನು ಮಾಡಲಾಗುತ್ತದೆ.
  • ತುಳಸಿಯನ್ನು ಸಂಪತ್ತಿನ ದೇವತೆ ಎಂದು ಬಣ್ಣಿಸುವುದೂ ಉಂಟು.
  • ಈ ವರ್ಷ ತುಳಸಿ ವಿವಾಹ ಯಾವಾಗ?
ಈ ವರ್ಷ ತುಳಸಿ ವಿವಾಹದಂದು ಅದ್ಭುತ ಶುಭ ಯೋಗ  title=

Tulsi Vivah 2023 Date Time: ಹಿಂದೂ ಧರ್ಮದಲ್ಲಿ ದೇವಶಯಾನಿ ಏಕಾದಶಿ, ದೇವುತಾನಿ ಏಕಾದಶಿ ಮತ್ತು ತುಳಸಿ ವಿವಾಹವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವುತನಿ ಏಕಾದಶಿಯಂದು ಮಾತ್ರ  ಭಗವಾನ್ ವಿಷ್ಣುವು ಯೋಗನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಬಳಿಯಕ ದ್ವಾದಶಿ ತಿಥಿಯಂದು ಭಗವಾನ್ ವಿಷ್ಣು ಮತ್ತು ತುಳಸಿ ದೇವಿ ವಿವಾಹವಾಗುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿಯೇ, ಹಿಂದೂ ಧರ್ಮದಲ್ಲಿ ತುಳಸಿ ವಿವಾಹಕ್ಕೆ ಬಹಳ ಪ್ರಾಮುಖ್ಯತೆ ಇದೆ. ಇನ್ನೊಂದು ನಂಬಿಕೆಗಳ ಪ್ರಕಾರ, ತುಳಸಿ ವಿವಾಹದ ದಿನ  ದಿನ ಪ್ರತಿ ಮನೆಯಲ್ಲೂ ಶಾಲಿಗ್ರಾಮ-ತುಳಸಿ ಮದುವೆ ನಡೆಯುತ್ತದೆ. ಇದನ್ನು ಮಾಡುವುದರಿಂದ ಹೆಚ್ಚಿನ ಪ್ರಯೋಜನಗಳು ಲಭ್ಯವಾಗಲಿದ್ದು, ಅಂತಹ ಕುಟುಂಬದಲ್ಲಿ ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಬಹುದು ಎಂಬ ನಂಬಿಕೆಯಿದೆ. 

ಈ ವರ್ಷ ತುಳಸಿ ವಿವಾಹ ಯಾವಾಗ? 
ಈ ವರ್ಷ (2023) 23 ನವೆಂಬರ್ 2023 ರಂದು  ದೇವುತನಿ ಏಕಾದಶಿ ಇರಲಿದ್ದು ಇದರ ಮರುದಿನ ಎಂದರೆ 24 ನವೆಂಬರ್ 2023 ರಂದು ತುಳಸಿ ವಿವಾಹವು ನಡೆಯಲಿದೆ.  ಧರ್ಮ ಶಾಸ್ತ್ರಗಳ ಪ್ರಕಾರ, ಆ ತುಳಸಿ ವಿವಾಹದೊಂದಿಗೆ ಮಂಗಳಕರ ಕಾರ್ಯಗಳು ಆರಂಭವಾಗುತ್ತವೆ. ಈ ವರ್ಷ ತುಳಸಿ ವಿವಾಹದಂದು ಅದ್ಭುತ ಯೋಗ ನಿರ್ಮಾಣವಾಗುತ್ತಿದೆ. ಹಾಗಾಗಿ,  24 ನವೆಂಬರ್ 2023ರ ನಂತರವಷ್ಟೇ ಮದುವೆಯಂತಹ ಮಂಗಳ ಕಾರ್ಯಗಳಿಗೆ ಶುಭ ದಿನಗಳು ಆರಂಭವಾಗಳಿವೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Sun Transit: ಜುಲೈ 17ರವರೆಗೆ ಈ ಮೂರು ರಾಶಿಯವರ ಮೇಲೆ ಸೂರ್ಯದೇವನ ಆಶೀರ್ವಾದ, ಕೈತುಂಬಾ ಹಣ

ಈ ವರ್ಷ ತುಳಸಿ ವಿವಾಹದಂದು ನಿರ್ಮಾಣಗೊಳ್ಳುತ್ತಿದೆ ಅದ್ಭುತ ಶುಭ ಯೋಗ: 
ಹಿಂದೂ ಪಂಚಾಂಗದ ಪ್ರಕಾರ, ಕಾರ್ತಿಕ ಶುಕ್ಲ ದ್ವಾದಶಿ ತಿಥಿಯು ನವೆಂಬರ್ 23, 2023 ರಂದು ಸಂಜೆ 5.09 ರಿಂದ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 24, ಶುಕ್ರವಾರದಂದು ರಾತ್ರಿ 7.45 ಕ್ಕೆ ಕೊನೆಗೊಳ್ಳುತ್ತದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ತುಳಸಿ ವಿವಾಹವನ್ನು ಮಾಡಲಾಗುತ್ತದೆ. ತಾಯಿ ಲಕ್ಷ್ಮಿಯ ಅವತಾರ ಎಂದು ಪರಿಗಣಿಸಲಾಗುವುದು. ಈ ವರ್ಷ ತುಳಸಿ ವಿವಾಹವು 24 ನವೆಂಬರ್ 2023, ಶುಕ್ರವಾರದಂದು ಇರಲಿದೆ. ಹಾಗಾಗಿ, ಸಂಪತ್ತಿನ ದೇವತೆಗೆ ಮೀಸಲಾದ ಶುಕ್ರವಾರದ ದಿನ ಶುಭ ಯೋಗದಲ್ಲಿ ಮನೆಯಲ್ಲಿ ಶಾಲಿಗ್ರಾಮ್-ತುಳಸಿ ವಿವಾಹವನ್ನು ಮಾಡುವುದರಿಂದ ಅಪಾರ ಧನ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. 

ಇದನ್ನೂ ಓದಿ- Budhaditya RajYoga: ಈ ರಾಶಿಯವರಿಗೆ ಪ್ರಾಪ್ತಿಯಾಗಲಿದೆ ಅಪಾರ ಧನ ಸಂಪತ್ತು

ತುಳಸಿ ವಿವಾಹ 2023ರ ಮುಹೂರ್ತ: 

  • 24 ನವೆಂಬರ್ 2023 ರ ಶುಕ್ರವಾರದಂದು ಬೆಳಿಗ್ಗೆ 11.43 ರಿಂದ 12.26 ರವರೆಗೆ  ತುಳಸಿ ವಿವಾಹಕ್ಕೆ ಅಭಿಜಿತ್ ಮುಹೂರ್ತವು ಪ್ರಾಶಸ್ತ್ಯವಾಗಿದೆ.
  • ಮತ್ತೊಂದೆಡೆ, ತುಳಸಿ ವಿವಾಹಕ್ಕೆ ವಿಜಯ್ ಮುಹೂರ್ತವು 24 ನವೆಂಬರ್ 2023 ರಂದು ಶುಕ್ರವಾರ ಮಧ್ಯಾಹ್ನ 1.54 ರಿಂದ 2.38 ರವರೆಗೆ ಇರುತ್ತದೆ. 

ಈ ಶುಭ ಸಮಯದಲ್ಲಿ ನೀವು ನಿಮ್ಮ ಮನೆಯಲ್ಲಿ ಶಾಲಿಗ್ರಾಮ ಮತ್ತು ತಾಯಿ ತುಳಸಿಯ ವಿವಾಹ ಕಾರ್ಯವನ್ನು ನೆರವೇರಿಸುವುದನ್ನು ಅತ್ಯಂತ ಶುಭಕರ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News