Dream Meaning : ಸ್ವಪ್ನ ಶಾಸ್ತ್ರದಲ್ಲಿ ಕೆಲವೊಂದು ವಸ್ತುಗಳನ್ನು ಉಲ್ಲೇಖಿಸಲಾಗಿದೆ. ಈ ವಸ್ತುಗಳಿಗೂ ನಮ್ಮ ಭವಿಷ್ಯಕ್ಕೂ ಸಂಬಂಧವಿದೆ ಎಂದು ಹೇಳಲಾಗಿದೆ.ನಾವು ನಿದ್ದೆಯಲ್ಲಿ ಕಾಣುವ ಕನಸು ಭವಿಷ್ಯದಲ್ಲಿ ನಡೆಯಬಹುದಾದ ಘಟನೆಗಳ ಮುನ್ಸೂಚನೆ ನೀಡುತ್ತದೆ.ರಾತ್ರಿ ನಿದ್ದೆಯಲ್ಲಿ ಕಂಡ ಕನಸುಗಳನ್ನು ಸರಿಯಾಗಿ ಗಮನಿಸಿದರೆ ವ್ಯಕ್ತಿಯು ಭವಿಷ್ಯದಲ್ಲಿ ಸಂಭವಿಸಬಹುದಾದ ಕೆಲವು ವಿಷಯಗಳನ್ನು ಮುಂಚಿತವಾಗಿಯೇ ತಿಳಿದುಕೊಳ್ಳಬಹುದು.ಅನೇಕ ಬಾರಿ ನಮಗೆ ದೇವರ ಕನಸು ಬೀಳುತ್ತದೆ.ಹಾಗೆಯೇ ಕನಸಿನಲ್ಲಿ ಕೆಲವು ಪ್ರಾಣಿ ಮತ್ತು ಪಕ್ಷಿಗಳು ಕೂಡಾ ಕಾಣಿಸುತ್ತವೆ. 


COMMERCIAL BREAK
SCROLL TO CONTINUE READING

ನಾವು ಕಾಣುವ ಕನಸಿನಲ್ಲಿ ಕಾಣುವ ವಸ್ತುಗಳಲ್ಲಿ ಯಾವುದು ಮಂಗಳಕರ ? : 
ಜೇನು ಗೂಡು : 

ಅನೇಕ ಬಾರಿ ನಾವು ಕಾಣುವ ಕನಸಿಗೂ ನಮ್ಮ ದೈನಂದಿನ ಬದುಕಿಗೂ ಸಂಬಂಧವೇ ಇರುವುದಿಲ್ಲ.ಕನಸಿನಲ್ಲಿ ಜೇನುನೊಣಗಳ ಗೂಡನ್ನು ಕಂಡರೆ,ಅದನ್ನು ತುಂಬಾ ಮಂಗಳಕರವೆಂದು ಹೇಳಲಾಗುತ್ತದೆ.ಸ್ವಪ್ನ ಶಾಸ್ತ್ರದ ಪ್ರಕಾರ,ಈ ಕನಸು ಯಾರಿಗೆ ಬೀಳುವುದೋ ಆ ವ್ಯಕ್ತಿಯ ಆದಾಯ ಗಣನೀಯವಾಗಿ ಹೆಚ್ಚುತ್ತದೆಯಂತೆ. 


ಇದನ್ನೂ ಓದಿ : ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಬೇಕೆ? ಹಾಗಾದರೆ ಈ ತಪ್ಪುಗಳನ್ನು ಮಾಡಬೇಡಿ!


ಕನಸಿನಲ್ಲಿ ಗಿಳಿಯನ್ನು ನೋಡುವುದು : 
ಯಾರೇ ಆಗಲಿ ಕನಸಿನಲ್ಲಿ ಗಿಳಿಯನ್ನು ನೋಡಿದರೆ, ಆ ಕನಸನ್ನು ಮಂಗಳಕರ ಎಂದೇ ಹೇಳಲಾಗುತ್ತದೆ.ಕನಸಿನಲ್ಲಿ ಗಿಳಿಯನ್ನು ನೋಡುವುದೆಂದರೆ ಮನೆಯಲ್ಲಿ ಹಣದ ಮಳೆಯಾಗುತ್ತದೆ ಎಂದರ್ಥ.ಜೀವನದಲ್ಲಿ ಲಕ್ಷ್ಮಿ ದೇವಿಯ ಆಗಮನ ಗಿಳಿಯ ಕನಸಿನೊಂದಿಗೆ ತಿಳಿಯುತ್ತದೆ.  


ಮರಗಳ ಮೇಲೆ ಹಣ್ಣು : 
ಸ್ವಪ್ನ ಶಾಸ್ತ್ರದ ಪ್ರಕಾರ, ವ್ಯಕ್ತಿಯು ತನ್ನ ಕನಸಿನಲ್ಲಿ ಹಣ್ಣುಗಳಿಂದ ತುಂಬಿದ ಮರವನ್ನು ನೋಡಿದರೆ,ನಿಮ್ಮ ಅದೃಷ್ಟವು ಶೀಘ್ರದಲ್ಲೇ ಬೆಳಗಲಿದೆ ಎಂದು ಅರ್ಥ. ನೀವು ಭವಿಷ್ಯದಲ್ಲಿ ಶ್ರೀಮಂತರಾಗುತ್ತೀರಿ ಎನ್ನುವುದನ್ನು ಈ ಕನಸು ಹೇಳುತ್ತದೆ. 


ಇದನ್ನೂ ಓದಿ : ಮನೆಯ ʻಈʼ ಜಾಗದಲ್ಲಿ ತುಳಸಿ ಗಿಡ ಇಟ್ಟಿದ್ದರೆ ಈಗಲೇ ತೆಗೆಯಿರಿ..ಇಲ್ಲವಾದಲ್ಲಿ ಹೆಚ್ಚಲಿದೆ ನಿಮ್ಮ ಮನೆಯಲ್ಲಿನ ಸಂಕಷ್ಟ


ದೇವತೆಗಳ ದರ್ಶನ  :
ಕನಸಿನಲ್ಲಿ ದೇವರು ಮತ್ತು ದೇವತೆಗಳನ್ನು ನೋಡುವುದು ತುಂಬಾ ಮಂಗಳಕರ ಕನಸು.ಈ ಕನಸು ಬಿದ್ದ ತಕ್ಷಣದಿಂದಲೇ ನಿಮ್ಮ ಬದುಕು ಕೂಡಾ ಬದಲಾಗುವುದು.   ಕನಸಿನಲ್ಲಿ ದೇವಾನುದೇವತೆಗಳನ್ನು ಕಂಡರೆ ಆ ವ್ಯಕ್ತಿಯು ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುತ್ತಾನೆ ಎಂದರ್ಥ.   


 
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.