Astro Tips: ಸನಾತನ ಧರ್ಮದಲ್ಲಿ, ವಾರದ ಪ್ರತಿ ದಿನವನ್ನು ದೇವಾನುದೇವತೆಗಳಿಗೆ ಸರ್ಮರ್ಪಣೆ ಮಾಡಲಾಗುತ್ತದೆ. ಸೋಮವಾರ ಶಿವನಿಗಾದರೆ, ಮಂಗಳವಾರ ಆಂಜನೇಯ ದೇವರನ್ನು, ಬುಧವಾರ ಗಣಪತಿ ದೇವರನ್ನು, ಗುರುವಾರ ಗುರು ರಾಘವೇಂದ್ರರನ್ನು, ಶುಕ್ರವಾರದಂದು ಮಹಾದೇವಿಯನ್ನು, ಶನಿವಾರದಂದು ಶನಿದೇವರನ್ನು, ಮತ್ತು ಭಾನುವಾರದಂದು ಸೂರ್ಯದೇವರನ್ನು ಆರಾಧಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Garuda Purana : ಇಂತಹ ಮಹಿಳೆ ಕುಟುಂಬಕ್ಕೆ ಅದೃಷ್ಟ ತರುವಳು, ಗರುಡ ಪುರಾಣದ ಪ್ರಕಾರ ಇವು ಹೆಂಡತಿಯ ಕರ್ತವ್ಯಗಳು!


ಭಾನುವಾರವೆಂದರೆ ಸೂರ್ಯ ಪ್ರಿಯ ದಿನ ಎನ್ನಲಾಗುತ್ತದೆ. ಈ ದಿನ ಮುಂಜಾನೆ ಎದ್ದು ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದಲ್ಲದೆ, ಇತರ ಅನೇಕ ಕ್ರಮಗಳನ್ನು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಅಳವಡಿಸಿಕೊಳ್ಳುವ ಮೂಲಕ ಸೂರ್ಯ ದೇವರು ಕೆಲ ರಾಶಿಗಳ ಮೇಲೆ ತನ್ನ ಆಶೀರ್ವಾದವನ್ನು ಕರುಣಿಸುತ್ತಾನೆ ಎಂದು ನಂಬಿಕೆ ಇದೆ. ಆ ಪರಿಹಾರಗಳೇನು ಎಂಬುದನ್ನು ತಿಳಿದುಕೊಳ್ಳೋಣ.


ಧಾರ್ಮಿಕ ವಿದ್ವಾಂಸರ ಪ್ರಕಾರ, ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಲು, ಒಬ್ಬ ವ್ಯಕ್ತಿಯು ಭಾನುವಾರ ರಾತ್ರಿ ಮಲಗುವಾಗ ತನ್ನ ತಲೆಯ ಮೇಲೆ ಒಂದು ಲೋಟ ಹಾಲನ್ನು ಇಟ್ಟುಕೊಳ್ಳಬೇಕು. ಮರುದಿನ ಬೆಳಗ್ಗೆ ಎದ್ದ ಮೇಲೆ ಆ ಹಾಲನ್ನು ಎಕ್ಕದ ಮರದ ಬೇರಿಗೆ ಹಾಕಬೇಕು.


ನಿಮ್ಮ ಆಸೆಗಳನ್ನು ಪೂರೈಸಲು, ಭಾನುವಾರದಂದು ಆಲದ ಮರ ಎಲೆಯ ಮೇಲೆ ನಿಮ್ಮ ಆಸೆಯನ್ನು ಬರೆದು ಹರಿಯುವ ನೀರಿನಲ್ಲಿ ಬಿಡಬೇಕು. ಹೀಗೆ ಮಾಡುವುದರಿಂದ ಬಯಸಿದ ಆಸೆಗಳು ಈಡೇರಲು ಪ್ರಾರಂಭಿಸುತ್ತವೆ.


ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಖ್ಯಾತಿಯನ್ನು ಪಡೆಯಲು, ಭಾನುವಾರ ಆಲದ ಮರದ ಕೆಳಗೆ ನಾಲ್ಕು ಮುಖದ ಹಿಟ್ಟಿನ ದೀಪವನ್ನು ಬೆಳಗಿಸಿ. ಆ ದೀಪದಲ್ಲಿ ಸಾಸಿವೆ ಎಣ್ಣೆಯನ್ನು ಬಳಸಬೇಕು. ಹೀಗೆ ಮಾಡಿದರೆ ಮಲಗಿರುವ ಅದೃಷ್ಟವನ್ನೂ ಬಡಿದೆಬ್ಬಿಸುತ್ತಾನೆ ಸೂರ್ಯದೇವ.


ಸೂರ್ಯ ದೇವರ ಅನುಗ್ರಹವನ್ನು ಪಡೆಯಲು, ಭಾನುವಾರದಂದು ಮುಂಜಾನೆ ಎದ್ದು ಸ್ನಾನ ಮಾಡಿ. ನಂತರ ಉದಯಿಸುವ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಈ ಸಮಯದಲ್ಲಿ ತಾಮ್ರದ ಪಾತ್ರೆಗಳನ್ನು ಮಾತ್ರ ಬಳಸಬೇಕು ಎಂಬುದನ್ನು ನೆನಪಿನಲ್ಲಿಡಿ.


ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಭಾನುವಾರದಂದು ಪೊರಕೆಯನ್ನು ಖರೀದಿಸುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. 3 ಪೊರಕೆಗಳನ್ನು ಖರೀದಿಸಿ ಮತ್ತು ಈ ದಿನ ಮನೆಗೆ ತಂದು ಮರುದಿನ ಹತ್ತಿರದ ದೇವಸ್ಥಾನಕ್ಕೆ ದಾನ ಮಾಡಿ. ಈ ಪರಿಹಾರದಿಂದ ಅದೃಷ್ಟವು ಹೊಳೆಯುವಂತೆ ಮಾಡುತ್ತದೆ.


ಇದನ್ನೂ ಓದಿ: "ಕೋಮುಗಲಭೆ ಸೃಷ್ಟಿಸುವವರ ಮೇಲೆ ಕಠಿಣ ಕ್ರಮ ತೆಗೆದುಕೊಂಡರೆ ಇದರ ನೋವು ಬಿಜೆಪಿಗೆ ಯಾಕೆ ಆಗುತ್ತಿದೆ"


(ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.