ಕಾಮಿಕಾ ಏಕಾದಶಿಯಂದು ಈ ವಸ್ತುಗಳನ್ನು ದಾನ ಮಾಡಿದರೆ ಎಂದಿಗೂ ಇರಲ್ಲ ಹಣದ ಕೊರತೆ
Kamika Ekadashi 2023: ಹಿಂದೂ ಧರ್ಮದಲ್ಲಿ, ಪ್ರತಿ ವರ್ಷ ಆಷಾಢ ಮಾಸದ ಕೊನೆಯ ಏಕಾದಶಿಯನ್ನು ಕಾಮಿಕಾ ಏಕಾದಶಿ ಎಂದು ಕರೆಯಲಾಗಿದೆ. ಈ ವರ್ಷ ನಾಳೆ (ಜುಲೈ 13) ಕಾಮಿಕಾ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಇದು ಚಾತುರ್ಮಾಸದ ಮೊದಲ ಏಕಾದಶಿಯೂ ಹೌದು.
Kamika Ekadashi 2023: ಇನ್ನೇನು ಆಷಾಢ ಮಾಸ ಮುಕ್ತಾಯವಾಗುತ್ತಾ ಬಂದಿದೆ. ಜುಲೈ 17, 2023ಕ್ಕೆ ಆಷಾಢ ಕೊನೆಗೊಂಡು ಶ್ರಾವಣ ಮಾಸ ಆರಂಭವಾಗಲಿದೆ. ಹಿಂದೂ ಧರ್ಮದಲ್ಲಿ ಆಷಾಢ ಮಾಸದ ಕೊನೆಯ ಏಕಾದಶಿಯನ್ನು ಕಾಮಿಕಾ ಏಕಾದಶಿ ಎಂದು ಕರೆಯುವರು. ಪಂಚಾಂಗದ ಪ್ರಕಾರ, ಈ ವರ್ಷ ಇಂದು ಮತ್ತು ನಾಳೆ ಎಂದರೆ ಜುಲೈ 12 ಮತ್ತು ಜುಲೈ 13 ಎರಡೂ ದಿನ ಏಕಾದಶಿ ಬರುವುದರಿಂದ ಎರಡೂ ದಿನವೂ ಕಾಮಿಕಾ ಏಕಾದಶಿ ಆಚರಣೆ ನಡೆಯಲಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಏಕಾದಶಿಯಂದು ಭಗವಾನ್ ವಿಷ್ಣುವಿನ ಆರಾಧನೆಗೆ ವಿಶೇಷ ಮಹತ್ವವಿದೆ. ಅದರಲ್ಲೂ ಚಾತುರ್ಮಾಸದಲ್ಲಿ ವಿಷ್ಣುವಿನ ಆರಾಧನೆಯು ಲಾಭದಾಯಕವಾಗಿದೆ. ಕಾಮಿಕಾ ಏಕಾದಶಿಯು ಚಾತುರ್ಮಾಸದ ಮೊದಲ ಏಕಾದಶಿಯೂ ಹೌದು. ಹಾಗಾಗಿ, ಕಾಮಿಕಾ ಏಕಾದಶಿಯಂದು ಏಕಾದಶಿಯ ವ್ರತಾಚರಣೆ ಮಾಡುವುದರಿಂದ ಭಕ್ತರ ಇಷ್ಟಾರ್ಥ ಸಿದ್ಧಿಯಾಗಲಿದೆ ಎಂದು ಹೇಳಲಾಗುತ್ತದೆ.
ಚಾತುರ್ಮಾಸದಲ್ಲಿ ಭಗವಾನ್ ವಿಷ್ಣುವು 4 ತಿಂಗಳ ಕಾಲ ಯೋಗ ನಿದ್ರಾಗೆ ಹೋಗುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಭಕ್ತರು ಕಾಮಿಕಾ ಏಕಾದಶಿಯಂದು ಪೂಜಿಸುವ ಮೂಲಕ ವಿಷ್ಣುವಿನ ಕೃಪೆಗೆ ಪಾತ್ರರಾಗಲು ಉಪವಾಸವನ್ನು ಆಚರಿಸುತ್ತಾರೆ.
ಇದನ್ನೂ ಓದಿ- ನಂದಿಗಿರಿಧಾಮ ಪ್ರದಕ್ಷಿಣೆ ಮಾಡಿದ್ರೆ ಕೈಲಾಸ ಪರ್ವತವನ್ನೇ ಸುತ್ತಿದಷ್ಟು ಪುಣ್ಯವಂತೆ!
ಕಾಮಿಕಾ ಏಕಾದಶಿ ಶುಭ ಸಮಯ:
ಮೊದಲೇ ತಿಳಿಸಿದಂತೆ ಈ ವರ್ಷ ಎರಡು ದಿನ ಕಾಮಿಕಾ ಏಕಾದಶಿ ಇರಲಿದೆ. ಜುಲೈ 12 ರಂದು ಸಂಜೆ 5:59 ಕ್ಕೆ ಆರಂಭವಾಗಲಿರುವ ಕಾಮಿಕಾ ಏಕಾದಶಿಯು ಜುಲೈ 13 ರಂದು ಸಂಜೆ 6:24 ಕ್ಕೆ ಕೊನೆಗೊಳ್ಳುತ್ತದೆ.
ಕಾಮಿಕಾ ಏಕಾದಶಿ ಪೂಜಾ ವಿಧಿ:
ಆಷಾಢ ಮಾಸದ ಕೊನೆಯಲ್ಲಿ ಶ್ರಾವಣ ಮಾಸದ ಹೊಸ್ತಿಲಲ್ಲಿ ಬರುವ ಕಾಮಿಕಾ ಏಕಾದಶಿಯು ಶಿವನ ಆರಾಧಕರಿಗೂ ತುಂಬಾ ಪ್ರಾಶಸ್ತ್ಯವಾದ ಸಮಯ. ಈ ಏಕಾದಶಿ ಆಚರಣೆಯಿಂದ ನಮಗೆ ಗೊತ್ತೋ ಅಥವಾ ಗೊತ್ತಿಲ್ಲದೆಯೋ ಮಾಡಿದ ಪಾಪಗಳಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆಯಿದೆ.
ಕಾಮಿಕಾ ಏಕಾದಶಿಯ ದಿನದಂದು ಉಪವಾಸ ವ್ರತವನ್ನು ಮಾಡುವವರು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ನಂತರ ಪೂಜಾ ಕೋಣೆಯಲ್ಲಿ ಸ್ವಲ್ಪ ಗಂಗಾಜಲವನ್ನು ಪ್ರೋಕ್ಷಿಸಬೇಕು. ನಂತರ, ಮರದ ಕಂಬದ ಮೇಲೆ ಹಳದಿ ಬಟ್ಟೆಯನ್ನು ಹರಡಿ ಮತ್ತು ವಿಷ್ಣುವಿನ ವಿಗ್ರಹ ಅಥವಾ ಚಿತ್ರವನ್ನು ಸ್ಥಾಪಿಸಿ. ಮೂರ್ತಿಗೆ ಪಂಚಾಮೃತ, ಹಣ್ಣು, ಕಾಯಿ ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ. ಬಳಿಕ ನಿಯಮಾನುಸಾರ ಪೂಜೆ, ಕಥೆ ಓದಿ ಆರತಿ ಮಾದಿರಿ. ಈ ವೇಳೆ " ಓಂ ನಮೋ ಭಗವತೇ ವಾಸುದೇವಾಯ" ಎಂಬ ಮಂತ್ರವನ್ನು ತಪ್ಪದೇ ಉಚ್ಚರಿಸಿ.
ಕಾಮಿಕ ಏಕಾದಶಿಯಂದು ಭಗವಾನ್ ವಿಷ್ಣುವಿಗೆ ಒಂದು ದಳ ತುಳಸಿಯನ್ನು ಅರ್ಪಿಸುವುದರಿಂದ ಪಿತೃ ದೋಷದಿಂದ ಮುಕ್ತಿ ಪಡೆಯಬಹುದು. ಜೊತೆಗೆ ಕಾಮಿಕಾ ಏಕಾದಶಿ ವ್ರತಾಚರಣೆಯಿಂದ ಭಗವಾನ್ ವಿಷ್ಣುವು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂದು ಹೇಳಲಾಗುತ್ತದೆ.
ಕಾಮಿಕಾ ಏಕಾದಶಿಯಲ್ಲಿ ಉಪವಾಸದ ಮಹತ್ವ:
* ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾಮಿಕಾ ಏಕಾದಶಿಯಂದು ಉಪವಾಸ ಮಾಡುವುದರಿಂದ ಶಿವ ಮತ್ತು ವಿಷ್ಣುವಿನ ಆಶೀರ್ವಾದ ಸಿಗುತ್ತದೆ.
* ಈ ಉಪವಾಸವನ್ನು ಆಚರಿಸುವುದರಿಂದ, ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಎಲ್ಲಾ ಸಂತೋಷವನ್ನು ಪಡೆಯುತ್ತಾನೆ.
* ಕಾಮಿಕಾ ಏಕಾದಶಿ ಉಪವಾಸ ಆಚರಣೆಯಿಂದ ಜೀವನದಲ್ಲಿ ಎದುರಾಗಿರುವ ಎಲ್ಲಾ ತೊಂದರೆಗಳು ಕೊನೆಗೊಳ್ಳುತ್ತವೆ.
* ಕಾಮಿಕಾ ಏಕಾದಶಿಯಂದು ಉಪವಾಸ ಆಚರಿಸುವುದರಿಂದ ಭಕ್ತರು ದುಶ್ಚಟಗಳಿಂದ ಮುಕ್ತಿ ಹೊಂದಿ ಮೋಕ್ಷವನ್ನು ಪಡೆಯುತ್ತಾರೆ. ಮಾತ್ರವಲ್ಲ ಹಿಂದಿನ ಪಾಪಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ.
* ಕಾಮಿಕ ಏಕಾದಶಿಯಂದು ಉಪವಾಸ ಮಾಡುವುದರಿಂದ ಅಶ್ವಮೇಧ ಯಾಗದಂತೆಯೇ ಫಲ ಸಿಗುತ್ತದೆ.
ಇದನ್ನೂ ಓದಿ: ಪೊರಕೆಯ ಈ ವಾಸ್ತು ನಿಯಮ ಪಾಲಿಸಿದ್ರೆ ಬಡವರೂ ಶ್ರೀಮಂತರಾಗುತ್ತಾರೆ!
ಕಾಮಿಕಾ ಏಕಾದಶಿಯಲ್ಲಿ ದಾನಕ್ಕಿದೆ ವಿಶೇಷ ಮಹತ್ವ:
ನಿಮಗೆಲ್ಲರಿಗೂ ತಿಳಿದಿರುವಂತೆ ಏಕಾದಶಿಯಲ್ಲಿ ದಾನಕ್ಕೆ ಬಹಳ ಮಹತ್ವವಿದೆ. ಅದರಲ್ಲೂ ಕಾಮಿಕಾ ಏಕಾದಶಿಯಲ್ಲಿ ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಸುಖ-ಸಂಪತ್ತಿಗೆ ಎಂದಿಗೂ ಕೊರತೆಯೇ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಇಂದು ಯಾವ ವಸ್ತುಗಳನ್ನು ದಾನ ಮಾಡುವುದರಿಂದ ಶುಭ ಎಂದು ನೋಡುವುದಾದರೆ...
>> ಹಳದಿ ವಸ್ತ್ರ:
ಭಗವಾನ್ ವಿಷ್ಣುವಿಗೆ ಹಳದಿ ನೆಚ್ಚಿನ ಬಣ್ಣ. ಹಾಗಾಗಿ, ಕಾಮಿಕಾ ಏಕಾದಶಿಯ ದಿನದಂದು ಹಳದಿ ಬಣ್ಣದ ವಸ್ತ್ರಗಳನ್ನು ದಾನ ಮಾಡುವುದು ಒಳಿತು ಎನ್ನಲಾಗುತ್ತದೆ. ಇದರಿಂದ ಗುರು ದೋಷ ನಿವಾರಣೆಯಾಗಿ, ಜಾತಕದಲ್ಲಿ ಗುರು ಬಲಗೊಳ್ಳುತ್ತಾನೆ.
>> ಆಹಾರ ದಾನ:
ಹಸಿದವರಿಗೆ ಅನ್ನ ಹಾಕುವುದರಿಂದ ಕೋಟಿ ಕೋಟಿ ಪುಣ್ಯ ಪ್ರಾಪ್ತಿಯಾಗುತ್ತದೆ. ಅದರಲ್ಲೂ ಕಾಮಿಕಾ ಏಕಾದಶಿಯಂದು ಅಗತ್ಯವಿದ್ದವರಿಗೆ ಆಹಾರ ಧಾನ್ಯಗಳನ್ನು ದಾನ ಮಾಡುವುದರಿಂದ ಅಂತಹ ಮನೆಯಲ್ಲಿ ಸಂಪತ್ತು ವೃದ್ದಿಯಾಗುತ್ತದೆ.
>> ಧನ ಸಹಾಯ:
ಕಾಮಿಕಾ ಏಕಾದಶಿಯಲ್ಲಿ ಯಾರಿಗೆ ಅವಶ್ಯಕತೆ ಇದೆಯೋ ಅಂತಹವರಿಗೆ ನಿಮ್ಮ ಕೈಲಾದಷ್ಟೂ ಆರ್ಥಿಕ ಸಹಾಯವನ್ನು ಮಾಡಬೇಕು ಎಂದು ಧರ್ಮಗಳಲ್ಲಿ ಉಲ್ಲೇಖಿಸಲಾಗಿದೆ. ಈ ರೀತಿ ಮಾಡುವುದರಿಂದ ನೀವು ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ ಎಂದು ಹೇಳಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/38l6m8543Vk?feature=share
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.