ಹಸ್ತದಲ್ಲಿ ಈ ಅಕ್ಷರ ಇದ್ದರೆ 40 ವರ್ಷ ದಾಟುತ್ತಿದ್ದಂತೆಯೇ ಸಿಗುವುದು ಅಪಾರ ಸಂಪತ್ತು, ಕೀರ್ತಿ ಯಶಸ್ಸು
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಮಂಗಳಕರವೆಂದು ಪರಿಗಣಿಸಲಾದ ಗುರುತುಗಳಲ್ಲಿ `M` ಅಕ್ಷರ ಕೂಡಾ ಒಂದು. ಯಾರ ಕೈಯ್ಯಲ್ಲಿ M ಚಿಹ್ನೆ ಇರುತ್ತದೆಯೋ ಅವರು ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೊಂದುತ್ತಾರೆ ಎಂದು ಹೇಳಲಾಗುತ್ತದೆ.
ಬೆಂಗಳೂರು : ಜ್ಯೋತಿಷ್ಯದಲ್ಲಿ ರಾಶಿ ಭವಿಷ್ಯ ನೋಡಲಾಗುತ್ತದೆ. ಇಲ್ಲಿ ಗ್ರಹಗಳು, ರಾಶಿಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ಹಸ್ತದ ರೇಖೆಗಳು, ಗುರುತುಗಳು, ಆಕಾರಗಳು, ಮಚ್ಚೆ ಇತ್ಯಾದಿಗಳ ಆಧಾರದ ಮೇಲೆ ಭವಿಷ್ಯವನ್ನು ಹೇಳಲಾಗುತ್ತದೆ. ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಭವಿಷ್ಯದ ಘಟನೆಗಳ ಬಗ್ಗೆ ಹೇಳುವುದಲ್ಲದೆ, ಶುಭ ಮತ್ತು ಅಶುಭ ಸಂಕೇತಗಳ ಬಗ್ಗೆ ಕೂಡಾ ಸೂಚಿಸಲಾಗುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಮಂಗಳಕರವೆಂದು ಪರಿಗಣಿಸಲಾದ ಗುರುತುಗಳಲ್ಲಿ 'M' ಅಕ್ಷರ ಕೂಡಾ ಒಂದು. ಯಾರ ಕೈಯ್ಯಲ್ಲಿ M ಚಿಹ್ನೆ ಇರುತ್ತದೆಯೋ ಅವರು ಜೀವನದಲ್ಲಿ ಸಂಪತ್ತು ಮತ್ತು ಖ್ಯಾತಿ ಹೊಂದುತ್ತಾರೆ ಎಂದು ಹೇಳಲಾಗುತ್ತದೆ.
ಕೈಯಲ್ಲಿ M ಗುರುತು ಇದ್ದರೆ ಏನರ್ಥ :
ಅಂಗೈಯಲ್ಲಿ ಎಂ ಚಿಹ್ನೆ ಇದ್ದರೆ, ವ್ಯಕ್ತಿಯು ಜನ್ಮತಃ ನಾಯಕನ ಗುಣಗಳನ್ನು ಹೊಂದಿರುತ್ತಾನೆ ಎಂದು ಹೇಳಲಾಗುತ್ತದೆ. ಜೀವನದಲ್ಲಿ ಜವಾಬ್ದಾರಿಯುತ ಸ್ಥಾನಕ್ಕೆ ಏರುತ್ತಾನೆ ಎಂದು ಕೂಡಾ ಹೇಳಲಾಗುತ್ತದೆ.
ಇದನ್ನೂ ಓದಿ : ಈ ವಸ್ತುಗಳನ್ನು ಗಾಡಿಯ ಡಿಕ್ಕಿಯಲ್ಲಿಟ್ಟರೆ ಎದುರಿಸಬೇಕಾಗುತ್ತದೆ ಶನಿದೇವನ ಪ್ರಕೋಪ
- ಹಸ್ತದಲ್ಲಿ ಎಂ ಗುರುತು ಇದ್ದು, ಇತರ ಗ್ರಹಗಳು ಕೂಡಾ ಉತ್ತಮ ಸ್ಥಾನದಲ್ಲಿದ್ದರೆ, ಆ ವ್ಯಕ್ತಿ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರುವ ಸಾಧ್ಯತೆ ಇದೆ.
ಕೈಯಲ್ಲಿ M ಚಿಹ್ನೆಯನ್ನು ಹೊಂದಿರುವ ಜನರು ಬಹಳ ಚಿಂತನಶೀಲರು ಮತ್ತು ಉತ್ತಮ ಕಲ್ಪನೆಯನ್ನು ಹೊಂದಿರುತ್ತಾರೆ. ಅವರು ಉತ್ತಮ ಬರಹಗಾರರು, ಚಿಂತಕರು, ಕಲಾವಿದರು, ಭಾಷಣಕಾರ ರಾಗಿ ಹೊರ ಹೊಮ್ಮುತ್ತಾರೆ.
- ಅಂಗೈಯಲ್ಲಿ M ಗುರುತು ಇದ್ದರೆ, ಆ ವ್ಯಕ್ತಿಯ ಜೀವನದಲ್ಲಿ ಹಣದ ಕೊರತೆ ಎದುರಾಗುವುದೇ ಇಲ್ಲ. ಅವರು 40 ವರ್ಷ ವಯಸ್ಸಿನ ನಂತರ ಬಹಳ ಯಶಸ್ವಿಯಾಗುತ್ತಾರೆ ಮಾತ್ರವಲ್ಲ ಅಪಾರ ಸಂಪತ್ತಿನ ಒಡೆಯರಾಗುತ್ತಾರೆ.
ಇದನ್ನೂ ಓದಿ : Vastu Remedy For Mirror : ಮನೆಯ ಈ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಯಾವತ್ತೂ ಕನ್ನಡಿ ಹಾಕಬೇಡಿ!
ಅಂಗೈಯಲ್ಲಿ M ನ ಗುರುತಿರುವ ವ್ಯಕ್ತಿ ಜೀವನ ಸಂಗಾತಿಯ ವಿಷಯದಲ್ಲಿಯೂ ಅದೃಷ್ಟವಂತನನ್ನಾಗಿರುತ್ತಾನೆ. ವ್ಯಕ್ತಿಯ ಜೀವನ ಸಂಗಾತಿಯು ಆತನನ್ನು ಬಹಳ ಪ್ರೀತಿಸುತ್ತಾರೆ. ಪರಸ್ಪರ ಹೊಂದಾಣಿಕೆಯ ಜೀವನ ನಡೆಸುತ್ತಾರೆ.
- ಕೈಯಲ್ಲಿ M ಚಿಹ್ನೆಯಿರುವಂಥಹ ವ್ಯಕ್ತಿ ಯಾವುದೇ ರೀತಿಯ ಸವಾಲುಗಳಿಗೆ ಹೆದರುವುದಿಲ್ಲ. ಎಂಥಹ ಪರಿಸ್ಥಿತಿಯೇ ಎದುರಾದರೂ ಧೈರ್ಯದಿಂದ ಎದುರಿಸುತ್ತಾನೆ. ಎದುರಾಗುವ ಕಠಿಣ ಪರಿಸ್ಥಿತಿಯನ್ನು ಎದುರಿಸಿ ಜಯಶೀಲನಾಗುತ್ತಾನೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.