Astro Tips: ಶ್ರಾವಣ ಮಾಸದಲ್ಲಿ ಕನಸಿನಲ್ಲಿ ಈ ಸಂಗತಿ ಕಂಡರೆ ಹಣದ ಮಳೆಯಾಗಲಿದೆ!
ಸ್ವಪ್ನ ಶಾಸ್ತ್ರ: ಸ್ವಪ್ನ ಶಾಸ್ತ್ರದಲ್ಲಿ ಪ್ರತಿ ಕನಸಿನ ಶುಭ ಮತ್ತು ಅಶುಭ ಫಲಿತಾಂಶಗಳ ಬಗ್ಗೆ ಹೇಳಲಾಗಿದೆ. ಶ್ರಾವಣ ಮಾಸದಲ್ಲಿ ಕೆಲವು ರೀತಿಯ ಕನಸುಗಳು ಬಂದರೆ ಅದು ಶಿವನ ಆಶೀರ್ವಾದದ ಸ್ಪಷ್ಟ ಸಂಕೇತವಾಗಿದೆ.
ನವದೆಹಲಿ: ಶ್ರಾವಣ ಮಾಸ ಆರಂಭವಾಗಿದ್ದು, ಈ ಮಾಸದಲ್ಲಿ ಶಿವನ ಆರಾಧನೆಗೆ ಹೆಚ್ಚಿನ ಮಹತ್ವವಿದೆ. ಅಷ್ಟೇ ಅಲ್ಲ ಮಹಾದೇವನಿಗೆ ಸಂಬಂಧಿಸಿದ ಎಲ್ಲವೂ ಶ್ರಾವಣದಲ್ಲಿ ಬಹಳ ಮುಖ್ಯ. ಈ ವರ್ಷ ಶ್ರಾವಣ ತಿಂಗಳು ಜುಲೈ 4ರಿಂದ ಆಗಸ್ಟ್ 31ರವರೆಗೆ ಇರುತ್ತದೆ. ಶ್ರಾವಣ ಮಾಸದಲ್ಲಿ ಭಗವಾನ್ ಶಿವ ಮತ್ತು ತಾಯಿ ಪಾರ್ವತಿಯು ಭೂಮಿಯ ಮೇಲೆ ನೆಲೆಸುತ್ತಾರೆ. ಜನರ ದುಃಖ ಮತ್ತು ನೋವುಗಳನ್ನು ಹೋಗಲಾಡಿಸುತ್ತಾರೆ. ಅವರ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಎಂದು ನಂಬಲಾಗಿದೆ. ಇದರೊಂದಿಗೆ ಭಗವಾನ್ ಶಿವ ಮತ್ತು ಶ್ರಾವಣ ಮಾಸದ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲಿ ಕೆಲವು ವಿಶೇಷ ವಿಷಯಗಳ ಬಗ್ಗೆ ಹೇಳಲಾಗಿದೆ. ಇದರ ಪ್ರಕಾರ ಶ್ರಾವಣ ಮಾಸದಲ್ಲಿ ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಕೆಲವು ವಿಶೇಷ ಸಂಗತಿಗಳನ್ನು ನೋಡಿದರೆ, ಅದು ಅವನ ಮೇಲೆ ಶಿವನ ಆಶೀರ್ವಾದದ ಸ್ಪಷ್ಟ ಸಂಕೇತವಾಗಿದೆ.
ಶಿವನ ಆಶೀರ್ವಾದದ ಸೂಚನೆ
ಕನಸಿನಲ್ಲಿ ಶಿವಲಿಂಗ ನೋಡುವುದರ ಅರ್ಥ: ಕನಸಿನ ವಿಜ್ಞಾನದ ಪ್ರಕಾರ ಕನಸಿನಲ್ಲಿ ಶಿವಲಿಂಗವನ್ನು ನೋಡುವುದು ತುಂಬಾ ಮಂಗಳಕರ. ಇಂತಹ ಕನಸು ಶ್ರಾವಣ ಮಾಸದಲ್ಲಿ ಬಂದರೆ ಇನ್ನೂ ಒಳ್ಳೆಯದು. ಶ್ರಾವಣ ಮಾಸದಲ್ಲಿ ಶಿವಲಿಂಗವು ಕನಸಿನಲ್ಲಿ ಕಾಣಿಸಿಕೊಂಡರೆ, ಶೀಘ್ರದಲ್ಲೇ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಒಂದು ಹುಡುಗಿ ತನ್ನ ಕನಸಿನಲ್ಲಿ ಶಿವಲಿಂಗವನ್ನು ನೋಡಿದರೆ, ಅವಳು ಶೀಘ್ರದಲ್ಲೇ ಮದುವೆಯಾಗುವ ಸಾಧ್ಯತೆಯಿದೆ ಎಂದರ್ಥ.
ಇದನ್ನೂ ಓದಿ: Kaal Sarp Dosha ತುಂಬಾ ಅಪಾಯಕಾರಿ, ಸಂಕಷ್ಟದಲ್ಲಿಯೇ ಕಳೆದುಹೋಗುತ್ತೆ ಇಡೀ ಜೀವನ!
ಕನಸಿನಲ್ಲಿ ಹಾವು ನೋಡಿದರೆ: ಕನಸಿನಲ್ಲಿ ಹಾವು ಕಾಣಿಸಿಕೊಂಡರೆ, ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶ್ರಾವಣದಲ್ಲಿ ಕನಸಿನಲ್ಲಿ ನಾಗದೇವರು ಬರುವುದು ಧನ ಪ್ರಾಪ್ತಿಯ ಸಂಕೇತ.
ಕನಸಿನಲ್ಲಿ ನಂದಿ ನೋಡಿದರೆ: ಶಿವನು ನಂದಿಯನ್ನು ಸವಾರಿ ಮಾಡುತ್ತಾನೆ ಮತ್ತು ಅವನು ನಂದಿಯನ್ನು ತುಂಬಾ ಪ್ರೀತಿಸುತ್ತಾನೆ. ಶ್ರಾವಣ ಮಾಸದಲ್ಲಿ ಕನಸಿನಲ್ಲಿ ನಂದಿಯ ಗೂಳಿ ಕಂಡರೆ ಸಂತೋಷವಾರುತ್ತೀರಿ ಎಂದರ್ಥ. ಏಕೆಂದರೆ ಅದು ಶಿವನು ನಿಮ್ಮನ್ನು ಆಶೀರ್ವದಿಸಲಿದ್ದಾನೆ ಎಂದು ಹೇಳುತ್ತದೆ. ಇದರಿಂದ ನೀವು ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ.
ಕನಸಿನಲ್ಲಿ ತ್ರಿಶೂಲ ನೋಡುವುದರ ಅರ್ಥ: ಮಳೆಗಾಲದಲ್ಲಿ ಕನಸಿನಲ್ಲಿ ತ್ರಿಶೂಲವನ್ನು ಕಂಡರೆ, ಶಿವನ ಕೃಪೆಯಿಂದ ನಿಮ್ಮ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ಅದು ಹೇಳುತ್ತದೆ.
ಕನಸಿನಲ್ಲಿ ಡಮರು ನೋಡಿದರೆ: ಶ್ರಾವಣ ಮಾಸದಲ್ಲಿ ಕನಸಿನಲ್ಲಿ ಡಮರು ಕಂಡರೆ ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ನಿಮ್ಮ ಜೀವನದ ತೊಂದರೆಗಳು ದೂರವಾಗುತ್ತವೆ ಮತ್ತು ನಿಮ್ಮ ಜೀವನದಲ್ಲಿ ಸ್ಥಿರತೆ ಬರಲಿದೆ ಎಂದು ಅದು ಹೇಳುತ್ತದೆ. ಇದರೊಂದಿಗೆ ಇದು ಮನೆಯಲ್ಲಿ ಕೆಲವು ಶುಭ ಕಾರ್ಯಗಳ ಸೂಚನೆಯನ್ನು ನೀಡುತ್ತದೆ.
ಇದನ್ನೂ ಓದಿ: ಬಿಳಿಗಿರಿ ರಂಗನಿಗೆ ಬಗೆಬಗೆ ಪತ್ರ ಬರೆದ ಭಕ್ತರು...!
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.