ಡಿವೋರ್ಸ್ ತೆಗೆದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದ ಜೋಡಿಗಳಿಗೆ ಮರು ಮದುವೆ ಮಾಡಿದ ನ್ಯಾಯಾಧೀಶರು

ಚಿಕ್ಕ ವಿಚಾರಕ್ಕೆ ಕಿತ್ತಾಡಿಕೊಂಡು ಹತ್ತಾರು ವರ್ಷಗಳಿಂದ ಕೋರ್ಟ್ಗಳಿಗೆ ಅಲೆಯುತ್ತಾ ವಕೀಲರಿಗೆ ಫೀಸ್ ಕಟ್ಟಲು ಆಗದೇ, ಅತ್ತ ಕೋರ್ಟ್ ಆದೇಶ ಪಾಲನೆ ಮಾಡಲು ಆಗದೇ ಜೈಲು ವಾಸ ಅನುಭವಿಸಿ ಕಿರಿಕಿರಿ ಅನುಭವಿಸಿದ ದಂಪತಿಗಳಿಗೆ ವಕೀಲರ ಒಪ್ಪಿಗೆ ಪಡೆದು ರಾಜೀಸಂಧಾನದ ಮುಂಖಾತರ ಬೇರೆ ಕಡೆ ಇದ್ದ ದಂಪತಿಗಳಿಗೆ ಒಟ್ಟಿಗೆ ಬಾಳುವಂತೆ ಸೂಚನೆ ನೀಡಿದ್ರು. 

Written by - Yashaswini V | Last Updated : Jul 11, 2023, 05:14 PM IST
  • ಕೋರ್ಟ್ ಅಂದ್ರೆ ನಿತ್ಯ ವಾದ-ವಿವಾದ ಮತ್ತು ಸಾಕ್ಷಿ, ದಾಖಲೆಗಳನ್ನು ತೋರಿಸುವುದು, ವಾಯಿದೇ ಮುಂದೂಡುವುದು ಕಾಣುತ್ತೇವೆ.
  • ಆದ್ರೆ ರಾಯಚೂರಿನ ಕುಟುಂಬ ನ್ಯಾಯಾಲಯದಲ್ಲಿ ಸ್ವಲ್ಪ ವಿಭಿನ್ನವಾಗಿತ್ತು.
  • ರಾಷ್ಟ್ರೀ ಯ ಲೋಕ ಅದಾಲತ್ ಪ್ರಯುಕ್ತ ಹತ್ತಾರು ವರ್ಷಗಳಿಂದ ಕೋರ್ಟ್ಗಳಿಗೆ ಅಲೆದು ಸುಸ್ತಾಗಿದ್ದ ದಂಪತಿಗಳಿಗೆ ರಾಜೀ ಸಂಧಾನ ಮಾಡಿಸಿ ಮರುಮದುವೆ ಮಾಡಿಸಲಾಯ್ತು.
ಡಿವೋರ್ಸ್ ತೆಗೆದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದ ಜೋಡಿಗಳಿಗೆ ಮರು ಮದುವೆ ಮಾಡಿದ ನ್ಯಾಯಾಧೀಶರು  title=

ಅವರೆಲ್ಲ ಮದುವೆ ಆಗಿ ಸಣ್ಣ ಪುಟ್ಟ ಸಮಸ್ಯೆ ಗೆ ಬೇರೆ ಆದ ಜೊಡಿಗಳು . ಆದರೆ ಕೋರ್ಟ್ ಮೆಟ್ಟಿಲೇರಿ ಡಿವೋರ್ಸ್ ಗೆ ಅಪ್ಲಿಕೇಶನ್ ಹಾಕಿದ್ದರು. ಇನ್ನು ಕೆಲವು ದಿನಗಳಲ್ಲಿ ಬೇರೆ ಬೇರೆ ಎಂದು ಕೊಳ್ಳುವಷ್ಟರಲ್ಲಿ 15 ಜೋಡಿಗಳನ್ನು ಒಂದು ಮಾಡಿ ಮರು ಮದುವೆ ಮಾಡಿದ ನ್ಯಾಯಾಧೀಶರು . ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ . 

ಸಾಲಾಗಿ ನಿಂತಿರೋ ಜೋಡಿ ಹಕ್ಕಿಗಳು.. ಇಳಿವಯಸ್ಸಿನಲ್ಲೂ ಹಾರ ಬದಲಿಸುತ್ತಿರೋ ವೃದ್ಧ ದಂಪತಿಗಳು. ಕೈಯಲ್ಲಿ ಕೇಸ್ ನ ಪೈಲ್ ಹಿಡಿದು ನಿಂತಿರೋ ನ್ಯಾಯಾಧೀಶರು. ಅಪ್ಪ-ಅಮ್ಮನಿಗೆ ಸ್ವೀಟ್ ತಿನ್ನಿಸುತ್ತಿರೋ ಮುದ್ದಾದ ಮಗು.ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು, ಪ್ಯಾಮಿಲಿ ಕೋರ್ಟ್ ನ ಲೋಕ ಅದಾಲತ್ ನಲ್ಲಿ.

ಹೌದು, ಕೋರ್ಟ್ ಅಂದ್ರೆ ನಿತ್ಯ ವಾದ-ವಿವಾದ ಮತ್ತು ಸಾಕ್ಷಿ, ದಾಖಲೆಗಳನ್ನು ತೋರಿಸುವುದು, ವಾಯಿದೇ ಮುಂದೂಡುವುದು ಕಾಣುತ್ತೇವೆ. ಆದ್ರೆ ರಾಯಚೂರಿನ ಕುಟುಂಬ ನ್ಯಾಯಾಲಯದಲ್ಲಿ ಸ್ವಲ್ಪ ವಿಭಿನ್ನವಾಗಿತ್ತು. ರಾಷ್ಟ್ರೀ ಯ ಲೋಕ ಅದಾಲತ್ ಪ್ರಯುಕ್ತ ಹತ್ತಾರು ವರ್ಷಗಳಿಂದ ಕೋರ್ಟ್ಗಳಿಗೆ ಅಲೆದು ಸುಸ್ತಾಗಿದ್ದ ದಂಪತಿಗಳಿಗೆ ರಾಜೀ ಸಂಧಾನ ಮಾಡಿಸಿ ಮರುಮದುವೆ ಮಾಡಿಸಲಾಯ್ತು. 

ಇದನ್ನೂ ಓದಿ- ನಂದಿಗಿರಿಧಾಮ ಪ್ರದಕ್ಷಿಣೆ ಮಾಡಿದ್ರೆ ಕೈಲಾಸ ಪರ್ವತವನ್ನೇ ಸುತ್ತಿದಷ್ಟು ಪುಣ್ಯವಂತೆ!

ಈ ಲೋಕ ಅದಾಲತ್ನಲ್ಲಿ ಚಿಕ್ಕ ವಿಚಾರಕ್ಕೆ ಕಿತ್ತಾಡಿಕೊಂಡು ಹತ್ತಾರು ವರ್ಷಗಳಿಂದ ಕೋರ್ಟ್ಗಳಿಗೆ ಅಲೆಯುತ್ತಾ ವಕೀಲರಿಗೆ ಫೀಸ್ ಕಟ್ಟಲು ಆಗದೇ, ಅತ್ತ ಕೋರ್ಟ್ ಆದೇಶ ಪಾಲನೆ ಮಾಡಲು ಆಗದೇ ಜೈಲು ವಾಸ ಅನುಭವಿಸಿ ಕಿರಿಕಿರಿ ಅನುಭವಿಸಿದ ದಂಪತಿಗಳಿಗೆ ವಕೀಲರ ಒಪ್ಪಿಗೆ ಪಡೆದು ರಾಜೀಸಂಧಾನದ ಮುಂಖಾತರ ಬೇರೆ ಕಡೆ ಇದ್ದ ದಂಪತಿಗಳಿಗೆ ಒಟ್ಟಿಗೆ ಬಾಳುವಂತೆ ಸೂಚನೆ ನೀಡಿದ್ರು. ಅಲ್ಲದೆ ದಂಪತಿಗಳಿಗೆ  ನ್ಯಾಯಾಲಯದ ನ್ಯಾಯಧೀಶರ ಸಮ್ಮುಖದಲ್ಲಿ ಮರುಮದುವೆ ಮಾಡಿ ಶುಭಹಾರೈಸಿದ್ರು. ಅಷ್ಟೇ ಅಲ್ಲದೇ ಗಂಡ-ಹೆಂಡತಿ ಮರು ಮದುವೆಗೇ ಮಕ್ಕಳೇ ಸಾಕಿಯಾಗಿ ಸಿಹಿ ತಿನ್ನಿಸಿ ನಿಮ್ಮ ದಾಂಪತ್ಯ ಜೀವನ ಸುಖವಾಗಿರಲಿವೆಂದು ಶುಭಕೋರಿದ್ರು.

ನ್ಯಾಯಾಧೀಶರ ಸಮ್ಮುಖದಲ್ಲಿ  74ರ ಇಳಿ ವಯಸ್ಸಿನ ವೃದ್ಧ ದಂಪತಿ ಒಂದಾಗಿದ್ದು ವಿಶೇಷವಾಗಿತ್ತು. ಆಸ್ತಿ ವಿಚಾರಕ್ಕೆ ಮಹಾದೇವ್ ಹಾಗೂ ಪತ್ನಿ ಲಕ್ಷ್ಮೀ ಬೇರೆಯಾಗಿದ್ದರು. ವೃದ್ಧೆ ಲಕ್ಷ್ಮೀಯನ್ನ ದಾಯಾದಿಗಳು ಎತ್ತಿಕಟ್ಟಿದ್ದರು. ಆಗ ವೃದ್ಧ ಪತಿ ಮಹಾದೇವ್ ಜೊತೆ ಜಗಳವಾಡಿ ದೂರವಾಗಿದ್ದದ್ದರಂತೆ ಲಕ್ಷ್ಮಿ. ಇತ್ತ ಪತ್ನಿ ದೂರವಾದ ಬಳಿಕ ಮನನೊಂದ ಪತಿ ಮಹಾದೇವ್ ಮನೆ ಬಿಟ್ಟು ಅನಾಥ ಆಶ್ರಮ ಸೇರಿದ್ದ.ರು. ಈ ಮಧ್ಯೆ ಆಪರೇಶನ್ಗೆ ಒಳಗಾಗಿ ಪತ್ನಿ ಲಕ್ಷ್ಮೀ ಬಲಗೈಕಳೆದುಕೊಂಡಿದ್ದಳು. ಈ ವಿಚಾರ ತಿಳಿದು ಪತ್ನಿಯ ನೋವನ್ನ ಸಹಿಸಲಾಗದೇ, ಕೋರ್ಟ್ ನಲ್ಲಿ ಪತ್ನಿ ಲಕ್ಷ್ಮೀ ಕೈ ಹಿಡಿದಿದ್ದಾರೆ ವೃದ್ಧ ಮಹಾದೇವ್. 

ಇದನ್ನೂ ಓದಿ- ಎಲ್ಲರಂತೆ ನಿಮಗೂ ಗರ್ಲ್ ಫ್ರೆಂಡ್ ಇರಬೇಕು ಎಂಬ ಆಸೆಯೇ? ಈ ಲೇಖನ ನಿಮಗಾಗಿ

ಇನ್ನೂ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿದ ಬಳಿಕ ಸಂಸಾರದ ವಿಚಾರಕ್ಕೆ ಕಲಹವಾಗಿ  64 ವರ್ಷದ ಸತ್ಯನಾರಾಯಣ ಹಾಗೂ ಶಾಂತಮ್ಮ ದಂಪತಿ ನಡುವೆ ಕಿತ್ತಾಟವಾಗಿ ಇಬ್ಬರೂ ದೂರವಾಗಿದ್ದರು. ಮತ್ತೊಂದು ಕಡೆ 14 ವರ್ಷದ ಮಗನಿರೋ ನಾಗರಾಜ್ ಹಾಗೂ ಚಿತ್ರಾ ಬಾಳಲ್ಲೂ ಒಡಕು ಉಂಟಾಗಿ, ಕಳೆದ ಮೂರು ವರ್ಷಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ನಿತ್ಯ ವಿಚ್ಚೇದನ ಪ್ರಕರಣಗಳು ಹೆಚ್ಚಾಗುತ್ತಿರೋದಕ್ಕೆ ನ್ಯಾಯಾಧೀ ಶರ ಕಳವಳ ವ್ಯಕ್ತಪಡಿಸಿದ್ದಾರೆ. ಟಿವಿ ನೋಡೊ ವಿಚಾರಕ್ಕೆ, ಗಂಡನ ಮದ್ಯಪಾನದ ವಿಚಾರಕ್ಕೆ ಜಗಳ ಸಹಜವಾಗಿದೆ. ಆದರೆ ಅದೆಷ್ಟೋ ವರ್ಷಗಳಿಂದ ದೂರವಾಗಿದ್ದ ಜೋಡಿಗಳು, ಜೋಡಿಹಕ್ಕಿ ಯಂತೆ ಕೋರ್ಟ್ ನಿಂದ ಹೊರ ನಡೆದ ದೃಶ್ಯ ನಿಜಕ್ಕೂ ಭಾವನಾತ್ಮಕವಾಗಿತ್ತು. ಒಟ್ಟಿನಲ್ಲಿ ಜೀವನದ ಬಗ್ಗೆ ಸರಿಯಾಗಿ ಅರಿಯದೆ ಸಂಸಾರ ನೌಕೆಯಿಂದ ದೂರ ಸರಿಯುತ್ತಿದ್ದ ಯುವ ಜೋಡಿಗಳನ್ನು ಹಾಗೂ ಹತ್ತಾರು ವರ್ಷ ಕೂಡಿ ಬಾಳಿ ಸಂಸಾರದಲ್ಲಿ ಮೂಡುವ ಕೆಲವು ಸಣ್ಣ ಪುಟ್ಟ ಗಲಾಟೆಗಳಿಗೆ ಬೇರೆಯಾಗುತ್ತಿದ್ದ ಹಿರಿಯ ಜೋಡಿಗಳನ್ನು ಒಂದು ಮಾಡಿ ಮರು ಮದುವೆ ಮಾಡುವ ಮೂಲಕ  ರಾಯಚೂರಿನ ಕುಟುಂಬ ನ್ಯಾಯಾಲಯದ ನ್ಯಾಯಾಧೀಶರು ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾರಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News