ಗಣಪತಿ ಪೂಜೆಯಲ್ಲಿ ತಪ್ಪದೇ ಈ ವಸ್ತು ಅರ್ಪಿಸಿ.. ಜೀವನದ ಎಲ್ಲ ವಿಘ್ನ ಕಳೆದು ಸುಖ ನೆಮ್ಮದಿ ಅಷ್ಟೈಶ್ವರ್ಯ ಕೊಡುವ!
Ganesh Chaturthi 2024: ಗಣೇಶ ಚತುರ್ಥಿಯನ್ನು ಭಾದ್ರಪದ ಮಾಸದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯಂದು ಗಣೇಶ ಮೂರ್ತಿಯನ್ನು ತಂದು ನಾನಾ ಪರಿಮಳ ಪುಷ್ಪಗಳಿಂದ ಅಲಂಕರಿಸಿ ಪೂಜಿಸಲಾಗುತ್ತದೆ.
Garike importance in Ganesha Pooja: ಗಣೇಶ ಚತುರ್ಥಿಯನ್ನು ಭಾದ್ರಪದ ಮಾಸದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯಂದು ಗಣೇಶ ಮೂರ್ತಿಯನ್ನು ತಂದು ನಾನಾ ಪರಿಮಳ ಪುಷ್ಪಗಳಿಂದ ಅಲಂಕರಿಸಿ ಪೂಜಿಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಗಣೇಶನ ಆರಾಧನೆಯಲ್ಲಿ ಗರಿಕೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಗರಿಕೆ ಇಲ್ಲದೆ ಗಣೇಶನ ಆರಾಧನೆಯು ಅಪೂರ್ಣವೆಂದು ಪರಿಗಣಿಸಲಾಗಿದೆ. ಗರಿಕೆ ಯನ್ನು ಅರ್ಪಿಸುವುದರಿಂದ ಜೀವನದಲ್ಲಿನ ಎಲ್ಲಾ ಅಡೆತಡೆಗಳು ದೂರವಾಗುತ್ತವೆ. ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಗರಿಕೆ ಏಕೆ ಅರ್ಪಿಸುತ್ತಾರೆ ಎಂದು ತಿಳಿಯೋಣ.
ಗಣೇಶ ಚತುರ್ಥಿ ದಿನಾಂಕ
ವೈದಿಕ ಪಂಚಾಂಗದ ಪ್ರಕಾರ, ಈ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯು ಸೆಪ್ಟೆಂಬರ್ 7 ರಂದು ಬಂದಿದೆ. ಅಂದರೆ ಶನಿವಾರದಂದು ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಈ ದಿನ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವ್ರತ ಆಚರಿಸಲಾಗುತ್ತದೆ.
ಗಣೇಶ ಚತುರ್ಥಿ ಮಹತ್ವ
ಗಣೇಶನನ್ನು ವಿಘ್ಷ ನಿವಾರಕ ಎಂದು ಕರೆಯಲಾಗುತ್ತದೆ. ಗರಿಕೆ ಹುಲ್ಲನ್ನು ಗಣಪತಿಗೆ ಅರ್ಪಿಸುವುದರಿಂದ ಎಲ್ಲಾ ರೀತಿಯ ವಿಘ್ನಗಳು ನಿವಾರಣೆಯಾಗುತ್ತದೆ. ಸಕಲ ಕಾರ್ಯವು ಸಿದ್ಧಿಸುತ್ತದೆ ಎಂದು ನಂಬಲಾಗಿದೆ. ಗರಿಕೆಯನ್ನು ಪವಿತ್ರ ಮತ್ತು ಶುದ್ಧವೆಂದು ಪರಿಗಣಿಸಲಾಗಿದೆ. ಗರಿಕೆ ಅರ್ಪಿಸುವುದರ ಹಿಂದಿನ ನಂಬಿಕೆಯೆಂದರೆ ಪೂಜೆಯ ಕಾರ್ಯವು ಶುದ್ಧತೆಯಿಂದ ನಡೆಯುತ್ತದೆ. ಗಣಪತಿಗೆ ಗರಿಕೆ ಅರ್ಪಿಸುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಉಂಟಾಗುತ್ತದೆ. ಗಣೇಶನನ್ನು ಮೆಚ್ಚಿಸಲು ಮತ್ತು ಅವನ ಆಶೀರ್ವಾದವನ್ನು ಪಡೆಯಲು ಗರಿಕೆ ಸುಲಭವಾದ ಮಾರ್ಗವಾಗಿದೆ ಎಂದು ನಂಬಲಾಗಿದೆ. ಗರಿಕೆ ಗಣೇಶನಿಗೆ ಗೌರವ ಮತ್ತು ಪ್ರೀತಿಯ ಸಂಕೇತವಾಗಿದೆ. ಗಣಪತಿಯ ಪೂಜೆಯಲ್ಲಿ ಗರಿಕೆಯನ್ನ ತಪ್ಪದೇ ಇಡಬೇಕು.
ಇದನ್ನೂ ಓದಿ: ಶುಕ್ರ-ಶನಿ ಮೈತ್ರಿ: ವರ್ಷಾಂತ್ಯದಲ್ಲಿ ಈ 3 ರಾಶಿಯ ಜನರಿಗೆ ಒಲಿಯಲಿದ್ದಾಳೆ ತಾಯಿ ಲಕ್ಷ್ಮಿ, ತುಂಬಲಿದೆ ಖಜಾನೆ
ಗಣೇಶನ ಪೂಜೆಯಲ್ಲಿ ಗರಿಕೆ ಬಳಕೆ
ಗಣೇಶನಿಗೆ ಗಣೇಶ ಅರ್ಪಿಸುವುದರಿಂದ ತೊಂದರೆಗಳು ದೂರವಾಗುತ್ತವೆ. ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಗಜವಸ್ತ್ರವನ್ನು ಏರಿಸಿದ ಬಳಿಕ 21 ಗರಿಕೆ ಒಂದು ಕಟ್ಟಿನಲ್ಲಿ ಇರುವಂತೆ ಎರಡು ಕಟ್ಟುಗಳಲ್ಲಿ ಕಟ್ಟಿ ಅದನ್ನ ಗಣಪತಿಗೆ ಏರಿಸಬೇಕು.
ಗಣೇಶನಿಗೆ ಗರಿಕೆ ಅರ್ಪಿಸುವುದರ ಪೌರಾಣಿಕ ಕಥೆ
ಒಂದು ದಂತಕಥೆಯ ಪ್ರಕಾರ, ಪ್ರಾಚೀನ ಕಾಲದಲ್ಲಿ ಅನಲಾಸುರ ಎಂಬ ರಾಕ್ಷಸನಿದ್ದನು. ಋಷಿ-ದೇವತೆಗಳಿಂದ ಹಿಡಿದು ಮನುಷ್ಯರವರೆಗೆ ಎಲ್ಲರೂ ಅವನ ದುಷ್ಕೃತ್ಯಗಳಿಂದ ತೊಂದರೆಗೀಡಾದರು. ಅನಲಾಸುರ ಎಲ್ಲರನ್ನೂ ಜೀವಂತವಾಗಿ ನುಂಗುತ್ತಿದ್ದ. ದೇವತೆಗಳೆಲ್ಲರೂ ಶಿವನ ಮೊರೆ ಹೋದರು. ರಾಕ್ಷಸ ಅನಲಾಸುರನನ್ನು ವಧಿಸುವಂತೆ ಪ್ರಾರ್ಥಿಸಿದರು. ಅನಲಾಸುರ ಎಂಬ ರಾಕ್ಷಸನನ್ನು ನಾಶಪಡಿಸಲು ಗಣೇಶನಿಗೆ ಮಾತ್ರ ಸಾಧ್ಯ ಎಂದು ಶಿವನು ಹೇಳಿದನು.
ಎಲ್ಲಾ ದೇವತೆಗಳು ಒಟ್ಟಾಗಿ ಗಣೇಶನನ್ನು ಪ್ರಾರ್ಥಿಸಿದರು. ಅನಲಾಸುರ ರಾಕ್ಷಸನ ನಾಶಕ್ಕಾಗಿ ವಿನಂತಿಸಿದರು. ಆಗ ಗಣೇಶನು ರಾಕ್ಷಸನನ್ನು ನುಂಗಿ ಬಿಟ್ಟನು. ರಾಕ್ಷಸನನ್ನು ನುಂಗಿದ ಗಣಪತಿಗೆ ಎದೆಯುರಿ ಪ್ರಾರಂಭವಾಯಿತು. ಆಗ ಋಷಿ ಕಶ್ಯಪ ಮಹರ್ಷಿಗಳು 21 ಗರಿಕೆ ಹುಲ್ಲನ್ನು ತಿನ್ನಲು ಕೊಟ್ಟರು. ಆಗ ಗಣಪತಿಯ ಎದೆಯುರಿ ಶಮನವಾಯಿತು. ಅಂದಿನಿಂದ ಗಣಪತಿಗೆ ಗರಿಕೆ ಅರ್ಪಿಸುವುದು ವಾಡಿಕೆಯಾಯಿತು.
ಇದನ್ನೂ ಓದಿ: ಮನಿ ಪ್ಲ್ಯಾಂಟ್ ಈ ದಿಕ್ಕಿಗೆ ಇಟ್ಟು ನೋಡಿ.. ಅದೃಷ್ಟ ಖುಲಾಯಿಸಿ ವ್ಯಾಪಾರ ವೃದ್ಧಿಯಾಗುವುದು, ಹಣದ ಹೊಳೆ ಹರಿಯುವುದು!
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.