ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, 2023 ರಲ್ಲಿ ಕೆಲವು ಪ್ರಮುಖ ಗ್ರಹಗಳ ಬದಲಾವಣೆಗಳು ಕಂಡುಬರುತ್ತವೆ. ಇವುಗಳಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯುವ ಗ್ರಹಗಳ ಬದಲಾವಣೆ ವಿಶೇಷವಾಗಿರುತ್ತದೆ. ಫೆಬ್ರವರಿಯಲ್ಲಿ ಬುಧ ಮತ್ತು ಶುಕ್ರ ಸಂಕ್ರಮಣದಿಂದ ಒಂದು ಪ್ರಮುಖ ರಾಜಯೋಗ ನಿರ್ಮಾಣವಾಗಲಿದೆ. ಇದು ಕೆಲವು ರಾಶಿಯವರಿಗೆ ಮಂಗಳಕರವಾಗಿರಲಿದೆ. ಈ ಧನ ಯೋಗವು 4 ರಾಶಿಯವರನ್ನು ಸಿರಿವಂತರನ್ನಾಗಿ ಮಾಡಲಿದೆ. 2023 ರ ವರ್ಷವು 4 ರಾಶಿಯವರ ಜೀವನದಲ್ಲಿ ಅಪಾರ ಪ್ರಮಾಣದ ಧನ ಲಾಭ ಮತ್ತು ವೃತ್ತಿಜೀವನದಲ್ಲಿ ಪ್ರಗತಿಯನ್ನು ನೀಡಲಿದೆ. 


COMMERCIAL BREAK
SCROLL TO CONTINUE READING

2023 ರ ಅದೃಷ್ಟದ ರಾಶಿಚಕ್ರ ಚಿಹ್ನೆಗಳು :
ಮಿಥುನ ರಾಶಿ : 2023 ರ ವರ್ಷವು ಹಣಕಾಸಿನ ವಿಷಯದಲ್ಲಿ ಮಿಥುನ ರಾಶಿಯವರಿಗೆ ಉತ್ತಮವಾಗಿರಲಿದೆ. 2023 ರಲ್ಲಿ ನಡೆಯಲಿರುವ ಗ್ರಹಗಳ ಸಂಕ್ರಮಣವು ಈ ರಾಶಿಯವರಿಗೆ ದೊಡ್ಡ ಮಟ್ಟದ ಆರ್ಥಿಕ ಲಾಭವನ್ನು ನೀಡಲಿದೆ. ಯಾವ ಮೂಲೆಯಿಂದಲಾದರೂ  ಇದ್ದಕ್ಕಿದ್ದಂತೆ ಹಣ ಸಿಗುತ್ತದೆ. ವಿರೋಧಿಗಳಿಗೆ ಸೋಲಾಗುವುದು. 


ಇದನ್ನೂ ಓದಿ : Rahu Transit 2023: ಮುಂದಿನ ವರ್ಷ ರಾಹು ಸಂಕ್ರಮಣ, ಈ ಒಂದು ರಾಶಿಯ ಮೇಲೆ ಹೆಚ್ಚು ಪರಿಣಾಮ!


ಕನ್ಯಾ ರಾಶಿ : ಮುಂಬರುವ ವರ್ಷವು ಕನ್ಯಾ ರಾಶಿಯವರಿಗೆ ಹಣದ ವಿಷಯದಲ್ಲಿ ಬಹಳ ಮಂಗಳಕರವಾಗಿರುತ್ತದೆ. ಸಾಲ ನೀಡಿರುವ ಹಣ ವರ್ಷದ ಆರಂಭದಿಂದಲೇ ಮರಳಿ ಬರಲಾರಂಭಿಸುತ್ತದೆ. ಉದ್ಯೋಗ ಬದಲಾವಣೆಗೆ ಅವಕಾಶವಿರುತ್ತದೆ. ಹೊಸ ಅವಕಾಶಗಳು  ಉನ್ನತ ಸ್ಥಾನ ಮತ್ತು ಹಣ ಎರಡನ್ನೂ ನೀಡುತ್ತದೆ. 


ಮಕರ ರಾಶಿ : 2023 ರ ಸಮಯವು ಮಕರ ರಾಶಿಯವರನ್ನು ಬಹಳ ಬೇಗನೆ ಸಿರಿವನ್ತರನ್ನಾಗಿ ಮಾಡುತ್ತದೆ. ಈ ರಾಶಿಯಲ್ಲಿಯೇ ರಾಜಯೋಗ  ರೂಪುಗೊಳ್ಳುವುದರಿಂದ ಆದಾಯದಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗುತ್ತದೆ. ವ್ಯಾಪಾರಿಗಳಿಗೆ ಲಾಭವಾಗಲಿದೆ. 


ಇದನ್ನೂ ಓದಿ : Horoscope Today: ಈ ರಾಶಿಯವರಿಗೆ ಉದ್ಯೋಗ ಜೊತೆಗೆ ಯಶಸ್ಸು ದೊರೆಯಲಿದೆ


ಧನು ರಾಶಿ : 2023 ರಲ್ಲಿ ಆಗುತ್ತಿರುವ ಧನ ಯೋಗವು ಧನು ರಾಶಿಯವರಿಗೆ ಅಪಾರ ಆರ್ಥಿಕ ಲಾಭವನ್ನು ನೀಡುತ್ತದೆ. ಶನಿದೇವನ ವಿಶೇಷ ಕೃಪೆ ಈ ರಾಶಿಯವರ ಮೇಲೆ ಇರಲಿದೆ. ಹೂಡಿಕೆಯಿಂದ ಲಾಭವಾಗಲಿದೆ. ಅಪಾಯಕಾರಿ ಹೂಡಿಕೆಯಿಂದಲೂ ಲಾಭವಾಗುವ ಸಾಧ್ಯತೆಗಳಿವೆ. ಹೊಸ ಆಸ್ತಿ ಮತ್ತು ವಾಹನ ಖರೀದಿಸಬಹುದು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.