Surya Shani Yuti Effect: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವೂ ಸಹ ಒಂದು ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿಚಕ್ರವನ್ನು ಬದಲಾಯಿಸುತ್ತವೆ. ಈ ಸಂದರ್ಭದಲ್ಲಿ ವಿವಿಧ ಗ್ರಹಗಳೊಂದಿಗೆ ಸಂಯೋಗವೂ ರೂಪುಗೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಸೂರ್ಯದೇವನು ಪ್ರತಿ ತಿಂಗಳು ರಾಶಿಚಕ್ರ ಬದಲಾಯಿಸುತ್ತಾನೆ. ಅದೇ ಸಂದರ್ಭದಲ್ಲಿ ನ್ಯಾಯದ ದೇವರು, ಕರ್ಮಫಲದಾತ ಶನಿ ದೇವನು ಎರಡೂವರೆ ವರ್ಷಗಳಿಗೆ ಒಮ್ಮೆ ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತಾನೆ. 


COMMERCIAL BREAK
SCROLL TO CONTINUE READING

ಈ ವರ್ಷದ ಆರಂಭದಲ್ಲಿ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿ ದೇವನು 2024ರಲ್ಲಿಯೂ ಅದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. 2024ರ ಫೆಬ್ರವರಿ ತಿಂಗಳಿನಲ್ಲಿ ಸೂರ್ಯನು ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಇದರೊಂದಿಗೆ ಕುಂಭ ರಾಶಿಯಲ್ಲಿ ಶನಿ ಮತ್ತು ಸೂರ್ಯರ ಸಂಯೋಗ ರೂಪುಗೊಳ್ಳಲಿದೆ. 


ಗ್ರಹಗಳ ರಾಜ ಸೂರ್ಯ, ಸೂರ್ಯ ಪುತ್ರ ಶನಿ ಎರಡೂ ಕೂಡ ಶಕ್ತಿಯುತ ಗ್ರಹಗಳು. ಮಾತ್ರವಲ್ಲ, ಇವೆರಡೂ ಕೂಡ ಶತ್ರು ಗ್ರಹಗಳು ಹೌದು. ಹಾಗಾಗಿ, ಕುಂಭ ರಾಶಿಯಲ್ಲಿ ಸೂರ್ಯ-ಶನಿ ಸಂಯೋಗದಿಂದಾಗಿ ಮೂರು ರಾಶಿಯವರ ಜೀವನದಲ್ಲಿ ಕೆಟ್ಟ ದಿನಗಳು ಆರಂಭವಾಗಲಿದೆ. ಈ ಸಮಯದಲ್ಲಿ ಅವರು ತುಂಬಾ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ. 


ಇದನ್ನೂ  ಓದಿ- Rahu-Ketu: ಜಾತಕದಲ್ಲಿ ರಾಹು-ಕೇತು ದೋಷಕ್ಕೆ ಇಂದೇ ಈ ಪರಿಹಾರ ಕೈಗೊಳ್ಳಿ


ಕುಂಭ ರಾಶಿಯಲ್ಲಿ ಶನಿ ಸೂರ್ಯ ಸಂಯೋಗ: ಮೂರು ರಾಶಿಯವರಿಗೆ ಎಚ್ಚರಿಕೆ ಅಗತ್ಯ:-
15 ಫೆಬ್ರವರಿ 2024 ರಿಂದ 15 ಮಾರ್ಚ್ 2024 ರವರೆಗೆ  ಶನಿ ಮತ್ತು ಸೂರ್ಯನ ಸಂಯೋಗ ಇರಲಿದ್ದು ಈ ಸಮಯದಲ್ಲಿ ಈ ಮೂರು ರಾಶಿಯವರು ತುಂಬಾ ಜಾಗರೂಕರಾಗಿರುವುದು ಅವಶ್ಯಕ. ಆ ರಾಶಿಗಳೆಂದರೆ... 


ಕರ್ಕಾಟಕ ರಾಶಿ: 
ಶನಿ-ಸೂರ್ಯರ ಸಂಯೋಗದಿಂದಾಗಿ ಕರ್ಕಾಟಕ ರಾಶಿಯವರ ಜೀವನದಲ್ಲಿ ಋಣಾತ್ಮಕ ಪರಿಣಾಮಗಳು ಕಂಡು ಬರುತ್ತದೆ. ಈ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಒತ್ತಡ ಹೆಚ್ಚಾಗುವುದರ ಜೊತೆಗೆ ವೃತ್ತಿ ಬದುಕಿನಲ್ಲೂ ಕೆಲವು ಸಮಸ್ಯೆಗಳನ್ನು ಕಾಣಬಹುದು. ಚರ್ಮ ಸಂಬಂಧಿತ ಕಾಯಿಲೆಗಳ ಬಗ್ಗೆ ಜಾಗರೂಕರಾಗಿರುವುದು ಅವಶ್ಯಕ. 


ಕನ್ಯಾ ರಾಶಿ: 
ಶನಿ-ಸೂರ್ಯ ಯುತಿಯ ಪರಿಣಾಮವಾಗಿ ಕನ್ಯಾ ರಾಶಿಯ ಜನರು ನ್ಯಾಯಾಲಯದ ಪ್ರಕರಣಗಳಲ್ಲಿ ವೈಫಲ್ಯವನ್ನು ಎದುರಿಸಬೇಕಾಗಬಹುದು. ಅಪಘಾತಗಳ ಸಂಭವವಿರುವುದರಿಂದ ವಾಹನ ಚಾಲನೆಯ ವೇಳೆ ತುಂಬಾ ಎಚ್ಚರಿಕೆಯಿಂದ ಇರಿ. ಆರೋಗ್ಯ ಸಂಬಂಧಿಸಿದ ಸಮಸ್ಯೆಗಳು ಬಾಧಿಸಬಹುದು. ನಿಮ್ಮ ಕೆಲಸ-ಕಾರ್ಯಗಳತ್ತ ಗಮನ ಕೇಂದ್ರೀಕರಿಸಿ. 


ಇದನ್ನೂ ಓದಿ- Budh Vakri 2023: ಧನು ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ, ನಾಲ್ಕು ರಾಶಿಯವರಿಗೆ ಸಂಕಷ್ಟ


ಮೀನ ರಾಶಿ: 
ಸೂರ್ಯ-ಶನಿ ಯುತಿಯು ಮೀನ ರಾಶಿಯವರಿಗೂ ಕೂಡ ಅಷ್ಟು ಉತ್ತಮವಾಗಿಲ್ಲ. ಈ ಸಮಯದಲ್ಲಿ ನಿಮ್ಮ ಖರ್ಚುಗಳು ಆದಾಯಕ್ಕಿಂತ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ವ್ಯಾಪಾರ-ವ್ಯವಹಾರದಲ್ಲಿ ನಿಮ್ಮ ಮೇಲೆ ಇಲ್ಲ-ಸಲ್ಲದ ಆರೋಪ ಕೇಳಿಬರುವ ಸಾಧ್ಯತೆ ಇರುವುದರಿಂದ ತುಂಬಾ ಎಚ್ಚರಿಕೆಯಿಂದ ಇರುವುದು ಅಗತ್ಯ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.