Budh Vakri 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುಧ ಬುದ್ಧಿ, ವಾಣಿ, ಸಂವಾದ, ತರ್ಕ, ಚಾತುರ್ಯ ಹಾಗೂ ಸ್ನೇಹದ ಕಾರಕ ಗ್ರಹ ಎಂದು ಭಾವಿಸಲಾಗುತ್ತದೆ. ಹೀಗಿರುವಾಗ ಬುಧನ ರಾಶಿ ಪರಿವರ್ತನೆ ಹಾಗೂ ಸ್ಥಿತಿ ಪರಿವರ್ತನೆ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಇನ್ನೊಂದೆಡೆ ಬುಧ ಹಾಗೂ ಮಂಗಳ ಗ್ರಹಗಳು ಜೋತಿಷ್ಯ ಶಾಸ್ತ್ರದ ಪ್ರಕಾರ ಶತ್ರು ಗ್ರಹಗಳಾಗಿವೆ. ಹೀಗಿರುವಾಗ ಮಂಗಳಾಧಿಪತ್ಯದ ಮೇಷ ರಾಶಿಯಲ್ಲಿ ಬುಧ ವಕ್ರನಾಗುವುದು ಹಲವು ರಾಶಿಗಳ ಭಾಗ್ಯೋದಯಕ್ಕೆ ಕಾರಣವಾಗಲಿದೆ. ಬುಧ ಏಪ್ರಿಲ್ 21, 2023ರ ಮಧ್ಯಾಹ್ನ 2 ಗಂಟೆ 5 ನಿಮಿಷಕ್ಕೆ ತನ್ನ ವಕ್ರ ನಡೆಯನ್ನು ಆರಂಭಿಸಲಿದ್ದಾನೆ. ಮೇ 15, 2023ರ ಬೆಳಗ್ಗೆ 8 ಗಂಟೆ 45 ನಿಮಿಷದವರೆಗೆ ಆತ ಅದೇ ಸ್ಥಿತಿಯಲ್ಲಿ ಮುಂದುವರೆಯಲಿದ್ದಾನೆ. ಬುಧನ ಈ ವಕ್ರ ನಡೆ 5 ರಾಶಿಗಳ ಜಾತಕದವರಿಗೆ ಅಪಾರ ಅದೃಷ್ಟವನ್ನು ಕರುಣಿಸಲಿದೆ. ಬನ್ನಿ ತಿಳಿದುಕೊಳ್ಳೋಣ, 

COMMERCIAL BREAK
SCROLL TO CONTINUE READING

ಮೇಷ ರಾಶಿ: ನಿಮ್ಮ ರಾಶಿಯಲ್ಲಿಯೇ ಬುಧ ತನ್ನ ವಕ್ರನಡೆಯನ್ನು ಆರಂಭಿಸಿದ್ದಾನೆ ಮತ್ತು ಧನ ಸಾಮ್ರಾಜ್ಯ ಯೋಗವನ್ನು ನಿರ್ಮಿಸಿದ್ದಾನೆ. ಹೀಗಾಗಿ ಈ ಯೋಗ ನಿಮ್ಮ ಪಾಲಿಗೆ ಅತ್ಯಂತ ಶುಭಫಲಪ್ರದ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಕೌಟುಂಬಿಕ ಜೀವನ ಭಾರಿ ಸುಖಮಯವಾಗಿರಲಿದೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವಿರಿ. ಘನತೆ ಗೌರವ ಹೆಚ್ಚಾಗಲಿದೆ. ಸಾಮಾಜಿಕ ವ್ಯಾಪ್ತಿ  ವಿಸ್ತರಣೆಯಾಗಲಿದೆ, ಇನ್ನೊಂದೆಡೆ ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡಲು ಬಯಸುವವರಿಗೆ ಈ ಸಮಯ ಸಾಕಷ್ಟು ಅದ್ಭುತವಾಗಿದೆ. ಎಲ್ಲಾ ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.   

ಕುಂಭ ರಾಶಿ: ಮಹಾಧನ ಸಾಮ್ರಾಜ್ಯ ರಾಜಯೋಗ ಕುಂಭ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಅನುಕೂಲಕರವಾಗಿದೆ. ಏಕೆಂದರೆ ಗ್ರಹಗಳ ರಾಜಕುಮಾರ ಬುಧ ನಿಮ್ಮ ಜಾತಕದ ತೃತೀಯ ಭಾವದಲ್ಲಿ ವಕ್ರಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ ಹಾಗೂ ಪರಾಕ್ರಮದಲ್ಲಿ ಅಪಾರ ಹೆಚ್ಚಳವಾಗಲಿದೆ. ವಿದೇಶದೊಂದಿಗೆ ವ್ಯಾಪಾರ ಸಂಬಂಧ ಹೊಂದಿದವರಿಗೆ ಈ ಸಮಯ ಅದ್ಭುತವಾಗಿದೆ. ಈ ಅವಧಿಯಲ್ಲಿ ನಿಮ್ಮ ಮನೆಯಲ್ಲಿ ಯಾವುದಾದರೊಂದು ಧಾರ್ಮಿಕ ಹಾಗೂ ಮಂಗಳ ಕಾರ್ಯ ನಡೆಯುವ ಸಾಧ್ಯತೆ ಇದೆ. ಆರ್ಥಿಕವಾಗಿ ಈ ಅವಧಿ ನಿಮಗೆ ಅತ್ಯಂತ ಉತ್ತಮವಾಗಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸುವಲ್ಲಿ ನೀವು ಯಶಸ್ವಿಯಾಗುವಿರಿ. ಈ ಅವಧಿಯಲ್ಲಿ ನಿಮಗೆ ಸಹೋದರ-ಸಹೋದರಿಯರ ಬೆಂಬಲ ಕೂಡ ಸಿಗಲಿದೆ.   

ಮಕರ ರಾಶಿ: ಬುಧನ ವಕ್ರ ನಡೆಯಿಂದ ನಿರ್ಮಾಣಗೊಂಡಿರುವ ಈ ಧನ ಸಾಮ್ರಾಜ್ಯ ಯೋಗ ನಿಮ್ಮ ಪಾಲಿಗೆ ಅತ್ಯಂತ ಲಾಭಕಾರಿ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಈ ಯೋಗ ನಿರ್ಮಾಣಗೊಂಡಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಕುಟುಂಬ ಸದಸ್ಯರ, ಬಂಧು-ಮಿತ್ರರ ಅಪಾರ ಬೆಂಬಲ ಪ್ರಾಪ್ತಿಯಾಗಲಿದೆ. ಇದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಚೈತನ್ಯ ಕಂಡುಬರಲಿದೆ. ಈ ಅವಧಿಯಲ್ಲಿ ನೀವು ವಾಹನ, ಆಸ್ತಿ-ಪಾಸ್ತಿ ಖರೀದಿಸಬಹುದು. ನೌಕರ ವರ್ಗಕ್ಕೆ ಸೇರಿದ ಜನರಿಗೆ ಕಾರ್ಯಸ್ಥಳದಲ್ಲಿ ಅಧಿಕಾರಿಗಳ ಅಪಾರ ಬೆಂಬಲ ಸಿಗಲಿದೆ. ವ್ಯಾಪಾರ, ರಿಯಲ್ ಎಸ್ಟೇಟ್, ಎಣ್ಣೆ, ಪೆಟ್ರೋಲಿಯಂ ಕ್ಷೇತ್ರಗಳ ಜೊತೆಗೆ ಸಂಬಂಧ ಹೊಂದಿದವರಿಗೆ ಸಮಯ ಅತ್ಯಂತ ಅದ್ಭುತವಾಗಿದೆ. 


ಇದನ್ನೂ ಓದಿ-May 2 ರಂದು ಸ್ವರಾಶಿಯನ್ನು ತೊರೆದು ಮಿಥುನ ರಾಶಿಗೆ ಶುಕ್ರನ ಪ್ರವೇಶ, 3 ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನ!

ಮೀನ ರಾಶಿ: ನಿಮ್ಮ ಜಾತಕದ ದ್ವಿತೀಯ ಭಾವದಲ್ಲಿ ಬುಧ ವಕ್ರನಾಗಲಿದ್ದಾನೆ. ನಿಮ್ಮ ಗೋಚರ ಜಾತಕದ ಚತುರ್ಥ ಹಾಗೂ ಸಪ್ತಮ ಭಾವಕ್ಕೆ ಬುಧ ಅಧಿಪತಿ. ಹೀಗಿರುವಾಗ, ಈ ರಾಶಿಯ ಜನರು ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯಲಿದ್ದಾರೆ. ವೈವಾಹಿಕ ಜೀವನ ಹಾಗೂ ಲವ್ ಲೈಫ್ ನಲ್ಲಿ ಸಾಕಷ್ಟು ಖುಷಿ ಇರಲಿದೆ. ಆರ್ಥಿಕ ಪಕ್ಷ ಪ್ರಬಲವಾಗಲಿದೆ. ನಿಮಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. 


ಇದನ್ನೂ ಓದಿ-Sun-Jupiter Conjunction: ಹಲವು ವರ್ಷಗಳ ಬಳಿಕ ಮಂಗಳನ ಮನೆಯಲ್ಲಿ 2 'ಪವರ್ಫುಲ್ ಗ್ರಹಗಳ' ಮೈತ್ರಿ, 4 ರಾಶಿಗಳ ಜನರ ಭಾಗ್ಯೋದಯ ಪಕ್ಕಾ!

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.