May 2 ರಂದು ಸ್ವರಾಶಿಯನ್ನು ತೊರೆದು ಮಿಥುನ ರಾಶಿಗೆ ಶುಕ್ರನ ಪ್ರವೇಶ, 3 ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನ!

Venus Transit 2023 In Gemini: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಮೇ2, 2023 ರಂದು ವೈಭವ ಕರುಣಿಸುವಾತ ಶುಕ್ರ ತನ್ನ ಸ್ವರಾಶಿಯಾಗಿರುವ ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ಶುಕ್ರನ ಈ ಮಿಥುನ ಗೋಚರದಿಂದ 3 ರಾಶಿಗಳ ಜನರಿಗೆ ಭಾರಿ ಅದೃಷ್ಟ ಒಲಿದುಬರಲಿದೆ ಮತ್ತು ಅವರ ಜೀವನದಲ್ಲಿ ಅದೃಷ್ಟದ ದಿನಗಳು ಆರಂಭಗೊಳ್ಳಲಿವೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
 

Venus Transit In Gemini 2023: ವೈದಿಕ ಪಂಚಾಂಗದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಯನ್ನು ಪರಿವರ್ತಿಸುವ ಮೂಲಕ ಬೇರೆ ಬೇರೆ ರಾಶಿಗಳಲ್ಲಿ ಗೋಚರಿಸುತ್ತವೆ. ಪ್ರಸ್ತುತ ವೈಭವ, ಧನ, ಐಶ್ವರ್ಯ, ಭೌತಿಕ ಸುಖ ಹಾಗೂ ವಿಲಾಸಿತನ ಕರುಣಿಸುವಾತ ಎಂದೇ ಕರಾಯಲಾಗುವ ಶುಕ್ರ ತನ್ನ ಸ್ವರಾಶಿಯಾಗಿರುವ ವೃಷಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ ಮತ್ತು ಬರುವ ಮೇ 2, 2023ರಂದು ಆತ ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ಶುಕ್ರನ ಈ ಸ್ಥಾನ ಪಲ್ಲಟ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ 3 ರಾಶಿಗಳ ಜನರಿಗೆ ಚಿನ್ನದಂತಹ ದಿನಗಳು ಆರಂಭವಾಗಲಿವೆ. ಆ ಅದೃಷ್ಟವಂತ ರಾಶಿಗಳು ಈ ಕೆಳಗಿನಂತಿವೆ.

 

ಇದನ್ನೂ ಓದಿ-Auspicious Kedar Yog 2023: 5 ಶತಮಾನಗಳ ಬಳಿಕ ರೂಪುಗೊಳ್ಳುತ್ತಿದೆ ಈ ಅಪರೂಪದ ಕಾಕತಾಳೀಯ, ಈ ಜನರ ಮೇಲೆ ಹಣದ ಸುರಿಮಳೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ವೃಷಭ ರಾಶಿ: ಶುಕ್ರನ ಈ ಮಿಥುನ ಗೋಚರ ಕನ್ಯಾ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಶುಭ ಸಿದ್ಧ ಸಾಬೀತಾಗಲಿದೆ. ಶುಕ್ರ ನಿಮ್ಮ ಜಾತಕದ ಶಷ್ಟಮ ಭಾವಕ್ಕೆ ಅಧಿಪತಿಯಾಗಿದ್ದು, ಆತ ನಿಮ್ಮ ಜಾತಕದ ದ್ವಿತೀಯ ಭಾವದಲ್ಲಿ ಗೋಚರಿಸಲಿದ್ದಾನೆ. ಹೀಗಿರುವಾಗ ಸಿಲುಕಿ ಹಾಕಿಕೊಂಡ ನಿಮ್ಮ ಧನ ನಿಮ್ಮತ್ತ ಮರಳುವ ಎಲ್ಲಾ ಸಾಧ್ಯತೆಗಳಿವೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವ್ಯಾಪಾರಿಗಳಿಗೆ ಅವರು ಸಾಲದ ರೂಪದಲ್ಲಿ ನೀಡಿರುವ ಹಣ ವಾಪಸ್ ಕೈಸೇರಲಿದೆ. ನೌಕರ ವರ್ಗದ ಜನರಿಗೆ ವೃತ್ತಿ ಜೀವನದಲ್ಲಿ ಉನ್ನತಿ ಹಾಗೂ ಆದಾಯ ಹೆಚ್ಚಳದ ಯೋಗ ರೂಪುಗೊಳ್ಳುತ್ತಿದೆ. ಮಾರ್ಕೆಟಿಂಗ್, ಮೀಡಿಯಾ, ಶಿಕ್ಷಣ ಹಾಗೂ ವಕೀಲ ವೃತ್ತಿಗಳಿಗೆ ಸಂಬಂಧಿಸಿದ ಜನರಿಗೆ ಈ ಸಮಯ ಅತ್ಯಂತ ಅದ್ಭುತವಾಗಿರಲಿದೆ.  

2 /3

ಕನ್ಯಾ ರಾಶಿ: ವೃಷಭ ರಾಶಿಯ ಜಾತಕದವರ ಪಾಲಿಗೆ ಶುಕ್ರ ಗೋಚರ ಸಾಕಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಶುಕ್ರನ ಈ ಗೋಚರ ನಿಮ್ಮ ಜಾತಕದ ದಶಮೇಶ ಭಾವದಲ್ಲಿ ನೆರವೇರುತ್ತಿದ್ದು, ನಿಮ್ಮ ಜಾತಕದ ದ್ವಿತೀಯ ಹಾಗೂ ನವಮ ಭಾವಕ್ಕೆ ಶುಕ್ರ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಪಾಲಿಗೆ ಆಕಸ್ಮಿಕ ಧನಲಾಭದ ಯೋಗ ರೂಪುಗೊಳ್ಳುತ್ತಿದೆ. ಇನ್ನೊಂದೆಡೆ ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ಕೂಡ ಸಿಗಲಿದೆ. ನಿಮ್ಮ ಎಲ್ಲಾ ಇಚ್ಛೆ-ಆಕಾಂಕ್ಷೆಗಳು ಪೂರ್ಣಗೊಳ್ಳಲಿವೆ. ಒಟ್ಟಾರೆ ಹೇಳುವುದಾದರೆ ಕನ್ಯಾ ರಾಶಿಯ ಜಾತಕದವರ ಪಾಲಿಗೆ ಈ ಶುಕ್ರ ಗೋಚರ ಶುಭವಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿ ನಿಮಗೆ ಪ್ರಭಾವ ಕಂಡುಬರಲಿದ್ದು, ನಿಮ್ಮ ಎದುರಿಗೆ ಇರುವವರು ನಿಮ್ಮ ಮಾತಿನಿಂದ ಪ್ರಭಾವಿತರಾಗಲಿದ್ದಾರೆ. ನೌಕರ ವರ್ಗದ ಜನರಿಗೆ ಪದೋನ್ನತಿಯ ಅವಕಾಶ ಪ್ರಾಪ್ತಿಯಾಗಲಿದೆ.   

3 /3

ಕುಂಭ ರಾಶಿ: ಶುಕ್ರನ ಈ ಮಿಥುನ ಗೋಚರ ನಿಮ್ಮ ಪಾಲಿಗೆ ಅತ್ಯಂತ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ನಿಮ್ಮ ಜಾತಕದ ಪಂಚಮ ಭಾವದಲ್ಲಿ ಈ ಗೋಚರ ನೆರವೇರುತ್ತಿದೆ. ಹೀಗಾಗಿ ಸಂತಾನ ಪಕ್ಷದ ವತಿಯಿಂದ ನಿಮಗೆ ಶುಭ ಸಮಾಚಾರ ಪಾಪ್ತಿಯಾಗಲಿದೆ. ಶುಕ್ರ ಗೋಚರದ ಅವಧಿಯಲ್ಲಿ ನಿಮ್ಮ ಕೌಟುಂಬಿಕ ಜೀವನದಲ್ಲಿ ಸುಖ-ಶಾಂತಿ ಇರಲಿದೆ. ಸೌಕರ್ಯಗಳಲ್ಲಿ ಹೆಚ್ಚಳವನ್ನು ನೀವು ಕಾಣಬಹುದು. ಪ್ರೇಮ ಸಂಬಂಧಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ವ್ಯಾಪಾರದಲ್ಲಿ ಉನ್ನತಿ, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯನ್ನು ನೀವು ಗಮನಿಸಬಹುದು. ವಿದ್ಯಾರ್ಥಿಗಳ ಪಾಲಿಗೆ ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)