ಹೊಸ ವರ್ಷದಲ್ಲಿ ಈ ರಾಶಿಯವರ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಲಿದ್ದಾನೆ ಶನಿ.! ಹೆಜ್ಜೆ ಹೆಜ್ಜೆಗೂ ನೀಡುತ್ತಾನೆ ಕಷ್ಟ
ಜನವರಿ ತಿಂಗಳಿನಿಂದಲೇ ಕೆಲವು ರಾಶಿಯವರಿಗೆ ಶನಿ ಕಾಟ ಆರಂಭವಾಗಲಿದೆ. ಕೆಲವು ರಾಶಿಯವರ ಜಾತಕದಲ್ಲಿ ಶನಿ ಸಾಡೇಸಾತಿ ಆರಂಭವಾದರೆ ಇನ್ನು ಕೆಲವು ರಾಶಿಯವರ ಜೀವನದಲ್ಲಿ ಎರಡೂವರೆ ವರ್ಷದ ಶನಿ ದೆಸೆ ಆರಂಭವಾಗಲಿದೆ. ಜನವರಿ 17, 2023 ರಂದಲೇ ಈ ರಾಶಿಯವರ ದೆಸೆ ಬದಲಾಗಲಿದೆ.
ಬೆಂಗಳೂರು : ಜ್ಯೋತಿಷ್ಯದಲ್ಲಿ ಶನಿ ಗ್ರಹಕ್ಕೆ ವಿಶೇಷ ಸ್ಥಾನವಿದೆ. ಶನಿ ದೇವನು ಗ್ರಹಗಳ ರಾಜನಾದ ಸೂರ್ಯನ ಮಗ. ಆದರೆ ತಂದೆ ಮಗನಾದರೂ ಸೂರ್ಯ ಮತ್ತು ಶನಿಯ ನಡುವೆ ಇರುವುದು ಶತ್ರುತ್ವ. ಶನಿ ದೇವನನ್ನು ದಂಡಾಧಿಕಾರಿ, ನ್ಯಾಯದ ದೇವರು ಎಂದೆಲ್ಲಾ ಕರೆಯಲಾಗುತ್ತದೆ. ಹೌದು ಮನುಷ್ಯನ ಕೆಲಸಕ್ಕೆ ತಕ್ಕಂತೆ ಯಾರಿಗೆ ಶುಭ ಫಲ ನೀಡಬೇಕು? ಯಾರಿಗೆ ಅಶುಭ ಫಲ ನೀಡಬೇಕು ಎನ್ನುವುದನ್ನು ನಿರ್ಧರಿಸುತ್ತಾನೆ ಶನಿ ಮಹಾತ್ಮ. ಈ ಹೊಸ ವರ್ಷದಲ್ಲಿಣ ಜಾತಕ ಫಲ ಅಥವಾ ರಾಶಿ ಫಲ ನೋಡುವುದಾದರೆ, ಕೆಲವು ರಾಶಿಯವರು ಶನಿ ದೆಸೆಯಿಂದ ಮುಕ್ತಿ ಹೊಂದಲಿದ್ದಾರೆ. ಅಂದರೆ ಇಲ್ಲಿಯವರೆಗೆ ಅವರು ಅನುಭವಿಸಿದ ಕಷ್ಟಗಳು ಕೊನೆಯಗಾಲಿವೆ. ಆದರೆ ಜನವರಿ ತಿಂಗಳಿನಿಂದಲೇ ಕೆಲವು ರಾಶಿಯವರಿಗೆ ಶನಿ ಕಾಟ ಆರಂಭವಾಗಲಿದೆ. ಕೆಲವು ರಾಶಿಯವರ ಜಾತಕದಲ್ಲಿ ಶನಿ ಸಾಡೇಸಾತಿ ಆರಂಭವಾದರೆ ಇನ್ನು ಕೆಲವು ರಾಶಿಯವರ ಜೀವನದಲ್ಲಿ ಎರಡೂವರೆ ವರ್ಷದ ಶನಿ ದೆಸೆ ಆರಂಭವಾಗಲಿದೆ. ಜನವರಿ 17, 2023 ರಂದಲೇ ಈ ರಾಶಿಯವರ ದೆಸೆ ಬದಲಾಗಲಿದೆ.
ಮೀನ ರಾಶಿ :
2023 ರಲ್ಲಿ ಶನಿ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಶನಿಯ ಕುಂಭ ಪ್ರವೇಶದೊಂದಿಗೆ ಮೀನ ರಾಶಿಯವರ್ ಜಾತಕದಲ್ಲಿ ಸಾಡೇಸಾತಿಯ ಮೊದಲ ಹಂತ ಪ್ರಾರಂಭವಾಗಲಿದೆ. ಮೀನ ರಾಶಿಯವರ ಮೇಲೆ ಶನಿ ಸಾಡೇಸಾತಿಯ ಪ್ರಭಾವ ಏಪ್ರಿಲ್ 17, 2030 ರಂದು ಕೊನೆಗೊಳ್ಳುತ್ತದೆ. ಶನಿಯ ಸಾಡೇಸಾತಿಯ ಮೊದಲ ಹಂತವು ತುಂಬಾ ನೋವಿನಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಈ ರಾಶಿಯವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೊಸ ವರ್ಷದಲ್ಲಿ ಮೀನ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಇದನ್ನೂ ಓದಿ : ಈ ವಸ್ತುಗಳನ್ನು ಗಾಡಿಯ ಡಿಕ್ಕಿಯಲ್ಲಿಟ್ಟರೆ ಎದುರಿಸಬೇಕಾಗುತ್ತದೆ ಶನಿದೇವನ ಪ್ರಕೋಪ
ಕುಂಭ ರಾಶಿ :
ಕುಂಭ ರಾಶಿಯವರ ಜಾತಕದಲ್ಲಿ ಶನಿ ಸಾಡೇಸಾತಿಯ ಎರಡನೇ ಹಂತ 2023 ರಲ್ಲಿ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಉದ್ಯೋಗ ಮತ್ತು ವ್ಯಾಪಾರ ಮಾಡುವವರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರದಲ್ಲಿ ಕಷ್ಟ ನಷ್ಟಗಳನ್ನು ನೋಡಬೇಕಾಗಿ ಬರಬಹುದು. ಯಾವುದೇ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ಮಕರ ರಾಶಿ :
2023 ಮಕರ ರಾಶಿಯವರೂ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಶನಿಯು ಕುಂಭ ರಾಶಿಯನ್ನು ಪ್ರವೇಶಿಸುವುದರಿಂದ ಮಕರ ರಾಶಿಯವರ ಜಾತಕದಲ್ಲಿ ಶನಿ ಸಾಡೇಸಾತಿಯ ಮೂರನೇ ಹಂತವು ಪ್ರಾರಂಭವಾಗಲಿದೆ . ಇದು ಶನಿ ಸಾಡೇಸಾತಿಯ ಕೊನೆಯ ಹಂತವಾಗಿರುತ್ತದೆ. ಇದರಿಂದ ಮಕರ ರಾಶಿಯವರು ಸ್ವಲ್ಪ ಸಮಯದವರೆಗೆ ಕಷ್ಟವನ್ನು ಎದುರಿಸಬೇಕಾಗುತ್ತದೆ. ಮಕರ ರಾಶಿಯವರು ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇದನ್ನೂ ಓದಿ : Vastu Remedy For Mirror : ಮನೆಯ ಈ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಯಾವತ್ತೂ ಕನ್ನಡಿ ಹಾಕಬೇಡಿ!
ಜನವರಿಯಿಂದ ಈ ರಾಶಿಯವರ ಜಾತಕದಲ್ಲಿ ಶನಿ ದೆಸೆ ಆರಂಭ :
ಜನವರಿ 17, 2023 ರಂದು ಶನಿದೇವನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರೊಂದಿಗೆ ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಎರಡೂವರೆ ವರ್ಷದ ಶನಿ ದೆಸೆ ಆರಂಭವಾಗಿದೆ. ಇನ್ನೊಂದೆಡೆ, ತುಲಾ ಮತ್ತು ಮಿಥುನ ರಾಶಿಯ ಜನರು ಶನಿಯ ಹಿಡಿತದಿಂದ ಮುಕ್ತರಾಗಲಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.