ಈ 3 ರಾಶಿಯವರು ಕೈಗೆ ಕೆಂಪು ದಾರ ಕಟ್ಟಿದರೆ ಅದೃಷ್ಟವೇ ಜೊತೆ ನಡೆದಂತೆ: ಬ್ರಹ್ಮ-ವಿಷ್ಣು-ಮಹೇಶ್ವರರ ದೈವಬಲ ಇವರ ಬೆನ್ನಿಗೆ ಸದಾ ಇರುವುದು
Benefits of wearing red thread: ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಂಪು ಬಣ್ಣದ ದಾರ ಮಂಗಳಕರ. ಆದರೆ ಕೆಲ ರಾಶಿಯವರಿಗೆ ಈ ಬಣ್ಣದ ದಾರ ಹಿಡಿಸುವುದಿಲ್ಲ. ಹೀಗಿರುವಾಗ ಕೆಂಪು ಬಣ್ಣದ ದಾರ ಧರಿಸುವುದರಿಂದ ಆಗುವ ಲಾಭಗಳೇನು? ಯಾವ ರಾಶಿಯವರು ಧರಿಸಬೇಕು ಮತ್ತು ಧರಿಸಬಾರದು? ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
Benefits of wearing red thread: ಹಿಂದೂ ಧರ್ಮದ ಜನರ ಕೈಗಳಿಗೆ ಸಾಮಾನ್ಯವಾಗಿ ಕೆಂಪು ಅಥವಾ ಕಪ್ಪು ದಾರವನ್ನು ಕಟ್ಟಲಾಗುತ್ತದೆ. ಇದು ಕೆಲವೊಮ್ಮೆ ದೃಷ್ಟಿ ನಿವಾರಣೆಗಾದರೆ, ಇನ್ನೂ ಕೆಲವೊಮ್ಮೆ ಅದೃಷ್ಟ ತರುವ ಸಂಕೇತವಾಗಿ ಬಳಕೆಯಾಗುತ್ತದೆ. ಈ ಕೆಂಪು ಬಣ್ಣದ ದಾರವನ್ನು ಹತ್ತಿಯಿಂದ ತಯಾರಿಸಲಾಗುತ್ತದೆ. ಅಂತೆಯೇ ಇದು ಪ್ರಧಾನವಾಗಿ ಕೆಂಪು ಬಣ್ಣದ್ದಾಗಿದ್ದರೂ, ಹಳದಿ ಮತ್ತು ಬಿಳಿ ಮಿಶ್ರಿತ ಬಣ್ಣವನ್ನು ಸಹ ಹೊಂದಿರುತ್ತದೆ. ಈ ಮೂರು ಎಳೆಗಳನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಎಂಬ ತ್ರಿಮೂರ್ತಿಗಳ ಸಂಕೇತವೆಂದು ಪರಿಗಣಿಸಲಾಗಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಂಪು ಬಣ್ಣದ ದಾರ ಮಂಗಳಕರ. ಆದರೆ ಕೆಲ ರಾಶಿಯವರಿಗೆ ಈ ಬಣ್ಣದ ದಾರ ಹಿಡಿಸುವುದಿಲ್ಲ. ಹೀಗಿರುವಾಗ ಕೆಂಪು ಬಣ್ಣದ ದಾರ ಧರಿಸುವುದರಿಂದ ಆಗುವ ಲಾಭಗಳೇನು? ಯಾವ ರಾಶಿಯವರು ಧರಿಸಬೇಕು ಮತ್ತು ಧರಿಸಬಾರದು? ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಧಾರ್ಮಿಕ ನಂಬಿಕೆಯ ಪ್ರಕಾರ, ಕೈಗೆ ಕೆಂಪು ದಾರವನ್ನು ಕಟ್ಟಿಕೊಂಡ ಜನರನ್ನು ಲಕ್ಷ್ಮಿ ದೇವಿಯು ಸಂತೋಷದಿಂದಿರಿಸುತ್ತಾಳೆ. ಜೊತೆಗೆ ಆಂಜನೇಯನ ವಿಶೇಷ ಆಶೀರ್ವಾದವೂ ಇವರ ಮೇಲೆ ಇರುತ್ತದೆ. ಅಂದಹಾಗೆ ಮಂಗಳನ ಬಣ್ಣವು ಕೆಂಪು ಆಗಿರುವ ಕಾರಣ, ಕೆಂಪು ದಾರ ಕೈಗೆ ಕಟ್ಟುವುದರಿಂದ ಜಾತಕದಲ್ಲಿ ಮಂಗಳನ ಸ್ಥಾನವನ್ನು ಬಲಗೊಳ್ಳುತ್ತದೆ.
ಇನ್ನು ಜ್ಯೋತಿಷ್ಯದ ಪ್ರಕಾರ, ಮೇಷ, ಸಿಂಹ ಮತ್ತು ವೃಶ್ಚಿಕ ರಾಶಿಯ ಜನರು ಕೆಂಪು ದಾರವನ್ನು ಕಟ್ಟಬೇಕು. ಮಕರ ಮತ್ತು ಕುಂಭ ರಾಶಿ ಜನರು ಕೆಂಪುದಾರ ಕಟ್ಟಬಾರದು. ನಂಬಿಕೆಯ ಪ್ರಕಾರ, ಕೆಂಪು ದಾರವನ್ನು ಕಟ್ಟಿದರೆ ಒಳಿತಾಗುವ ರಾಶಿಗಳಿಗೆ, ಆಂಜನೇಯನ ಆಶೀರ್ವಾದವಿರುತ್ತದೆ. ಅಂತೆಯೇ ಮಂಗಳ ಮತ್ತು ಸೂರ್ಯದೇವನ ವಿಶೇಷ ಕೃಪೆ ಇರುತ್ತದೆ.
ಶನಿ ದೇವನು ಮಕರ ಮತ್ತು ಕುಂಭ ರಾಶಿಯ ಅಧಿಪತಿ. ಶನಿದೇವನಿಗೆ ಕೆಂಪು ಬಣ್ಣ ಇಷ್ಟವಿಲ್ಲ. ಹೀಗಾಗಿ ಈ ಎರಡು ರಾಶಿಗಳ ಜನರು ಕೆಂಪು ದಾರ ಅಥವಾ ಕೆಂಪು ಬಣ್ಣದ ಕಲವನ್ನು ಧರಿಸಬಾರದು. ಇದಲ್ಲದೆ, ಮೀನ ರಾಶಿಯವರು ಸಹ ಕೆಂಪು ಬಣ್ಣದ ದಾರವನ್ನು ಧರಿಸಬಾರದು.
ಮಂಗಳವಾರದಂದು ಕೆಂಪು ಬಣ್ಣದ ದಾರವನ್ನು ಧರಿಸಿದರೆ ಬ್ರಹ್ಮದೇವನ ಕೃಪೆಯಿಂದ ಕೀರ್ತಿಯೂ, ವಿಷ್ಣುವಿನ ಕೃಪೆಯಿಂದ ರಕ್ಷಣಾ ಶಕ್ತಿಯೂ, ಶಿವನ ಕೃಪೆಯಿಂದ ಸಕಲ ಸಂಕಟಗಳ ಪರಿಹಾರವೂ ದೊರೆಯುತ್ತದೆ. ಇದರೊಂದಿಗೆ ಲಕ್ಷ್ಮಿ ದೇವಿಯ ಕೃಪೆಯಿಂದ ಸಂಪತ್ತು, ದುರ್ಗಾ ದೇವಿಯ ಕೃಪೆಯಿಂದ ಶಕ್ತಿ ಮತ್ತು ಸರಸ್ವತಿ ದೇವಿಯ ಕೃಪೆಯಿಂದ ಬುದ್ದಿವಂತಿಕೆ ಲಭಿಸುತ್ತದೆ ಎಂದು ಜೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಖಾಲಿ ಹೊಟ್ಟೆಗೆ ಈ ಹಣ್ಣಿನ ಒಂದೇ ಒಂದು ತುಂಡು ತಿಂದರೆ 30 ದಿನ ಸಂಪೂರ್ಣ ನಾರ್ಮಲ್ ಇರುತ್ತದೆ ಬ್ಲಡ್ ಪ್ರೆಶರ್
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.