K letter astrology : ನಿಮ್ಮ ಹೆಸರಿನ ಮೊದಲ ಅಕ್ಷರವು K ಯಿಂದ ಪ್ರಾರಂಭವಾದರೆ, ಈ ಸುದ್ದಿ ನಿಮಗಾಗಿ. ನಿಮ್ಮ ಹೆಸರಿನ ಮೊದಲ ಅಕ್ಷರವು ನಿಮ್ಮ ವ್ಯಕ್ತಿತ್ವ ಮತ್ತು ಗುಣಗಳನ್ನು ತೋರುತ್ತದೆ. K ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಜನರು ತಮ್ಮ ಅಭಿರುಚಿಗೆ ಸರಿಹೊಂದುವ ಜನರೊಂದಿಗೆ ಬೆರೆಯಲು ಇಷ್ಟಪಡುತ್ತಾರೆ. ತಾಳ್ಮೆ ಮತ್ತು ಪ್ರೀತಿಯಿಂದ ಯಾವುದೇ ಸಮಸ್ಯೆ ಬಂದರೂ ಒಳ್ಳೆಯದು ಯಾವುವು.. ಕೆಟ್ಟದ್ದು ಯಾವುದು ಅಂತ ಯೋಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ.. 


COMMERCIAL BREAK
SCROLL TO CONTINUE READING

ಚಾಲ್ಡಿಯನ್ ಸಂಖ್ಯಾಶಾಸ್ತ್ರದ ಪ್ರಕಾರ, ಕೆ ಚಂದ್ರನಿಂದ ಆಳಲ್ಪಡುವ ಸಂಖ್ಯೆ 2 ಅನ್ನು ಪ್ರತಿನಿಧಿಸುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆ ಮೃಗಶಿರ ನಕ್ಷತ್ರದ ಅಡಿಯಲ್ಲಿ ಬರುತ್ತದೆ. ಚಂದ್ರನು ಮಂಗಳ ಮತ್ತು ಬುಧನೊಂದಿಗೆ ಇರುತ್ತಾನೆ. ಈ 3 ಗ್ರಹಗಳ ಶಕ್ತಿಗಳ ಸಂಯೋಜನೆಯು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. 


ಇದನ್ನೂ ಓದಿ: 2027ರವರೆಗೆ ಈ ರಾಶಿಯವರಿಗೆ ರಾಜಯೋಗ ! ಶನಿ ಮಹಾತ್ಮನ ಕಾರಣದಿಂದಲೇ ಕಾಣುವಿರಿ ಸರ್ವ ಸುಖ ! ಸೋಲು ನಿಮ್ಮ ಹತ್ತಿರವೂ ಸುಳಿಯದು


ಚಂದ್ರನು ಮನಸ್ಸು ಮತ್ತು ಭಾವನೆಗಳನ್ನು ಪ್ರತಿನಿಧಿಸುತ್ತಾನೆ, ಬುಧವು ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ ಮತ್ತು ಮಂಗಳವು ಶಕ್ತಿಯನ್ನು ಪ್ರತಿನಿಧಿಸುತ್ತದೆ. ಈ ಕಾರಣದಿಂದಾಗಿ, ಎಲ್ಲವೂ ನಿಮ್ಮ ಬಳಿಗೆ ಬರುತ್ತವೆ. ಚಂದ್ರನ ಅನುಗ್ರಹದಿಂದ ನೀವು ಉತ್ತಮರಾಗುತ್ತೀರಿ. ಈ ನಕ್ಷತ್ರದಲ್ಲಿ ಪ್ರತಿನಿಧಿಸುವ ಚಂದ್ರನ ಶಕ್ತಿಯು ಕೆ ಯಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಜನರನ್ನು ಸೂಕ್ಷ್ಮ ಮತ್ತು ಭಾವನಾತ್ಮಕವಾಗಿಸುತ್ತದೆ.


ಭಾವನೆ: ಹೆಸರಿನ ಮೊದಲ ಅಕ್ಷರ K ಹೊಂದಿರುವ ಜನರು ಹೆಚ್ಚು ಭಾವನಾತ್ಮಕವಾಗಿರುತ್ತಾರೆ. ಕೆಲವೊಮ್ಮೆ ನೀವು ಶಾಂತವಾಗಿರುತ್ತೀರಿ ಮತ್ತು ಕೆಲವೊಮ್ಮೆ ಕೋಪಗೊಳ್ಳುತ್ತೀರಿ. ನಿಮ್ಮ ಭಾವನಾತ್ಮಕ ಸ್ವಭಾವವು ಕೆಲವೊಮ್ಮೆ ನಿಮ್ಮನ್ನು ಹಠಮಾರಿಯನ್ನಾಗಿ ಮಾಡುತ್ತದೆ. ಈ ಕಾರಣದಿಂದಾಗಿ, ಕೆಲವೊಮ್ಮೆ ನೀವು ನಿಮ್ಮ ಪ್ರೀತಿಪಾತ್ರರ ಮೇಲೆ ಕೋಪಗೊಳ್ಳುತ್ತೀರಿ. ಇತರ ಸಮಯಗಳಲ್ಲಿ ಸ್ವಲ್ಪ ನಾಚಿಕೆ, ಚಿಂತನಶೀಲ ಮತ್ತು ಕಾಳಜಿಯುಳ್ಳವರಾಗಿರುತ್ತೀರಿ. ನೀವು ಯಾರೊಂದಿಗೂ ಸುಲಭವಾಗಿ ಬೆರೆಯುವುದಿಲ್ಲ.


ಇದನ್ನೂ ಓದಿ:ದಿನಭವಿಷ್ಯ 19-07-2024: ಎರಡನೇ ಆಷಾಢ ಶುಕ್ರವಾರದ ಈ ದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ!


ಕಾಳಜಿ: ಒಮ್ಮೆ ನೀವು ಯಾರಿಗಾದರೂ ಒಗ್ಗಿಕೊಂಡರೆ ಅವರನ್ನು ಕೊನೆ ಉಸಿರು ಇರುವವರೆಗೂ ಬಿಡುವುದಿಲ್ಲ. ಈ ಕಾರಣದಿಂದಾಗಿ, ನೀವು ಸೀಮಿತ ಜನರೊಂದಿಗೆ ಮಾತ್ರ ಇರವಲು ಇಷ್ಟ ಪಡುತ್ತೀರಿ.. 


ಸಾಮರ್ಥ್ಯ ಮತ್ತು ದೌರ್ಬಲ್ಯ: ನಿಮ್ಮಲ್ಲಿ ಸಾಕಷ್ಟು ಸೃಜನಶೀಲತೆ ಇದೆ. ಒಬ್ಬ ಶ್ರೇಷ್ಠ ಕಲಾವಿದನಾಗಿ ಬೆಳಗಲು ನಿಮ್ಮ ಜ್ಞಾನವನ್ನು ಬಳಸಿ. ಮಂಗಳನ ಶಕ್ತಿಯು ಸಹಜವಾಗಿ ಧೈರ್ಯವನ್ನು ನೀಡುತ್ತದೆ. ಈ ಗುಣಗಳನ್ನು ಹೇಗೆ ಬಳಸಬೇಕೆಂದು ತಿಳಿದುಕೊಳ್ಳಿ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.