ನವದೆಹಲಿ: ಜೋತಿಷ್ಯದಲ್ಲಿ ಹಲವು ವಿಧದ ಕಾಲಸರ್ಪ ಯೋಗಗಳ ಬಗ್ಗೆ ವಿವರಿಸಲಾಗಿದೆ. ಇದರಲ್ಲಿ 12 ಪ್ರಮುಖ ಕಾಲಸರ್ಪ ಯೋಗಗಳಿವೆ. ಇವುಗಳಲ್ಲಿ 4ನೇಯದ್ದನ್ನು ಶಂಖಪಾಲ ಕಾಲಸರ್ಪಯೋಗವೆಂದು ಕರೆಯಲಾಗುತ್ತದೆ. ಈ ಯೋಗದಲ್ಲಿ ರಾಹು 4ನೇ ಮನೆಯಲ್ಲಿದ್ದರೆ, ಕೇತು 10ನೇ ಮನೆಯಲ್ಲಿರುತ್ತಾನೆ. ಈ 2 ಮನೆಗಳ ನಡುವೆ ಎಲ್ಲಾ ಇತರ ಗ್ರಹಗಳು ಒಂದೇ ಕಡೆ ಇರುತ್ತವೆ. ಶಂಖಪಾಲ ಕಲಸರ್ಪ ದೋಷದ ಪ್ರಭಾವದಿಂದ ವ್ಯಾಪಾರ, ಉದ್ಯೋಗ, ಅಧ್ಯಯನ ಇತ್ಯಾದಿ ಕ್ಷೇತ್ರದಲ್ಲಿ ಅಡೆತಡೆಗಳು ಉಂಟಾಗುತ್ತವೆ. ವ್ಯಾಪಾರಿಗಳು ಅಪಾರ ನಷ್ಟವನ್ನು ಎದುರಿಸಬೇಕಾಗುತ್ತದೆ. ಆರ್ಥಿಕ ಸ್ಥಿತಿಯು ತುಂಬಾ ಹದಗೆಡುತ್ತದೆ, ದಿವಾಳಿಯಾಗುವವರೆಗೆ ಪರಿಸ್ಥಿತಿಗಳು ಇರುತ್ತವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Hair Fall Control: ಈ ಎಲೆಯಿಂದ ಮಾಡಿದ ಎಣ್ಣೆ ಕೂದಲು ಉದುರುವಿಕೆಗೆ ಶಾಶ್ವತ ಪರಿಹಾರ


ಕಾಲಸರ್ಪ ದೋಷವಿರುವ ವ್ಯಕ್ತಿಗಳು ಯಾವಾಗಲೂ ಅಪರಿಚಿತರ ಭಯದಿಂದ ಸುತ್ತುವರೆದಿರುತ್ತಾರೆ. ಈ ದೋಷವು ಪೋಷಕರಿಂದ ನೀವು ಪಡೆಯುವ ವಾತ್ಸಲ್ಯ, ಆಶೀರ್ವಾದ ಮತ್ತು ಸಂತೋಷವನ್ನು ಕಡಿಮೆ ಮಾಡುತ್ತದೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ತಾಯಿಯೊಂದಿಗೆ ಜಗಳ ಇರುತ್ತದೆ. ಸಂಬಂಧಗಳಲ್ಲಿ ಹುಳುಕಿನಿಂದಾಗಿ, ಅವರಿಂದ ಪಡೆಯುವ ಸಹಕಾರವೂ ಕಡಿಮೆಯಾಗುತ್ತದೆ. ಇಂತಹ ಜನರು ಮಾನಸಿಕ ಗೊಂದಲಗಳಿಂದ ಸುತ್ತುವರೆದಿರುತ್ತಾರೆ. ಮನೆ, ಜಮೀನು ವಿಚಾರದಲ್ಲಿ ಅವರಿಗೆ ನಷ್ಟವಾಗುವ ಸಂಭವವಿರುತ್ತದೆ. ಮಿತ್ರರ ಮಟ್ಟಿಗೆ ಹೇಳುವುದಾದರೆ ಯಾವುದೇ ಸಮಸ್ಯೆಗೆ ಸಂಪೂರ್ಣ ಸಹಕಾರ ಸಿಗುವುದಿಲ್ಲ. ಈ ದೋಷದಿಂದ ವ್ಯಕ್ತಿಯು ವಾಹನದ ಸಂತೋಷದಿಂದ ದೂರ ಉಳಿಯುತ್ತಾನೆ. ಮನೆಯ ಸೇವಕರಿಂದಾಗಿ ವ್ಯಕ್ತಿಗೂ ತೊಂದರೆಯಾಗುತ್ತದೆ. ಯಾವುದೇ ಕೆಲಸವು ಅಡೆತಡೆಯಿಲ್ಲದೆ ಪೂರ್ಣಗೊಳ್ಳುವುದಿಲ್ಲ, ಆದ್ದರಿಂದ ಇಂತಹ ಜನರು ಏಕಕಾಲದಲ್ಲಿ ಅನೇಕ ಕೆಲಸಗಳನ್ನು ಮಾಡಬಾರದು.


ಇದನ್ನೂ ಓದಿ: ಮಳೆಗೆ ಬಟ್ಟೆ ಒಣಗುತ್ತಿಲ್ಲವೇ ? ಈ ಮೂರು ವಿಧಾನ ಅನುಸರಿಸಿದರೆ ಒದ್ದೆ ಬಟ್ಟೆಯ ಚಿಂತೆ ಇರುವುದಿಲ್ಲ


ಶಂಖಪಾಲ ಕಾಲಸರ್ಪ ದೋಷವನ್ನು ಕಡಿಮೆ ಮಾಡಲು, ಬೆಳ್ಳಿಯ ಹಾವನ್ನು ಹರಿಯುವ ನದಿಯಲ್ಲಿ ಬಿಡಬೇಕು. ಮೊದಲು ಶ್ರೀ ಕೃಷ್ಣನ ವಿಗ್ರಹವನ್ನು ನವಿಲು ಗರಿಗಳಿಂದ ಅಲಂಕರಿಸಿ, ನಂತರ ಪೂಜಿಸುವುದರಿಂದ ದೋಷಗಳು ಕಡಿಮೆಯಾಗುತ್ತವೆ. ಕಾಲಸರ್ಪ ದೋಷ ಶಮನಕ್ಕಾಗಿ ನಿತ್ಯವೂ ಮೂರ್ತಿಯನ್ನು ಪೂಜಿಸಿ, ಹಗಲಿನಲ್ಲಿ ನಿದ್ದೆ ಮಾಡದೆ ಮುಂಜಾನೆ ಬೇಗ ಎದ್ದು ಉದ್ಯಾನದಲ್ಲಿ ವ್ಯಾಯಾಮ ಅಥವಾ ವಾಕ್ ಮಾಡಬೇಕು. ಹಾವಿನ ಮಂತ್ರವನ್ನು ಪ್ರತಿದಿನ ಜಪಿಸಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.