ಹಣದ ವಿಷಯದಲ್ಲಿ ಮಾಡುವ ಈ ತಪ್ಪುಗಳಿಂದ ಲಕ್ಷ್ಮಿದೇವಿ ಕೋಪಿಸಿಕೊಳ್ಳಬಹುದು!
ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರದಲ್ಲಿಯೂ ಕೂಡ ಹಣಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಉಲ್ಲೇಖಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಹಣದ ವಿಚಾರದಲ್ಲಿ ನಮಗೆ ಗೊತ್ತೋ ಅಥವಾ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ಕೂಡ ಸಂಪತ್ತಿನ ಅಧಿದೇವತೆಯಾದ ತಾಯಿ ಮಹಾಲಕ್ಷ್ಮಿಯ ಮುನಿಸಿಗೆ ಕಾರಣವಾಗಬಹುದು ಎಂದು ಉಲ್ಲೇಖಿಸಲಾಗಿದೆ.
ಬೆಂಗಳೂರು: ಹಿಂದೂ ಧರ್ಮದಲ್ಲಿ ಹಣವನ್ನು ಲಕ್ಷ್ಮೀದೇವಿಯ ಸ್ವರೂಪ ಎಂದು ನಂಬಲಾಗಿದೆ. ಭಗವಾನ್ ವಿಷ್ಣುವಿನ ಪತ್ನಿಯಾದ ಲಕ್ಷ್ಮಿಯ ಆಶೀರ್ವಾದಕ್ಕಾಗಿ ಜನರು ಇನ್ನಿಲ್ಲದ ವ್ರತ, ಪೂಜೆ, ಉಪವಾಸವನ್ನು ಆಚರಿಸುತ್ತಾರೆ. ಯಾರ ಮೇಲೆ ತಾಯಿ ಮಹಾಲಕ್ಷ್ಮಿಯ ಆಶೀರ್ವಾದ ಇರುತ್ತದೆಯೋ ಅವರ ಜೀವನದಲ್ಲಿ ಸುಖ-ಸಂಪತ್ತಿಗೆ ಕೊರತೆಯೇ ಇರುವುದಿಲ್ಲ. ಅವರು ಜೀವನದಲ್ಲಿ ಎಂದಿಗೂ ಕೂಡ ಹಣಕಾಸಿನ ವಿಷಯದಲ್ಲಿ ಕಷ್ಟವನ್ನು ನೋಡುವುದಿಲ್ಲ ಎಂದು ನಂಬಲಾಗಿದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಹಣದ ವಿಚಾರದಲ್ಲಿ ನಮಗೆ ಗೊತ್ತೋ ಅಥವಾ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ಕೂಡ ಸಂಪತ್ತಿನ ಅಧಿದೇವತೆಯಾದ ತಾಯಿ ಮಹಾಲಕ್ಷ್ಮಿಯ ಮುನಿಸಿಗೆ ಕಾರಣವಾಗಬಹುದು ಎಂದು ಉಲ್ಲೇಖಿಸಲಾಗಿದೆ.
ಹೌದು, ನಮ್ಮ ನಿತ್ಯದ ಬದುಕಿನಲ್ಲಿ ನಾವು ಹಣದ ವಹಿವಾಟನ್ನು ನಡಿಸುವಾಗ ನಮಗೆ ಗೊತ್ತೋ/ಗೊತ್ತಿಲ್ಲದೆಯೋ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಇಂತಹ ತಪ್ಪುಗಳು ತಾಯಿ ಲಕ್ಷ್ಮಿಯ ಮುನಿಸಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಮಾತ್ರವಲ್ಲ, ಇವು ನಮ್ಮನ್ನು ಬಡತನದತ್ತ ದೂಡಬಹುದು ಎಂದು ಕೂಡ ನಂಬಿಕೆ ಇದೆ. ಅಂತಹ ತಪ್ಪುಗಳು ಯಾವುವು ಎಂದು ತಿಳಿಯೋಣ...
ನಿಮಗೆ ಗೊತ್ತೋ/ಗೊತ್ತಿಲ್ಲದೆಯೋ ಹಣದ ವಿಚಾರದಲ್ಲಿ ಮಾಡುವ ಈ ತಪ್ಪು ತಾಯಿ ಲಕ್ಷ್ಮಿ ಮುನಿಸಿಗೆ ಕಾರಣವಾಗಬಹುದು, ಎಚ್ಚರ!
ಹಣ ನೀಡುವಾಗ ಈ ತಪ್ಪನ್ನು ಮಾಡಬೇಡಿ:
ಸಾಮಾನ್ಯವಾಗಿ ಕೆಲವರು ಬೇರೆಯವರಿಗೆ ಹಣವನ್ನು ನೀಡುವಾಗ ಸರಿಯಾಗಿ ಕೈಗೆ ಹಣ ನೀಡದೆ ಅದನ್ನು ದೂರದಿಂದ ಎಸೆಯುತ್ತಾರೆ. ಆದರೆ, ಇದು ತಾಯಿ ಲಕ್ಷ್ಮಿಗೆ ಮಾಡುವ ಅವಮಾನವಾಗಿದ್ದು, ಇಂತಹವರ ಬಳಿ ಲಕ್ಷ್ಮಿ ನಿಲ್ಲುವುದಿಲ್ಲ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- 12 ವರ್ಷಗಳ ಬಳಿಕ ಗುರು-ಸೂರ್ಯರ ಅದ್ಭುತ ಸಂಯೋಗ, ಈ ರಾಶಿಯವರಿಗೆ ಧನ ವೃಷ್ಟಿ
ಹಣ ಕೆಳಗೆ ಬಿದ್ದಾಗ ಇಂತಹ ತಪ್ಪಾಗದಂತೆ ನಿಗಾವಹಿಸಿ:
ಕೆಲವೊಮ್ಮೆ ಕೈಜಾರಿ ಹಣ ಕೆಳಗೆ ಬೀಳುವುದುಂಟು. ಅಂತಹ ಸಂದರ್ಭದಲ್ಲಿ ಹಣವನ್ನು ಎತ್ತಿ ಹಾಗೆಯೇ ಕಿಸೆಯಲ್ಲಿ ಇರಿಸಿಕೊಳ್ಳುತ್ತಾರೆ. ಹೀಗೆ ಮಾಡುವ ಬದಲಿಗೆ, ಕೆಳಗೆ ಬಿದ್ದ ಹಣವನ್ನು ಎತ್ತಿ ಮೊದಲು ಕಣ್ಣಿಗೆ ಒತ್ತಿಕೊಂಡು ಬಳಿಕ ಕಿಸೆಯಲ್ಲಿಡಿ.
ತಪ್ಪಾದ ಸ್ಥಳದಲ್ಲಿ ಇಡುವುದು:
ಕೆಲವರು ಹಣವಿರುವ ಪರ್ಸ್ ಅನ್ನು ದಿಂಬಿನ ಕೆಳಗೆ ಇಟ್ಟು ಮಲಗುತ್ತಾರೆ. ಇನ್ನೂ ಕೆಲವರು ಹಣವನ್ನು ಒಗ್ಗರಣೆ ಡಬ್ಬಿಯಲ್ಲಿ ಸಂಗ್ರಹಿಸುತ್ತಾರೆ. ಆದರೆ, ಇದೆಲ್ಲವೂ ಸಂಪತ್ತಿನ ದೇವತೆಯಾದ ಲಕ್ಷ್ಮೀದೇವಿಗೆ ಮಾಡುವ ಅವಮಾನ, ಅಗೌರವವಾಗಿದೆ. ಇದರಿಂದ ಲಕ್ಷ್ಮಿದೇವಿಯು ನಿಮ್ಮ ಮೇಲೆ ಕೋಪಿಸಿಕೊಳ್ಳಬಹುದು. ಇದನ್ನು ತಪ್ಪಿಸಲು ಹಣವನ್ನು ಎಲ್ಲೆಲ್ಲೋ ಇಡುವ ಬದಲಿಗೆ ಸದಾ ಒಂದು ಸುರಕ್ಷಿತ ಸ್ಥಳದಲ್ಲಿ ಸಂಗ್ರಹಿಸಿ. ಸಾಧ್ಯವಾದಷ್ಟು ಶುದ್ಧವಾದ ಸ್ಥಳದಲ್ಲಿ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ.
ಇದನ್ನೂ ಓದಿ- ಮಾಸ ಭವಿಷ್ಯ: ಮಾರ್ಚ್ ತಿಂಗಳಿನಲ್ಲಿ ಪ್ರಕಾಶಿಸಲಿದೆ ಈ ರಾಶಿಯವರ ಅದೃಷ್ಟ
ನೋಟನ್ನು ಎಣಿಸುವಾಗ ಈ ತಪ್ಪನ್ನು ಮಾಡಬೇಡಿ:
ನಮ್ಮಲ್ಲಿ ಕೆಲವರು ಹಣ ಎಣಿಸುವಾಗ ಬೆರಳಿಗೆ ಎಂಜಿಲು ಮಾಡಿಕೊಂಡು ಹಣ ಎಣಿಸುತ್ತಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ತಾಯಿ ಲಕ್ಷ್ಮಿ ಹಣದಲ್ಲಿ ನೆಲೆಸಿರುತ್ತಾರೆ. ಈ ರೀತಿ ನೋಟಿಗೆ ಎಂಜಿಲು ಮಾಡುವುದು ಮಹಾಲಕ್ಷ್ಮಿಗೆ ಮಾಡುವ ಅವಮಾನವಾಗಿದೆ. ಇಂತಹವರ ಬಳಿ ತಾಯಿ ಲಕ್ಷ್ಮಿ ಕ್ಷಣಮಾತ್ರವೂ ನಿಲ್ಲಲು ಇಚ್ಚಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.