ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಕೆಲವೊಮ್ಮೆ 2 ಅಥವಾ ಹೆಚ್ಚಿನ ಗ್ರಹಗಳು ಒಂದೇ ರಾಶಿಯಲ್ಲಿ ಸೇರುತ್ತವೆ. ಹೀಗೆ ಬೇರೆ ಬೇರೆ ಗ್ರಹಗಳು ಒಂದೇ ರಾಶಿಯಲ್ಲಿ ಸೇರುವುದನ್ನು ಜ್ಯೋತಿಷ್ಯದಲ್ಲಿ ಯುತಿ ಎಂದು ಕರೆಯಲಾಗುತ್ತದೆ. ಗ್ರಹಗಳ ಈ ಸಂಯೋಗದಿಂದ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಜುಲೈ 25 ರಂದು ಶುಕ್ರ ಮತ್ತು ಬುಧ ಗ್ರಹಗಳು ಸಿಂಹ ರಾಶಿಯಲ್ಲಿ ಸೇರಲಿವೆ.   ಈ ಎರಡು ಗ್ರಹಗಳ ಸಂಯೋಜನೆಯಿಂದ  ಇಲ್ಲಿ ಲಕ್ಷ್ಮೀ ನಾರಾಯಣ ಯೋಗವು ಉಂಟಾಗುತ್ತದೆ. ಈ ಯೋಗವನ್ನು ಜ್ಯೋತಿಷ್ಯದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರ ಶುಭ ಪರಿಣಾಮ 3 ರಾಶಿಗಳ ಮೇಲೆ ಬೀಳಲಿದೆ. 


COMMERCIAL BREAK
SCROLL TO CONTINUE READING

ತುಲಾ ರಾಶಿ   : 
ಲಕ್ಷ್ಮೀ ನಾರಾಯಣ ಯೋಗವು ತುಲಾ ರಾಶಿಯವರಿಗೆ ವರದಾನಕ್ಕಿಂತ ಕಡಿಮೆಯಿಲ್ಲ. ಈ ಸಮಯದಲ್ಲಿ ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ವ್ಯಾಪಾರದಲ್ಲಿ ಲಾಭ ಗಳಿಸುವಿರಿ. ಉದ್ಯೋಗಿಗಳ ಆದಾಯವೂ ಹೆಚ್ಚಾಗುವ ಸಾಧ್ಯತೆ ಇದೆ. ಮಾನಸಿಕ ನೆಮ್ಮದಿ ದೊರೆಯಲಿದೆ. ಹೊಸ ಉದ್ಯೋಗಾವಕಾಶಗಳನ್ನು ಪಡೆಯುವುದರ ಜೊತೆಗೆ ಬಡ್ತಿಯ ಅವಕಾಶವೂ ಇರುತ್ತದೆ. 


ಇದನ್ನೂ ಓದಿ : ಅಕ್ಟೋಬರ್ ನಿಂದ ಮುಂದಿನ ಎರಡು ವರ್ಷಗಳವರೆಗೆ ಈ ರಾಶಿಯವರದ್ದೇ ಆಟ ! ಬಾಳಲ್ಲಿ ಉಕ್ಕಿ ಬರುವುದು ಧನ ಸಂಪತ್ತು


ಮಿಥುನ ರಾಶಿ
ಮಿಥುನ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗವು ಶುಭಕರವಾಗಿ ಪರಿಣಮಿಸಲಿದೆ. ಈ ಸಮಯದಲ್ಲಿ, ಶುಭ ಫಲಗಳು ದೊರೆಯುತ್ತವೆ. ಧನಲಾಭವಾಗುವ ಸಂಭವವಿದೆ. ಹಳೆಯ ಸಾಲದಿಂದ ಮುಕ್ತರಾಗಬಹುದು. ವೃತ್ತಿಯಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಇದರಿಂದ ಮನಸ್ಸು ಸಂತೋಷವಾಗಿರುತ್ತದೆ. 


ಕನ್ಯಾರಾಶಿ 
ಕನ್ಯಾ ರಾಶಿಯವರಿಗೆ ಕೂಡಾ ಲಕ್ಷ್ಮೀ ನಾರಾಯಣ ಯೋಗವು ಮಂಗಳಕರವಾಗಿರಲಿದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಅದೃಷ್ಟವು ಕೈ ಹಿಡಿಯಲಿದೆ. ವ್ಯಾಪಾರದಲ್ಲಿ ಅಪಾರ ಪ್ರಮಾಣದ ಲಾಭವಾಗಲಿದೆ. ಆಸ್ತಿ ಇತ್ಯಾದಿಗಳಿಗೆ ಸಂಬಂಧಿಸಿದ ವಿವಾದಗಳಲ್ಲಿ ಯಶಸ್ಸು ಪಡೆಯಬಹುದು.  ಹಣಕಾಸಿನ ಲಾಭ ಹೆಚ್ಚಾಗುತ್ತದೆ. ಹಳೆಯ ಹೂಡಿಕೆಯಿಂದ ಲಾಭವಾಗುವುದು. 


ಇದನ್ನೂ ಓದಿ :  Surya Gochar: ಜಾತಕದಲ್ಲಿ ಸೂರ್ಯನನ್ನು ಬಲಪಡಿಸಲು ನಿಮ್ಮ ರಾಶಿಗೆ ಅನುಗುಣವಾಗಿ ಈ ರೀತಿ ಪರಿಹಾರ ಕೈಗೊಳ್ಳಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.