ಶನಿಗೆ ಪ್ರಿಯ ಈ 5 ಆಹಾರ, ಶನಿವಾರದಂದು ಸೇವಿಸಿದರೆ ಸಿಗುತ್ತೆ ಛಾಯಾಪುತ್ರನ ಅನುಗ್ರಹ.!

Best remedy for shani dosha: ಶನಿ ಗ್ರಹವನ್ನು ನ್ಯಾಯ-ಪ್ರೀತಿಯ ಗ್ರಹವೆಂದು ಪರಿಗಣಿಸಲಾಗಿದೆ. ಶನಿದೇವನ ಆಶೀರ್ವಾದ ಪಡೆಯಲು ಶನಿವಾರವನ್ನು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಶನಿದೇವನು ವ್ಯಕ್ತಿಯ  ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. 
 

Shani dev favourite food: ಶನಿಯ ಕೃಪೆಯಿಂದ ಕಡು ಬಡವನು ಸಹ ರಾಜನಾಗಬಹುದು. ಆದರೆ ಶನಿಯ ಅಸಮಾಧಾನದಿಂದಾಗಿ, ಒಬ್ಬ ರಾಜ ಕೂಡ ಅರೆಕ್ಷಣದಲ್ಲಿ ಬಿಕಾರಿಯಾಗಬಹುದು. ಶನಿಯ ಸಾಡೇಸಾತಿ ಅಥವಾ ಧೇಯ ಎಂಬ ಹೆಸರನ್ನು ಕೇಳಿದಾಗ ಜನರು ಭಯಭೀತರಾಗುತ್ತಾರೆ, ಆದ್ದರಿಂದ ಜನರು ಶನಿದೇವನ ಕೃಪೆಯು ತಮ್ಮ ಮೇಲೆ ಬೀಳಬೇಕೆಂದು ಬಯಸುತ್ತಾರೆ. ಶನಿಗೆ ಪ್ರಿಯವಾದ ಈ 5 ಆಹಾರಗಳನ್ನು ಶನಿವಾರದಂದು ನೈವೇದ್ಯ ಮಾಡಿ ಬಳಿಕ ಸೇವಿಸಿದರೆ, ಶನಿದೇವನ ಕೋಪದಿಂದ ಮುಕ್ತಿ ಪಡೆಯಬಹುದು. 
 

1 /5

ಉದ್ದಿನ ಬೇಳೆ : ಶನಿವಾರದಂದು ಶನಿ ದೇವರಿಗೆ ಉದ್ದಿನ ಬೇಳೆ ನೈವೇದ್ಯ ಮಾಡಲಾಗುತ್ತದೆ. ಈ ದಿನ ಉದ್ದಿನ ಬೇಳೆಯನ್ನು ಸೇವಿಸಿದರೆ ಶನಿದೇವನು ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ. ಇದರಿಂದ ವ್ಯಕ್ತಿ ಶನಿದೇವನ ಕೋಪದಿಂದ ಮುಕ್ತಿ ಹೊಂದುತ್ತಾನೆ ಎಂದು ನಂಬಲಾಗಿದೆ.  

2 /5

ಕಪ್ಪು ಎಳ್ಳು: ಶನಿ ದೇವರ ಪೂಜೆಯಲ್ಲಿ ಕಪ್ಪು ಎಳ್ಳನ್ನು ಬಳಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿವಾರದಂದು ಕಪ್ಪು ಎಳ್ಳನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಶನಿವಾರದಂದು ಕಪ್ಪು ಎಳ್ಳನ್ನು ಸೇವಿಸುವುದರಿಂದ ಶನಿದೇವನ ಅಶುಭ ಪರಿಣಾಮಗಳಿಂದ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ.  

3 /5

ಸಾಸಿವೆ ಎಣ್ಣೆ: ಶನಿದೇವನ ಅನುಗ್ರಹವನ್ನು ಪಡೆಯಲು, ಶನಿವಾರದಂದು ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಲಾಗುತ್ತದೆ. ಜೊತೆಗೆ ಛಾಯಾದಾನ ಮತ್ತು ಸಾಸಿವೆ ಎಣ್ಣೆಯಿಂದ ಶನಿ ದೇವರಿಗೆ ಅಭಿಷೇಕವನ್ನು ಮಾಡಲಾಗುತ್ತದೆ. ಶನಿವಾರದಂದು ಸಾಸಿವೆ ಎಣ್ಣೆಯಿಂದ ಮಾಡಿದ ವಸ್ತುಗಳನ್ನು ಸೇವಿಸುವುದು ಪ್ರಯೋಜನಕಾರಿ, ಆದರೆ ಈ ದಿನ ಸಾಸಿವೆ ಎಣ್ಣೆಯನ್ನು ಖರೀದಿಸಬಾರದು.  

4 /5

ಕಡೆಲೆ ಕಾಳು: ಶನಿದೇವನ ಆಶೀರ್ವಾದ ಪಡೆಯಲು, ಶನಿವಾರದಂದು ಕಡೆಲೆ ಕಾಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಕಡೆಲೆ ಕಾಳನ್ನು ಸೇವಿಸಿದರೆ, ಅದು ವ್ಯಕ್ತಿಗೆ ತುಂಬಾ ಪ್ರಯೋಜನಕಾರಿ. ಇದರಿಂದ ಶನಿ ದೋಷವನ್ನು ತೊಡೆದುಹಾಕಬಹುದು ಎಂದು ನಂಬಲಾಗಿದೆ.    

5 /5

ಗುಲಾಬ್ ಜಾಮೂನ್: ಒಬ್ಬ ವ್ಯಕ್ತಿಯು ಶನಿ ಗ್ರಹದ ದೋಷದಿಂದ ಬಳಲುತ್ತಿದ್ದರೆ, ಅವರು ಶನಿವಾರದಂದು ಶನಿ ದೇವರಿಗೆ ಗುಲಾಬ್ ಜಾಮೂನ್ ಅರ್ಪಿಸಬೇಕು ಮತ್ತು ಅದನ್ನು ಸೇವಿಸಬೇಕು. ಶನಿದೇವನು ಇದರಿಂದ ಸಂತುಷ್ಟನಾಗುತ್ತಾನೆ ಮತ್ತು ಶನಿ ದೋಷದ ನಕಾರಾತ್ಮಕ ಪರಿಣಾಮಗಳಿಂದ ವ್ಯಕ್ತಿಯು ಪರಿಹಾರವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.