Laxmi Narayan Yog: ವರ್ಷದ ಬಳಿಕ ಈ ನಾಲ್ಕು ರಾಶಿಯವರಿಗೆ ಅದ್ಭುತ ಯೋಗ, ಅದೃಷ್ಟವೇ ಬದಲು
Laxmi Narayan Yog: ವೃಷಭ ರಾಶಿಯಲ್ಲಿ ಬುಧ-ಶುಕ್ರರು ಒಟ್ಟಿಗೆ ಕೂಡಿದ್ದು ಇದರಿಂದಾಗಿ ಅತ್ಯಂತ ಮಂಗಳಕರ ಲಕ್ಷ್ಮೀನಾರಾಯಣ ಯೋಗ ರೂಪುಗೊಂಡಿದೆ. ಇದರ ಪರಿಣಾಮವಾಗಿ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ.
Mercury Venus Conjunction: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇತ್ತೀಚೆಗಷ್ಟೇ ಮಾತು, ಬುದ್ದಿ, ಸಂವಹನಕಾರಕ ಬುಧನು ವೃಷಭ ರಾಶಿಯ್ಗೆ ಪ್ರವೇಶಿಸಿದ್ದಾನೆ. ಸಂಪತ್ತು, ವೈಭವ,ಐಷಾರಾಮಿ ಜೀವನಕಾರಕನಾದ ಶುಕ್ರನು ಕೂಡ ಇದೇ ರಾಶಿಚಕ್ರ ಚಿಹ್ನೆಯಲ್ಲಿ ಇರುವುದರಿಂದ ವೃಷಭ ರಾಶಿಯಲ್ಲಿ ಬುಧ-ಶುಕ್ರರ ಯುತಿಯಿಂದ ಲಕ್ಷ್ಮೀನಾರಾಯಣ ಯೋಗ ನಿರ್ಮಾಣವಾಗಿದೆ. ವೃಷಭ ರಾಶಿಯಲ್ಲಿ ಶುಕ್ರನ ಪ್ರವೇಶದಿಂದ ಮಾಲವ್ಯ ರಾಜಯೋಗ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ, ವೃಷಭ ರಾಶಿಯಲ್ಲಿ ಸೂರ್ಯನೂ ಇರುವುದರಿಂದ ಬುಧ-ಸೂರ್ಯರ ಸಂಯೋಗದಿಂದ ಬುಧಾದಿತ್ಯ ಯೋಗ ರೂಪುಗೊಂಡಿದೆ. ಹೀಗೆ ವೃಷಭ ರಾಶಿಯಲ್ಲಿ ಹಲವು ಶುಭ ಯೋಗಗಳ ನಿರ್ಮಾಣದಿಂದ ಕೆಲವು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ.
ವೃಷಭ ರಾಶಿಯಲ್ಲಿ ಮೂರು ರಾಜ ಯೋಗಗಳ ನಿರ್ಮಾಣ:
ವೃಷಭ ರಾಶಿಯಲ್ಲಿ ನಿರ್ಮಾಣವಾಗಿರುವ ಮಾಲವ್ಯ ರಾಜಯೋಗ (Malavya Rajyog), ಬುಧಾದಿತ್ಯ ರಾಜಯೋಗ (Budhaditya Rajyog) ಮತ್ತು ಲಕ್ಷ್ಮೀ ನಾರಾಯಣ ಯೋಗಗಳು (Laxmi Narayan Yog) 12ನೇ ಜೂನ್ 2024 ರವರೆಗೆ ಇರಲಿದ್ದು, ಈ ಸಮಯದಲ್ಲಿ ಕೆಲವು ರಾಶಿಯವರು ಜೀವನದಲ್ಲಿ ಭಾರೀ ಸುಖ-ಸಂಪತ್ತು, ಕೀರ್ತಿ, ಯಶಸ್ಸನ್ನು ಗಳಿಸುತ್ತಾರೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಮೇಷ ರಾಶಿ:
ವೃಷಭ ರಾಶಿಯಲ್ಲಿ ನಿರ್ಮಾಣವಾಗಿರುವ ಮೂರು ಶುಭ ಯೋಗಗಳು (Shubh Yog) ಮೇಷ ರಾಶಿಯವರಿಗೆ ಸಂಪತ್ತನ್ನು ಹೆಚ್ಚಿಸುವುವರ ಜೊತೆಗೆ ಅಪಾರ ಕೀರ್ತಿಯನ್ನು, ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಕೂಡ ನೀಡಲಿದೆ. ಮಕ್ಕಳ ಕಡೆಯಿಂದ ಶುಭ ವಾರ್ತೆಯನ್ನು ನಿರೀಕ್ಷಿಸಬಹುದು.
ವೃಷಭ ರಾಶಿ :
ಸ್ವ ರಾಶಿಯಲ್ಲಿ ನಿರ್ಮಾಣವಾಗಿರುವ ಮಾಲವ್ಯ ರಾಜಯೋಗ, ಬುಧಾದಿತ್ಯ ರಾಜಯೋಗ ಮತ್ತು ಲಕ್ಷ್ಮೀ ನಾರಾಯಣ ಯೋಗಗಳು ಈ ರಾಶಿಯವರಿಗೆ ಬಂಪರ್ ಲಾಭವನ್ನು ನೀಡಲಿದ್ದು, ನಿಮ್ಮ ಬಹುದಿನಗಳ ಕನಸುಗಳು ನನಸು ಮಾಡಲಿವೆ. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದ್ದು, ವ್ಯಾಪಾರ-ವ್ಯವಹಾರ ಮಾಡುವವರಿಗೆ ಸಂಪತ್ತು ವೃದ್ಧಿಯಾಗಲಿದೆ.
ತುಲಾ ರಾಶಿ :
ಈ ಮೂರು ರಾಜಯೋಗಗಳು ತುಲಾ ರಾಶಿಯ ಜನರಿಗೆ ವರದಾನವಿದ್ದಂತೆ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಆದಾಯದ ಮೂಲಗಳು ವೃದ್ಧಿಯಾಗಲಿದೆ. ಹೂಡಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ- Significance of Jupiter: ಗುರು ಗ್ರಹದ ಅನುಗ್ರಹಕ್ಕಾಗಿ ಯಾವ ಮಂತ್ರ ಪಠಿಸಬೇಕು..?
ವೃಶ್ಚಿಕ ರಾಶಿ:
ಲಕ್ಷ್ಮಿನಾರಾಯಣ ಯೋಗವು ವೃಶ್ಚಿಕ ರಾಶಿಯ ಜನರಿಗೆ ಉದ್ಯೋಗದಲ್ಲಿ ಯಶಸ್ಸಿನ ಜೊತೆಗೆ ಬಂಪರ್ ಧನಲಾಭವನ್ನು ಕೂಡ ನೀಡಲಿದೆ. ರಾಜಕಾರಣಿಗಳಿಗೆ ಸಮಯ ಅತ್ಯುತ್ತಮವಾಗಿದೆ. ನಿರುದ್ಯೋಗಿಗಳಿಗೆ ನಿಮ್ಮ ನೆಚ್ಚಿನ ಉದ್ಯೋಗ ದೊರೆಯುವ ಸಾಧ್ಯತೆ ಇದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.