Budh Shukra Yuti in Tula 2022: ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ಗ್ರಹದ ಬದಲಾವಣೆಯೂ ಮಹತ್ವದ್ದಾಗಿದೆ. ಕೆಲವೊಮ್ಮೆ ಗ್ರಹಗಳ ರಾಶಿ ಪರಿವರ್ತನೆಯಿಂದ ಗ್ರಹಗಳ ಸಂಯೋಗ ಉಂಟಾಗುತ್ತದೆ. ಇದು ಎಲ್ಲಾ ರಾಶಿಗಳ ಮೇಲೂ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ನಿನ್ನೆ, ಅಕ್ಟೋಬರ್ 26ರಂದು ಬುಧ ಗ್ರಹವು ತುಲಾ ರಾಶಿಯನ್ನು ಪ್ರವೇಶಿಸಿದೆ. ತುಲಾ ರಾಶಿಯಲ್ಲಿ ಈಗಾಗಲೇ ಶುಕ್ರ, ಸೂರ್ಯ ಮತ್ತು ಕೇತು ಗ್ರಹಗಳ ಉಪಸ್ಥಿತಿ ಇದೆ.   ತುಲಾ ರಾಶಿಯಲ್ಲಿ ಬುಧ ಮತ್ತು ಶುಕ್ರರ ಸಂಯೋಗವು ಲಕ್ಷ್ಮೀ ನಾರಾಯಣ ಯೋಗವನ್ನು ರೂಪಿಸುತ್ತಿದೆ. ಲಕ್ಷ್ಮೀ ನಾರಾಯಣ ಯೋಗವು ಮೂರು ರಾಶಿಯವರಿಗೆ ಅದ್ಭುತ ಪ್ರಯೋಜನಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಈ ಯೋಗದಿಂದ ಯಾವ ರಾಶಿಯವರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಲಕ್ಷ್ಮಿ ನಾರಾಯಣ ಯೋಗ: ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಕೃಪೆಯಿಂದ ಈ ಮೂರು ರಾಶಿಯವರಿಗೆ ಧನ ಪ್ರಾಪ್ತಿ:
ಕನ್ಯಾ ರಾಶಿ:
ಬುಧ-ಶುಕ್ರರ ಸಂಯೋಗದಿಂದ ರೂಪುಗೊಂಡ ಲಕ್ಷ್ಮೀ-ನಾರಾಯಣ ಯೋಗವು ಕನ್ಯಾ ರಾಶಿಯವರಿಗೆ ತುಂಬಾ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಸಾಕಷ್ಟು ಧನಲಾಭವಿರುತ್ತದೆ. ನೀವು ಸಾಲದಿಂದ ಮುಕ್ತರಾಗಬಹುದು. ದೀರ್ಘಕಾಲದಿಂದ ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ.  ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ. ಉದ್ಯೋಗಿಗಳ ಸಂಬಳ ಹೆಚ್ಚಾಗಬಹುದು. ಗಳಿಕೆಯ ಹೊಸ ಮಾರ್ಗಗಳನ್ನು ಕಂಡುಕೊಳ್ಳಬಹುದು. 


ಇದನ್ನೂ ಓದಿ- Budh Gochar: ದೀಪಾವಳಿ ನಂತರ ಈ ರಾಶಿಯವರಿಗೆ ನಷ್ಟ


ಧನು ರಾಶಿ:   ಈ ಲಕ್ಷ್ಮೀ ನಾರಾಯಣ ಯೋಗವು ಧನು ರಾಶಿಯವರಿಗೆ ವರವನ್ನು ನೀಡುತ್ತದೆ. ಬುಧ-ಶುಕ್ರರ ಸಂಯೋಗದಿಂದ ಉದ್ಯೋಗದಲ್ಲಿ ಅಪೇಕ್ಷಿತ ಪ್ರಗತಿಯನ್ನು ಪಡೆಯಬಹುದು. ಪ್ರತಿಷ್ಠೆ, ಗೌರವ ಹೆಚ್ಚಾಗಲಿದೆ. ಆದಾಯವೂ ಹೆಚ್ಚಲಿದೆ. ಮನೆಯಲ್ಲಿ ಸಂತೋಷ ಇರುತ್ತದೆ. ವ್ಯಾಪಾರ ವೃದ್ಧಿಯಾಗಲಿದೆ. ಅದೃಷ್ಟಕ್ಕೆ ಸಂಪೂರ್ಣ ಬೆಂಬಲ ಸಿಗಲಿದೆ.  


ಇದನ್ನೂ ಓದಿ- ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ: ಈ ಕೆಲಸ ಮಾಡಿದ್ರೆ ನಿಮಗೆ ಅಪಾರ ಸಂಪತ್ತು ದೊರೆಯಲಿದೆ!


ಮಕರ ರಾಶಿ:  ಲಕ್ಷ್ಮೀ ನಾರಾಯಣ ಯೋಗವು ಮಕರ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಪ್ರಗತಿ ಇರುತ್ತದೆ ಮತ್ತು ವಿತ್ತೀಯ ಲಾಭವೂ ಇರುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಇಷ್ಟು ದಿನ ಬೇರೆಡೆ ಸಿಲುಕಿದ್ದ ಹಣ ಈ ಸಮಯದಲ್ಲಿ ನಿಮ್ಮ ಕೈ ಸೇರಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುವರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.