ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ: ಈ ಕೆಲಸ ಮಾಡಿದ್ರೆ ನಿಮಗೆ ಅಪಾರ ಸಂಪತ್ತು ದೊರೆಯಲಿದೆ!

ಕಾರ್ತಿಕ ಮಾಸದಲ್ಲಿ ತುಳಸಿ ಪೂಜಾ ವಿಧಾನ: ಇಂದಿನಿಂದ ಸ್ನಾನ ಮತ್ತು ದಾನದ ಮಾಸ ಕಾರ್ತಿಕ ಮಾಸ ಆರಂಭವಾಗಿದೆ. ಈ ತಿಂಗಳಲ್ಲಿ ಮಾಡುವ ತುಳಸಿ ಪರಿಹಾರಗಳು ನಿಮಗೆ ಅಪಾರ ಸಂಪತ್ತನ್ನು ತರುತ್ತವೆ.

Written by - Puttaraj K Alur | Last Updated : Oct 10, 2022, 10:11 AM IST
  • ಕಾರ್ತಿಕ ಮಾಸದಲ್ಲಿ ತುಳಸಿ ಪೂಜಿಸುವುದರ ಜೊತೆಗೆ ತುಳಸಿ ಗಿಡ ದಾನ ಮಾಡುವುದು ಶ್ರೇಷ್ಠ
  • ಕಾರ್ತಿಕ ಮಾಸದ ಗುರುವಾರ ತುಳಸಿ ಗಿಡಕ್ಕೆ ಹಸಿ ಹಾಲು ಬೆರೆಸಿದ ನೀರನ್ನು ಅರ್ಪಿಸಬೇಕು
  • ಕಾರ್ತಿಕ ಮಾಸದಲ್ಲಿ ಶ್ರೀ ಹರಿ ಮತ್ತು ತುಳಸಿಗೆ ಮದುವೆ ಮಾಡಿಸಿದರೆ ನಿಮಗೆ ಒಳಿತಾಗಲಿದೆ
ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ: ಈ ಕೆಲಸ ಮಾಡಿದ್ರೆ ನಿಮಗೆ ಅಪಾರ ಸಂಪತ್ತು ದೊರೆಯಲಿದೆ! title=
ಕಾರ್ತಿಕ ಮಾಸದಲ್ಲಿ ತುಳಸಿ ಪೂಜಾ ವಿಧಾನ

ನವದೆಹಲಿ: ಸ್ಕಂದ ಪುರಾಣದ ಪ್ರಕಾರ ಕಾರ್ತಿಕ ಮಾಸವನ್ನು ಎಲ್ಲಾ ತಿಂಗಳುಗಳಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಕಾರ್ತಿಕ ಮಾಸವು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಗೆ ತುಂಬಾ ಪ್ರಿಯವಾಗಿದೆ. ಈ ತಿಂಗಳಲ್ಲಿ ಭಗವಾನ್ ವಿಷ್ಣುವು 4 ತಿಂಗಳ ನಿದ್ರೆಯಿಂದ ಎಚ್ಚರಗೊಂಡು ತುಳಸಿಯೊಂದಿಗೆ ಮದುವೆಯಾಗುತ್ತಾನೆ. ಇಂದು ಅಂದರೆ ಅಕ್ಟೋಬರ್ 10ರಂದು ಕಾರ್ತಿಕ ಮಾಸವು ಸೋಮವಾರದಿಂದ ಪ್ರಾರಂಭವಾಗಿದ್ದು, ಇದು ನವೆಂಬರ್ 8ರವರೆಗೆ ಇರುತ್ತದೆ. ಈ ತಿಂಗಳಲ್ಲಿ ಪವಿತ್ರ ನದಿಗಳ ನೀರಿನಿಂದ ಸ್ನಾನ ಮಾಡುವುದು ಮತ್ತು ಸೂರ್ಯೋದಯಕ್ಕೆ ಮುಂಚಿತವಾಗಿ ತುಳಸಿ ಪೂಜೆಯನ್ನು ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆದ್ದರಿಂದ ಇದನ್ನು ಕಾರ್ತಿಕ ಸ್ನಾನದ ಮಾಸ ಎಂದೂ ಸಹ ಕರೆಯುತ್ತಾರೆ.

ಇದನ್ನೂ ಓದಿ: Astrology tips : ಈ ಜನರು ನಾಯಿ ಸಾಕುವುದು ಶುಭವಲ್ಲ, ಜೀವನದಲ್ಲಿ ತುಂಬಾ ತೊಂದರೆ ಎದುರಿಸಬೇಕಾಗುತ್ತೆ!

ತಾಯಿ ಲಕ್ಷ್ಮಿದೇವಿ ಅಪಾರ ಸಂಪತ್ತು ನೀಡುತ್ತಾಳೆ

ಈ ತಿಂಗಳಲ್ಲಿ ಲಕ್ಷ್ಮಿದೇವಿಯು ಭೂಮಿಯಲ್ಲಿ ಸಂಚರಿಸುತ್ತಾಳೆ ಮತ್ತು ಭಕ್ತರಿಗೆ ಅಪಾರ ಸಂಪತ್ತನ್ನು ನೀಡುತ್ತಾಳೆ ಎಂದು ನಂಬಲಾಗಿದೆ. ಈ ತಿಂಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ ಮತ್ತು ಲಕ್ಷ್ಮಿದೇವಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಈ ತಿಂಗಳು ಲಕ್ಷ್ಮಿದೇವಿಯನ್ನು ಮೆಚ್ಚಿಸಲು ತುಳಸಿ ಸಸ್ಯಕ್ಕೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಮಾಡಬೇಕು. ಇದು ನಿಮಗೆ ಅಪಾರ ಸಂಪತ್ತನ್ನು ನೀಡುತ್ತದೆ. ಕಾರ್ತಿಕ ಮಾಸದಲ್ಲಿ ವಿಷ್ಣು ಮತ್ತು ಲಕ್ಷ್ಮಿಯ ಆಶೀರ್ವಾದ ಪಡೆಯಲು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ನಂತರ ತುಳಸಿಗೆ ನೀರನ್ನು ಅರ್ಪಿಸಬೇಕು. ಈ ಸಂದರ್ಭದಲ್ಲಿ ‘ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನಿ’ ಮತ್ತು ‘ಆಧಿ ವ್ಯಾಧಿ ಹರ ನಿತ್ಯಂ, ತುಳಸಿ ತ್ವಂ ನಮೋಸ್ತುತೇ..’ ಎಂಬ ಮಂತ್ರವನ್ನು ಪಠಿಸಬೇಕು. ಸಂಜೆ ತುಳಸಿ ಕವಚದಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು. ಇದನ್ನು ಮಾಡುವುದರಿಂದ ಲಕ್ಷ್ಮಿ ಮಾತೆ ತುಂಬಾ ಸಂತೋಷಪಡುತ್ತಾಳೆ.

ಇದನ್ನೂ ಓದಿ: Venus Transit In Libra 2022: 9 ದಿನಗಳ ಬಳಿಕ 3 ರಾಶಿಗಳ ಮೇಲೆ ಧನ-ವೈಭವದ ವೃಷ್ಟಿ

  • ಕಾರ್ತಿಕ ಮಾಸದಲ್ಲಿ ತುಳಸಿಯನ್ನು ಪೂಜಿಸುವುದರ ಜೊತೆಗೆ ತುಳಸಿ ಗಿಡವನ್ನು ದಾನ ಮಾಡುವುದು ಸಹ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಅದೇ ರೀತಿ ಈ ಮಾಸದಲ್ಲಿ ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಬಹಳಷ್ಟು ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ.
  • ಕಾರ್ತಿಕ ಮಾಸದ ಗುರುವಾರ ತುಳಸಿ ಗಿಡಕ್ಕೆ ಹಸಿ ಹಾಲು ಬೆರೆಸಿದ ನೀರನ್ನು ಅರ್ಪಿಸಬೇಕು.
  • ಕಾರ್ತಿಕ ಮಾಸದಲ್ಲಿ ಶ್ರೀ ಹರಿ ಮತ್ತು ತುಳಸಿಗೆ ಮದುವೆ ಮಾಡಿಸಬೇಕು. ಇದರಿಂದ ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿದೇವಿ ಬಹಳ ಸಂತೋಷಗೊಳ್ಳಲಿದ್ದು, ನಿಮ್ಮ ಮನೆಯಲ್ಲೂ ಸಹ ಸಂತೋಷ ತರುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News