ಬೆಂಗಳೂರು : ಈ ವರ್ಷ 59 ದಿನಗಳವರೆಗೆ ಶ್ರಾವಣ ಇರಲಿದೆ.  ಅಲ್ಲದೆ ಶ್ರಾವಣದಲ್ಲಿ  2 ಶಿವರಾತ್ರಿ, 4 ಪ್ರದೋಷ ವ್ರತ ಕೂಡಾ ಬರುತ್ತದೆ.  ಮಾಸಿಕ ಶಿವರಾತ್ರಿಗೆ ಬಹಳ ಪ್ರಾಮುಖ್ಯತೆ ಇದೆ. ಭೋಲೆನಾಥನಿಗೆ ಸಮರ್ಪಿತವಾದ ಶ್ರಾವಣ ಮಾಸದ ಶಿವರಾತ್ರಿಯು ವಿಶೇಷವಾಗಿರುತ್ತದೆ. ಈ ಬಾರಿ ಶ್ರಾವಣದಲ್ಲಿ 2 ಶಿವರಾತ್ರಿಗಳು ಬರಲಿವೆ. ಈ ರೀತಿಯಾಗಿ ಶಿವ ಭಕ್ತರಿಗೆ ಭೋಲೆನಾಥನನ್ನು ಮೆಚ್ಚಿಸಲು ಎರಡು ಬಾರಿ ಅವಕಾಶ ಸಿಗುತ್ತದೆ. 


COMMERCIAL BREAK
SCROLL TO CONTINUE READING

ಈ ದಿನಾಂಕದಂದು ಶ್ರಾವಣ ಎರಡನೇ ಶಿವರಾತ್ರಿ : 
ಮಾಸಿಕ ಶಿವರಾತ್ರಿಯನ್ನು ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಆಚರಿಸಲಾಗುತ್ತದೆ. ಶ್ರಾವಣ ಮಾಸದ ಒಂದು ಶಿವರಾತ್ರಿಯು ಈಗಾಗಲೇ ಜುಲೈ 15  ರಂದು ಬಂದಿದ್ದರೆ, ಅಧಿಕಮಾಸದ ಶಿವರಾತ್ರಿಯು ಆಗಸ್ಟ್ 14  ರಂದು ಬೀಳಲಿದೆ.  ಶಿವರಾತ್ರಿಯ ದಿನದಂದು, ಶಿವ ಮತ್ತು ತಾಯಿ ಪಾರ್ವತಿಯನ್ನು ಧಾರ್ಮಿಕ ವಿಧಿಗಳೊಂದಿಗೆ ಪೂಜಿಸಲಾಗುತ್ತದೆ. ಹೀಗೆ ಮಾಡುವುದರಿಂದ ಶಿವನು ಪ್ರಸನ್ನನಾಗುತ್ತಾನೆ. 


ಇದನ್ನೂ ಓದಿ : ಇಪ್ಪತ್ನಾಲ್ಕು ಗಂಟೆಗಳಲ್ಲಿ ನಿಮ್ಮನ್ನು ಸಾಹುಕಾರನನ್ನಾಗಿಸುತ್ತವೆ ಅರಿಶಿನದ ಈ ಉಪಾಯಗಳು!


ಶ್ರಾವಣ ಶಿವರಾತ್ರಿ ಈ ರಾಶಿಯವರಿಗೆ ಮಂಗಳ :  
ಶ್ರಾವಣ ಮಾಸದ ಎರಡನೇ ಶಿವರಾತ್ರಿ ಕೆಲವು ರಾಶಿಯವರಿಗೆ  ಮಂಗಳಕರವಾಗಿರುತ್ತದೆ. ಈ ರಾಶಿಯವರ ಮೇಲೆ ಶಿವನು ಅತಿಯಾಗಿ ದಯೆ ತೋರುತ್ತಾನೆ.


ವೃಷಭ ರಾಶಿ : ಈ ಶ್ರಾವಣ  ಶಿವರಾತ್ರಿಯು ವೃಷಭ ರಾಶಿಯವರಿಗೆ ಬಹಳ ಶುಭಕರವಾಗಿರಲಿದೆ. ಈ ರಾಶಿಯವರು ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಆದಾಯ ಹೆಚ್ಚಾಗುತ್ತದೆ. ಇದ್ದಕ್ಕಿದ್ದಂತೆ ಹಣ ಸಿಗುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಶಿವನ ಕೃಪೆಯಿಂದ ಉನ್ನತ ಸ್ಥಾನ, ಗೌರವ ಸಿಗಲಿದೆ. 


ಇದನ್ನೂ ಓದಿ : ಸಿಂಹ ರಾಶಿಯಲ್ಲಿ ಚಂದ್ರ-ಮಂಗಳರ ಜೊತೆ ಶುಕ್ರನ ಮೈತ್ರಿ ತ್ರಿಗ್ರಹಿ ಯೋಗದಿಂದ ಈ ಜಾತಕದವರ ಮೇಲೆ ಅಪಾರ ಧನವೃಷ್ಟಿ!


ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರಿಗೆ ಶ್ರಾವಣ ಶಿವರಾತ್ರಿಯು ತುಂಬಾ ಅದೃಷ್ಟಕರವಾಗಿರುತ್ತದೆ. ಈ ರಾಶಿಯವರು ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವೃತ್ತಿ-ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ಆದಾಯ ಹೆಚ್ಚಲಿದೆ. ಅನಿರೀಕ್ಷಿತವಾಗಿ ಹಣ ಸಿಗುತ್ತದೆ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. 


ಸಿಂಹ ರಾಶಿ : ಶ್ರಾವಣ ಎರಡನೇ ಶಿವರಾತ್ರಿಯು ಸಿಂಹ ರಾಶಿಯವರಿಗೆ  ಲಾಭಗಳನ್ನು ನೀಡುತ್ತದೆ. ಜೀವನದಲ್ಲಿ ನಡೆಯುತ್ತಿದ್ದ ಏರುಪೇರು ಈಗ ಕೊನೆಗೊಳ್ಳುತ್ತದೆ. ಸ್ಥಗಿತಗೊಂಡ ಕೆಲಸಗಳು ಈಗ ಪ್ರಾರಂಭವಾಗುತ್ತವೆ.  ವೃತ್ತಿಜೀವನಕ್ಕೂ ಸಮಯ ಉತ್ತಮವಾಗಿರುತ್ತದೆ. 


ಇದನ್ನೂ ಓದಿ : ಲಕ್ಷ್ಮೀ ನಾರಾಯಣ ಯೋಗದಿಂದ ಬೆಳಗುವುದು ಈ ರಾಶಿಯವರ ಭಾಗ್ಯ ! ಒಲಿದು ಬರುವುದು ಧನಸಂಪತ್ತು


ಕನ್ಯಾ ರಾಶಿ  : ಶ್ರಾವಣ ಶಿವರಾತ್ರಿಯು ಕನ್ಯಾ ರಾಶಿಯ ಜನರ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಭೋಲೇನಾಥನ ವಿಶೇಷ ಕೃಪೆಯಿಂದ ಬಡ್ತಿ ಸಿಕ್ಕಿ ವೇತನ ಹೆಚ್ಚಳವಾಗುವುದು.  ವ್ಯಾಪಾರದಲ್ಲಿಯೂ ಲಾಭವಾಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.