ಸಿಂಹ ರಾಶಿಯಲ್ಲಿ ಚಂದ್ರ-ಮಂಗಳರ ಜೊತೆ ಶುಕ್ರನ ಮೈತ್ರಿ ತ್ರಿಗ್ರಹಿ ಯೋಗದಿಂದ ಈ ಜಾತಕದವರ ಮೇಲೆ ಅಪಾರ ಧನವೃಷ್ಟಿ!

Spiritual News In Kannada: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯಲ್ಲಿ ತ್ರಿಗ್ರಹಿ ಯೋಗ ರೂಪುಗೊಳ್ಳಲಿದ್ದು, ಇದರಿಂದ ಕೆಲ ರಾಶಿಗಳ ಜಾತಕದವರಿಗೆ ಆಕಸ್ಮಿಕ ಧನಲಾಭದ ಜೊತೆಗೆ ವೃತ್ತಿ ಜೀವನದಲ್ಲಿ ಉನ್ನತಿಯ ಯೋಗ ಪ್ರಾಪ್ತಿಯಾಗಲಿದೆ. 
 

ಬೆಂಗಳೂರು: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ಗೋಚರಿಸಿ ಶುಭ ಹಾಗೂ ಅಶುಭಯೋಗಗಳನ್ನು ರೂಪಿಸುತ್ತವೆ. ಇನ್ನೊಂದೆಡೆ ಜೋತಿಷ್ಯದಲ್ಲಿ ಶುಕ್ರನನ್ನು (Trigrahi Yog In Leo) ಅತ್ಯಂತ ಶುಭ ಗ್ರಹ ಎಂದು ಭಾವಿಸಲಾಗಿದೆ. ಶುಕ್ರ ಧನ-ವೈಭವ, ಆಕರ್ಷಣೆಯ ಕಾರಕ ಗ್ರಹ ಎಂದು ಭಾವಿಸಲಾಗಿದೆ. ಅದರಲ್ಲಿಯೂ ಒಂದು ವೇಳೆ ಆತ ಮಂಗಳ ಹಾಗೂ ಚಂದ್ರನ ಜೊತೆಗೆ ಮೈತ್ರಿ ಮಾಡಿಕೊಂಡಾಗ ಶುಕ್ರನ ಶುಭ ಫಲ ಹಲವು ಪಟ್ಟು ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಇನ್ನೊಂದೆಡೆ ಜೋತಿಷ್ಯ ಶಾಸ್ತ್ರದಲ್ಲಿ ಮಂಗಳನನ್ನು ಸಾಹಸ, ವಿಜಯ ಹಾಗೂ ಚಂದ್ರನನ್ನು ಆರ್ಥಿಕ ಉನ್ನತಿ ಮತ್ತು ಸುಖಕಾರಕ ಗ್ರಹ ಎಂದು ಭಾವಿಸಲಾಗಿದೆ. ಪ್ರಸ್ತುತ ಸಿಂಹ ರಾಶಿಯಲ್ಲಿ ಶುಕ್ರ ಹಾಗೂ ಮಂಗಳ ವಿರಾಜಮಾನರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಇಂದು ಬೆಳಗ್ಗೆ 10.55 ನಿಮಿಷಕ್ಕೆ ಚಂದ್ರ ಕೂಡ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಹೀಗಾಗಿ ಸಿಂಹ ರಾಶಿಯಲ್ಲಿ ಶುಕ್ರ-ಮಂಗಳ-ಚಂದ್ರರ ಮೈತ್ರಿಯಿಂದ ತ್ರಿಗ್ರಹಿ ಯೋಗ ನಿರ್ಮಾಣಗೊಂಡಿದೆ. ಈ ತ್ರಿಗ್ರಹಿ ಯೋಗ ನಿರ್ಮಾಣದಿಂದ ಕೆಲ ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ. ಹಾಗಾದರೆ ಬನ್ನಿ ಈ ತ್ರಿಗ್ರಹಿ ಯೋಗ ನಿರ್ಮಾಣದಿಂದ ಯಾವ ರಾಶಿಗಳಿಗೆ ಲಾಭ ಸಿಗಲಿದೆ ತಿಳಿದುಕೊಳ್ಳೋಣ ಬನ್ನಿ, 

 

ಇದನ್ನೂ ಓದಿ-ಕರ್ಕ ರಾಶಿಯಲ್ಲಿ ತ್ರಿಗ್ರಹಿ ಯೋಗ, ಬುಧ-ಸೂರ್ಯರ ಕೃಪೆಯಿಂದ 3 ರಾಶಿಗಳ ಜನರ ಭಾಗ್ಯ ಫಳಫಳ ಹೊಳೆಯಲಿದೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Spiritual News In Kannada: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯಲ್ಲಿ ತ್ರಿಗ್ರಹಿ ಯೋಗ ರೂಪುಗೊಳ್ಳಲಿದ್ದು, ಇದರಿಂದ ಕೆಲ ರಾಶಿಗಳ ಜಾತಕದವರಿಗೆ ಆಕಸ್ಮಿಕ ಧನಲಾಭದ ಜೊತೆಗೆ ವೃತ್ತಿ ಜೀವನದಲ್ಲಿ ಉನ್ನತಿಯ ಯೋಗ ಪ್ರಾಪ್ತಿಯಾಗಲಿದೆ.   

2 /5

ಮೇಷ ರಾಶಿ: ಸಾಮಾನ್ಯವಾಗಿ ಶುಕ್ರನನ್ನು ಧನಭಾವದ ಅಧಿಪತಿ ಎಂದು ಭಾವಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಚಂದ್ರ ಹಾಗೂ ಮಂಗಳರ ಜೊತೆಗೆ ಆತನ ಮೈತ್ರಿ ಧನ ಯೋಗ ರೂಪಿಸುತ್ತಿದೆ. ಹೀಗಾಗಿ ತ್ರಿಗ್ರಹಿ ಯೋಗ ಮೇಷ ರಾಶಿಯ ಜಾತಕದವರ ಪಾಲಿಗೆ ವಿಶೇಷ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಇದರಿಂದ ನಿಮಗೆ ಸಾಲಬಾಧೆಯಿಂದ ಮುಕ್ತಿ ಸಿಗುವುದರ ಜೊತೆಗೆ ಆಕಸ್ಮಿಕ ಧನಲಾಭ ಉಂಟಾಗಲಿದೆ. ಉನ್ನತಿ ಹಾಗೂ ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಲಿದೆ. ಪದೋನ್ನತಿಯ ಜೊತೆಗೆ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ.  

3 /5

ಮಿಥುನ ರಾಶಿ: ಶುಕ್ರ-ಮಂಗಳ ಹಾಗೂ ಚಂದ್ರರ ಮೈತ್ರಿಯಿಂದ ನಿರ್ಮಾಣಗೊಳ್ಳುತ್ತಿರುವ ಈ ತ್ರಿಗ್ರಹಿ ಯೋಗ ನಿಮ್ಮ ಪಾಲಿಗೂ ಕೂಡ ಅತ್ಯದ್ಭುತ ಸಾಬೀತಾಗಲಿದೆ. ವೃತ್ತಿಜೀವನ ಹಾಗೂ ವ್ಯಾಪಾರದಲ್ಲಿ ಉನ್ನತಿಯ ಯೋಗ ರೂಪುಗೊಳ್ಳುತ್ತಲಿದೆ. ಭಾರಿ ಧನಲಾಭದಿಂದಾಗಿ ನೀವು ಆಸ್ತಿ-ಪಾಸ್ತಿ ಖರೀದಿಸುವ ಸಾಧ್ಯತೆ ಇದೆ. ಕೋರ್ಟ್-ಕಚೇರಿ ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.   

4 /5

ಸಿಂಹ ರಾಶಿ: ಹಾಗೆ ನೋಡಿದರೆ ಸಿಂಹ ರಾಶಿಯಲ್ಲಿ ಶುಕ್ರ-ಮಂಗಳ ಹಾಗೂ ಚಂದ್ರರ ಮೈತ್ರಿಯ ಕಾರಣ ತ್ರಿಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ. ಹೀಗಿರುವಾಗ ನಿಮಗೂ ಕೂಡ ಈ  ಯೋಗ ಆಕಸ್ಮಿಕ ಧನಲಾಭವನ್ನು ತಂದು ಕೊಡಲಿದೆ. ನೌಕರ ವರ್ಗದ ಜನರಿಗೆ ನೌಕರಿಯಲ್ಲಿ ಪ್ರಮೋಷನ್ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಮಕ್ಕಳ ಕಡೆಯಿಂದ ಶುಭ ಸಮಾಚಾರ ಸಿಗುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ನಡೆಸುತ್ತಿರುವವರಿಗೆ ಯಶಸ್ಸು ಸಿಗುವ ಸಾಧ್ಯತೆ ಇದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)