ತ್ರಿಗ್ರಹಿ ಯೋಗದಿಂದ ಈ ರಾಶಿಯವರ ಜೀವನದಲ್ಲಿ ಧನವೃಷ್ಟಿ! ನನಸಾಗುವುದು ಹೊಸ ಮನೆಯ ಕನಸು
ಬುಧ, ಶುಕ್ರ, ಮಂಗಳ ಗ್ರಹಗಳು ಸೇರಿ ಸಿಂಹ ರಾಶಿಯಲ್ಲಿ ತ್ರಿಗ್ರಹಿ ಯೋಗ ಉಂಟಾಗುತ್ತಿದೆ. ಈ 4 ರಾಶಿಯವರ ಸಮಯವು ಅತ್ಯುತ್ತಮವಾಗಿರುತ್ತದೆ.
ಬೆಂಗಳೂರು : ಗ್ರಹಗಳ ಚಲನೆ, ಸ್ಥಾನ ಬದಲಾವಣೆ ಬಗ್ಗೆ ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಇದು ಮಾನವ ಜೀವನ ಮತ್ತು ಭೂಮಿಯ ಮೇಲೆ ಪರಿಣಾಮ ಬೀರುತ್ತದೆ. ಇದೇ ವೇಳೆ ಬುಧ, ಶುಕ್ರ, ಮಂಗಳ ಗ್ರಹಗಳು ಸೇರಿ ಸಿಂಹ ರಾಶಿಯಲ್ಲಿ ತ್ರಿಗ್ರಹಿ ಯೋಗ ಉಂಟಾಗುತ್ತಿದೆ. ಇದರ ಪರಿಣಾಮವು 4 ರಾಶಿಯವರ ಮೇಲೆ ಬಹಳವಾಗಿ ಗೋಚರಿಸುತ್ತದೆ. ಈ ಸಮಯದಲ್ಲಿ, ಈ 4 ರಾಶಿಯವರ ಸಮಯವು ಅತ್ಯುತ್ತಮವಾಗಿರುತ್ತದೆ.
ಕುಂಭ ರಾಶಿ :
ಕುಂಭ ರಾಶಿಯವರಿಗೆ ಮಂಗಳ, ಸಿಂಹ ಮತ್ತು ಶುಕ್ರರ ಸಂಯೋಗದಿಂದ ರೂಪುಗೊಂಡ ತ್ರಿಗ್ರಹಿ ಯೋಗವು ಫಲಕಾರಿಯಾಗಿ ಕಂಡು ಬರಲಿದೆ. ಇದ್ದಕ್ಕಿದ್ದಂತೆ ಹಣದ ಹರಿವು ಹೆಚ್ಚಾಗುತ್ತದೆ. ವ್ಯಾಪಾರ ಮಾಡುವ ಈ ರಾಶಿಯವರಿಗೆ ಲಾಭವಾಗುವುದು. ಆದಾಯ ಹೆಚ್ಚಾಗಬಹುದು. ಇದಲ್ಲದೇ ನಿಮ್ಮ ಜಾತಕದಲ್ಲಿ ಶಶ ಮತ್ತು ಕೇಂದ್ರ ತ್ರಿಕೋನ ರಾಜಯೋಗವೂ ನಿರ್ಮಾಣವಾಗುತ್ತಿದ್ದು, ಆತ್ಮವಿಶ್ವಾಸದ ಕೊರತೆ ಇರುವುದಿಲ್ಲ. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಗೆಲುವು ಸಾಧಿಸುವುದು ಸಾಧ್ಯವಾಗುತ್ತದೆ.
ಇದನ್ನೂ ಓದಿ : ಆಗಸ್ಟ್ 7 ರಂದು ನಿರ್ಮಾಣಗೊಳ್ಳಲಿದೆ ಗಜಕೇಸರಿ ರಾಜಯೋಗ, ಈ ಜನರಿಗೆ ಅಪಾರ ಧನ ವೃದ್ಧಿಯೋಗ!
ವೃಷಭ ರಾಶಿ :
ಅದೃಷ್ಟ ವೃಷಭ ರಾಶಿಯವರ ಕೈ ಹಿಡಿಯಲಿದೆ. ಸಮಯ ಇವರ ಪರವಾಗಿರುತ್ತದೆ. ಜೀವನದ ಸೌಕರ್ಯಗಳು ಹೆಚ್ಚಾಗುತ್ತವೆ. ಹೊಸ ಉದ್ಯೋಗವನ್ನು ಪಡೆಯಬಹುದು. ಕಚೇರಿ ಕಾರ್ಯಗಳಲ್ಲಿಯೂ ಯಶಸ್ಸು ಸಿಗಲಿದೆ. ಆರೋಗ್ಯ ಚೆನ್ನಾಗಿರುತ್ತದೆ. ಈ ಸಮಯದಲ್ಲಿ ನೀವು ಆಸ್ತಿ ಮತ್ತು ವಾಹನವನ್ನು ಖರೀದಿಸಬಹುದು.
ಸಿಂಹ ರಾಶಿ :
ಶುಕ್ರ, ಮಂಗಳ ಮತ್ತು ಬುಧದ ಸಂಯೋಜನೆಯು ಸಿಂಹ ರಾಶಿಯವರಿಗೆ ಅನುಕೂಲಕರವಾಗಿ ಇರಲಿದೆ. ನಿಮ್ಮ ರಾಶಿಯಲ್ಲಿ ಈ ಯೋಗವು ರೂಪುಗೊಳ್ಳುತ್ತದೆ. ಇದಲ್ಲದೆ ಲಾಭ ಮತ್ತು ಸಂಪತ್ತಿನ ಅಧಿಪತಿ ಶುಕ್ರ ನಿಮ್ಮ ರಾಶಿಯಲ್ಲಿದ್ದಾನೆ. ಮತ್ತೊಂದೆಡೆ, ಸಂತೋಷದ ಅಧಿಪತಿಯಾದ ಮಂಗಳ ಕೂಡಾ ನಿಮ್ಮದೇ ರಾಶಿಯಲ್ಲಿದ್ದಾನೆ. ಇದರಿಂದಾಗಿ ವಾಹನ ಮತ್ತು ಆಸ್ತಿ ಖರೀದಿಸಬಹುದು.
ಇದನ್ನೂ ಓದಿ : ಈ ರಾಶಿಯಲ್ಲಿ ಭದ್ರ ರಾಜಯೋಗ ! ಕಷ್ಟಗಳೆಲ್ಲಾ ಕಳೆದು ಸಂತಸದ ಹೊನಲು ಹರಿಯುವ ಸಮಯ
ತುಲಾ ರಾಶಿ :
ತುಲಾ ರಾಶಿಯವರಿಗೆ ಈ ಸಮಯ ತುಂಬಾ ಒಳ್ಳೆಯದು. ಈ ಸಮಯದಲ್ಲಿ ನಿಮ್ಮ ಗೌರವ ಮತ್ತು ಸ್ಥಾನಮಾನವು ಹೆಚ್ಚಾಗುತ್ತದೆ. ಕಾನೂನು ವಿಷಯಗಳಲ್ಲಿ ಜಯ ಗಳಿಸುತ್ತೀರಿ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಕೆಲಸ ಮಾಡುವವರು ಬಡ್ತಿ ಪಡೆಯಬಹುದು. ಸ್ವಂತ ಮನೆಯ ನಿಮ್ಮ ಕನಸು ಈ ಬಾರಿ ನನಸಾಗುವ ಸಾಧ್ಯತೆ ಹೆಚ್ಚಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ