Lucky Name: ಈ ಅಕ್ಷರದ ಹೆಸರಿನವರು ರಾಜರಂತೆ ಬದುಕಲು ಇಚ್ಚಿಸುತ್ತಾರೆ
Lucky Name Astrology: ವ್ಯಕ್ತಿಯ ಹೆಸರಿನ ಪ್ರಭಾವವು ಅವನ ಜೀವನದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ನಾಮ ಶಾಸ್ತ್ರದಲ್ಲಿ, ವ್ಯಕ್ತಿಯ ಹೆಸರಿನಿಂದ ವ್ಯಕ್ತಿಯ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಅದರ ಪ್ರಕಾರ ಕೆಲವು ಅಕ್ಷರಗಳಿಂದ ಆರಂಭವಾಗುವ ಹೆಸರಿನವರು ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ ಎನ್ನಲಾಗುತ್ತದೆ.
ಅದೃಷ್ಟದ ಹೆಸರು: ಹೆಸರಿನ ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದ ಅವರ ಸ್ವಭಾವವನ್ನು ತಿಲಿಯಬಹುದು. ವ್ಯಕ್ತಿಯ ಹೆಸರಿನ ಪ್ರಭಾವವು ಅವನ ಜೀವನದ ಮೇಲೆ ಕಂಡುಬರುತ್ತದೆ. ಅದಕ್ಕಾಗಿಯೇ ಮಕ್ಕಳಿಗೆ ನಾಮಕರಣ ಮಾಡುವಾಗ ಅವರ ಜನ್ಮ ದಿನಾಂಕ ಸಮಯದ ಪ್ರಕಾರ ಹೆಸರಿಡಲು ಸೂಚಿಸಲಾಗುತ್ತದೆ. ಹೆಸರೇ ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ನಿರ್ಧರಿಸುತ್ತದೆ. ಜ್ಯೋತಿಷ್ಯದ ಪ್ರಕಾರ ಕೆಲವು ಅಕ್ಷರಗಳಿಂದ ಹೆಸರು ಆರಂಭವಾಗುವ ಜನರು ಸದಾ ಐಷಾರಾಮಿ ಜೀವನವನ್ನು ನಡೆಸಲು ಇಷ್ಟಪಡುತ್ತಾರಂತೆ. ಅಂತಹವರ ಬಗ್ಗೆ ತಿಳಿಯೋಣ...
ಈ ಅಕ್ಷರದ ಹೆಸರಿನ ಜನರು ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ:-
A ಅಕ್ಷರದ ಹೆಸರಿನ ಜನರು:-
ಈ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರ ಜೀವನದಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ. ಈ ಜನರು ಐಷಾರಾಮಿ ವಸ್ತುಗಳನ್ನು ಇಷ್ಟಪಡುತ್ತಾರೆ. ಅವರು ತುಂಬಾ ಶ್ರಮಜೀವಿಗಳು. ಕಷ್ಟಪಟ್ಟು ಕೆಲಸ ಮಾಡುವ ಮೂಲಕ, ಅವರು ತಮ್ಮ ಇಚ್ಛೆಯನ್ನು ಪೂರೈಸುತ್ತಾರೆ. ತಮ್ಮ ಕಠಿಣ ಪರಿಶ್ರಮದಿಂದ ಅವರು ಅತ್ಯಂತ ಕಷ್ಟಕರವಾದ ಕೆಲಸಗಳನ್ನು ನಿಮಿಷಗಳಲ್ಲಿ ಮಾಡುತ್ತಾರೆ. ಈ ಜನರು ಪ್ರಾಮಾಣಿಕರು ಮತ್ತು ಅವರಿಗೆ ಎಂದಿಗೂ ಸಹ ಹಣದ ಕೊರತೆ ಭಾದಿಸುವುದಿಲ್ಲ ಎನ್ನಲಾಗುವುದು.
ಇದನ್ನೂ ಓದಿ- Name Astrology: ಈ ಅಕ್ಷರಗಳ ಹೆಸರಿನ ಹುಡುಗರು ತಮ್ಮ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಾರೆ!
K ಅಕ್ಷರದ ಹೆಸರಿನ ಜನರು:-
K ಯಿಂದ ಪ್ರಾರಂಭವಾಗುವ ಹೆಸರಿನ ಜನರು ಸ್ವಭಾವತಃ ತುಂಬಾ ಸರಳ ವ್ಯಕ್ತಿಗಳಾಗಿರುತ್ತಾರೆ. ಅವರು ಜೀವನದಲ್ಲಿ ತಮ್ಮ ಮುಗುಳ್ನಗೆಯ ಮೂಲಕವೇ ಇತರರನ್ನು ಭೇಟಿಯಾಗುತ್ತಾರೆ. ಈ ಅಕ್ಷರದ ಹೆಸರಿನವರಿಗೆ ಸಂಪತ್ತಿನ ದೇವತೆಯಾದ ಲಕ್ಷ್ಮಿ ಮತ್ತು ಕುಬೇರನ ವಿಶೇಷ ಆಶೀರ್ವಾದ ಪ್ರಾಪ್ತಿಯಾಗಲಿದೆ. ಈ ಜನರಿಗೆ ಜೀವನದಲ್ಲಿ ಯಾವುದೇ ರೀತಿಯ ಹಣದ ಕೊರತೆ ಇರುವುದಿಲ್ಲ. ಇವರು ದುಬಾರಿ ವಸ್ತುಗಳ ಮೇಲೆ ಒಲವು ಹೊಂದಿರುತ್ತಾರೆ.
P ಮತ್ತು F ಅಕ್ಷರದ ಹೆಸರಿನ ಜನರು:-
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, P ಮತ್ತು F ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಜನರ ಸ್ವಭಾವವು ಸುಸಂಸ್ಕೃತ ಮತ್ತು ಸ್ನೇಹಪರವಾಗಿರುತ್ತದೆ. ಅವರು ಶ್ರಮಜೀವಿಗಳು ಮತ್ತು ಕಠಿಣ ಪರಿಶ್ರಮದ ಆಧಾರದ ಮೇಲೆ ಎಲ್ಲವನ್ನೂ ಸಾಧಿಸುತ್ತಾರೆ. ಅವರ ಹವ್ಯಾಸಗಳು ರಾಜರಂತೆ. ಜೀವನದಲ್ಲಿ ಸಾಕಷ್ಟು ಹಣ ಸಂಪಾದಿಸುತ್ತಾರೆ. ಪ್ರತಿಯೊಬ್ಬರ ಭಾವನೆಗಳನ್ನು ಕಾಳಜಿ ವಹಿಸುವ ಇವರು ತಮ್ಮ ಮೊದಲ ಭೇಟಿಯಲ್ಲಿಯೇ ಜನರನ್ನು ತಮ್ಮತ್ತ ಆಕರ್ಷಿಸುತ್ತಾರೆ.
ಇದನ್ನೂ ಓದಿ- Name Astrology: ಅತ್ಯುತ್ತಮ ಸಂಗಾತಿ ಎಂದು ಸಾಬೀತುಪಡಿಸುತ್ತಾರೆ ಈ ಅಕ್ಷರದ ಹೆಸರಿನವರು
S ಅಕ್ಷರದ ಹೆಸರಿನ ಜನರು:-
S ಅಕ್ಷರದ ಹೆಸರಿನ ಜನರು ಯಾವುದೇ ಕೆಲಸದಲ್ಲಿ ಅಷ್ಟು ಸುಲಭವಾಗಿ ಸೋಲೊಪ್ಪುವುದಿಲ್ಲ. ಯಾವುದೇ ಕೆಲಸ ಮಾಡಲು ಹಿಂಜರಿಯುವುದಿಲ್ಲ. ಅವರ ಈ ಗುಣವು ಅವರಿಗೆ ಪ್ರತಿ ಕೆಲಸದಲ್ಲಿ ಯಶಸ್ಸನ್ನು ನೀಡುತ್ತದೆ. ಈ ಜನರು ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಮತ್ತು ಎಲ್ಲಾ ರೀತಿಯ ಸೌಕರ್ಯಗಳನ್ನು ಆನಂದಿಸುವ ಬಯಕೆ ಇವರದ್ದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.