ಬೆಂಗಳೂರು :ಈ ವರ್ಷದ ಎರಡನೇ ಚಂದ್ರಗ್ರಹಣ ಇನ್ನು ಎರಡು ವಾರಗಳಲ್ಲಿ ಗೋಚರಿಸಲಿದೆ.ಈ ಚಂದ್ರಗ್ರಹಣವು ಸೆಪ್ಟೆಂಬರ್ 18 ರಂದು ಬೆಳಿಗ್ಗೆ 06:11 ಕ್ಕೆ ಪ್ರಾರಂಭವಾಗಿ, 10:17 ಕ್ಕೆ ಕೊನೆಗೊಳ್ಳುತ್ತದೆ.ಅಂದರೆ ಗ್ರಹಣ ಕಾಲ 4 ಗಂಟೆ 6 ನಿಮಿಷಗಳವರೆಗೆ ಇರುತ್ತದೆ.ಇದು ಭಾಗಶಃ ಚಂದ್ರಗ್ರಹಣವಾಗಿದ್ದು, ಈ ವರ್ಷದ ಕೊನೆಯ ಚಂದ್ರಗ್ರಹಣವಾಗಿರಲಿದೆ. 


COMMERCIAL BREAK
SCROLL TO CONTINUE READING

ಚಂದ್ರಗ್ರಹಣದ ಸೂತಕ ಕಾಲ : 
ಹಿಂದೂ ಧರ್ಮದಲ್ಲಿ ಗ್ರಹಣವನ್ನು ಮಂಗಳಕರ ಎಂದು ಹೇಳುವುದಿಲ್ಲ.ಆದ್ದರಿಂದ ಗ್ರಹಣದ ಸಮಯದಲ್ಲಿ ಅನೇಕ ಕೆಲಸಗಳನ್ನು ಮಾಡದಂತೆ ಸಲಹೆ ನೀಡಲಾಗುತ್ತದೆ.  ಚಂದ್ರಗ್ರಹಣದ ಸೂತಕವು ಗ್ರಹಣಕ್ಕೆ 9 ಗಂಟೆಗಳ ಮೊದಲು ಪ್ರಾರಂಭವಾಗುವುದರೊಂದಿಗೆ ಗ್ರಹಣ ಕೊನೆಗೊಂಡಾಗ ಮುಕ್ತಾಯವಾಗುತ್ತದೆ. 


ಇದನ್ನೂ ಓದಿ: Weekly Horoscope: ಸೆಪ್ಟೆಂಬರ್ ಮೊದಲ ವಾರದಲ್ಲಿ ಬುಧಾದಿತ್ಯ, ಗಜಕೇಸರಿ ರಾಜಯೋಗ, 6 ರಾಶಿಯವರಿಗೆ ಭಾಗ್ಯೋದಯ


ಈ ರಾಶಿಯವರಿಗೆ ಚಂದ್ರಗ್ರಹಣ ಅಶುಭ   : 
ಮೇಷ ರಾಶಿ :ಈ ಜನರು ಸಂಬಂಧಗಳಲ್ಲಿ ಭಿನ್ನಾಭಿಪ್ರಾಯವನ್ನು ಎದುರಿಸಬೇಕಾಗಬಹುದು.ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು.ಈ ಸಮಯದಲ್ಲಿ ಎಚ್ಚರಿಕೆಯಿಂದ ವರ್ತಿಸುವುದು ಉತ್ತಮ.ಚಂದ್ರಗ್ರಹಣದ ದೋಷ ಪರಿಹಾರಕ್ಕಾಗಿ ಈ ರಾಶಿಯವರು ಶಿವನನ್ನು ಪೂಜಿಸಬೇಕು.  


ಕರ್ಕಾಟಕ ರಾಶಿ :ಕರ್ಕ ರಾಶಿಯವರ ವೃತ್ತಿ ಜೀವನದಲ್ಲಿ ಬದಲಾವಣೆಗಳಾಗಬಹುದು. ಕೆಲಸ ಬಿಡುವಂತೆ ನಿಮ್ಮ ಮೇಲೆ ಒತ್ತಡ ಬರಬಹುದು. ವೈಯಕ್ತಿಕ ಜೀವನದಲ್ಲಿಯೂ ಸಮಸ್ಯೆಗಳು ಏಳಬಹುದು. ಇವರ ಮೇಲೆ ಚಂದ್ರಗ್ರಹಣದ ಕೆಟ್ಟ ಪರಿಣಾಮ ಆಗದಂತೆ ದುರ್ಗಾ ದೇವಿಯನ್ನು ಪೂಜಿಸಬೇಕು.    


ತುಲಾ ರಾಶಿ :ತುಲಾ ರಾಶಿಯವರಿಗೆ ಚಂದ್ರ ಗ್ರಹಣ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ.ಕೆಲಸದ ಸ್ಥಳದಲ್ಲಿ ಮಿಶ್ರ ಪರಿಣಾಮಗಳು ಕಂಡುಬರುತ್ತವೆ. ಸಹೋದ್ಯೋಗಿಗಳೊಂದಿಗೆ ಸಮಸ್ಯೆಗಳು ಉಂಟಾಗಬಹುದು, ಜಾಗರೂಕರಾಗಿರಿ. ಈ ರಾಶಿಯವರು ಕೂಡಾ ತಮ್ಮ ಮೇಲೆ ಆಗುವ ದುಷ್ಪರಿಣಾಮ ತಪ್ಪಿಸಲು ದುರ್ಗಾ ದೇವಿಯನ್ನು ಆರಾಧಿಸಬೇಕು. 


ಇದನ್ನೂ ಓದಿ: ಇಂದಿನಿಂದಲೇ ಈ ರಾಶಿಯವರಿಗೆ ವಿಶೇಷ ರಾಜಯೋಗ!ತೆರೆಯುವುದು ಅದೃಷ್ಟದ ಬಾಗಿಲು! ಸುಖ, ನೆಮ್ಮದಿ, ಸಿರಿ ಸಂಪತ್ತು ಹೆಚ್ಚಾಗುವ ಕಾಲ


ಮಕರ ರಾಶಿ :ಚಂದ್ರಗ್ರಹಣವು ಮಕರ ರಾಶಿಯವರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಬಹುದು.ಮನೆಯಲ್ಲಿ ಹಿರಿಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಇನ್ನು ಈ ರಾಶಿಯವರು ಆಂಜನೇಯನನ್ನು ಆರಾಧಿಸಿದರೆ ಕೆಟ್ಟ ಪರಿಣಾಮವನ್ನು ತಪ್ಪಿಸಬಹುದು.   


(ಸೂಚನೆ : ಈ ಮೇಲಿನ ಲೇಖನ ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.