Lakshmi Devi: ಈ ದಿನದಿಂದಲೇ ಮಹಾಲಕ್ಷ್ಮಿ ವ್ರತ ಆರಂಭ, 16 ದಿನಗಳ ಕಠಿಣ ಉಪವಾಸದ ಮಹತ್ವ ತಿಳಿಯಿರಿ
ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಮಹಿಳೆಯರು ಮಹಾಲಕ್ಷ್ಮಿಯ ಉಪವಾಸ ವ್ರತ ಆಚರಿಸುತ್ತಾರೆ. ಈ ಬಾರಿ ಸೆಪ್ಟೆಂಬರ್ 3ರಿಂದ ವ್ರತ ಆರಂಭವಾಗಲಿದೆ. ಈ ವ್ರತವನ್ನು ಆಚರಿಸುವುದರಿಂದ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ.
ನವದೆಹಲಿ: ಪ್ರತಿಯೊಬ್ಬ ವ್ಯಕ್ತಿಯು ತಾಯಿ ಲಕ್ಷ್ಮಿದೇವಿಯ ಕೃಪೆಯು ತನ್ನ ಮೇಲೆ ಇರಬೇಕೆಂದು ಬಯಸುತ್ತಾನೆ. ಇದಕ್ಕಾಗಿ ಪೂಜೆಯಿಂದ ಪಾರಾಯಣದವರೆಗೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಾನೆ. ತಾಯಿ ಲಕ್ಷ್ಮಿಯ ಆಶೀರ್ವಾದ ಪಡೆಯಲು ಮಹಾಲಕ್ಷ್ಮಿ ವ್ರತ ಪ್ರಾರಂಭವಾಗಲಿದೆ. ಈ ಉಪವಾಸ 16 ದಿನಗಳವರೆಗೆ ಇರುತ್ತದೆ. ಈ 16 ದಿನಗಳ ಕಾಲ ಮಹಿಳೆಯರು ಉಪವಾಸ ಆಚರಿಸುತ್ತಾರೆ. ವಿಧಿ-ವಿಧಾನಗಳ ಪ್ರಕಾರ ಲಕ್ಷ್ಮಿದೇವಿಯನ್ನು ಪೂಜಿಸುತ್ತಾರೆ. 16 ದಿನಗಳ ಈ ವ್ರತವು ಬಹಳ ಫಲ ನೀಡುತ್ತದೆ ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಹಣದ ಕೊರತೆಯೇ ಬರುವುದಿಲ್ಲವೆಂದು ನಂಬಲಾಗಿದೆ.
ಈ ದಿನದಿಂದ ಪ್ರಾರಂಭವಾಗಲಿದೆ
ಭಾದ್ರಪದ ಶುಕ್ಲ ಪಕ್ಷದ ಅಷ್ಟಮಿ ತಿಥಿಯಿಂದ ಮಹಾಲಕ್ಷ್ಮಿ ವ್ರತ ಪ್ರಾರಂಭವಾಗುತ್ತದೆ. ಈ ಉಪವಾಸವನ್ನು 16 ದಿನಗಳವರೆಗೆ ನಡಸಲಾಗುತ್ತದೆ. ಈ ಬಾರಿ ಭಾದ್ರಪದ ಶುಕ್ಲ ಪಕ್ಷದ ಅಷ್ಟಮಿ ತಿಥಿ ಸೆಪ್ಟೆಂಬರ್ 3ರಿಂದ ಆರಂಭವಾಗಲಿದೆ. ವ್ರತವು ಅಶ್ವಿ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಅಂದರೆ ಸೆಪ್ಟೆಂಬರ್ 17ರಂದು ಕೊನೆಗೊಳ್ಳುತ್ತದೆ.
ಇದನ್ನೂ ಓದಿ: Chanukya Niti : ಮಹಿಳೆಯರ ಈ 4 ದೋಷಗಳು, ಮನೆಯನ್ನೇ ಹಾಳು ಮಾಡುತ್ತವೆ
ಶುಭ ಸಮಯ
ಈ ಬಾರಿ ಭಾದ್ರಪದ ಶುಕ್ಲ ಅಷ್ಟಮಿ ತಿಥಿ ಸೆ.3ರಂದು ಮಧ್ಯಾಹ್ನ 12.28ರಿಂದ ಆರಂಭವಾಗಿ ಸೆ.4ರಂದು ಬೆಳಗ್ಗೆ 10.39ಕ್ಕೆ ಮುಕ್ತಾಯವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಸೆ.4ರಿಂದ ಉದಯ ತಿಥಿಯ ದೃಷ್ಟಿಯಿಂದ ಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುವುದು.
ಉಪವಾಸದ ದಂತಕಥೆ
ಮಹಾಲಕ್ಷ್ಮಿ ವ್ರತ ಆರಂಭದ ಹಿಂದೆ ಒಂದು ಐತಿಹ್ಯವಿದೆ. ಮಹಾರಾಜ ಜಿಯುತ್‌ಗೆ ಮಕ್ಕಳಿರಲಿಲ್ಲ. ಅವರು ತಾಯಿ ಲಕ್ಷ್ಮಿಯನ್ನು ಧ್ಯಾನಿಸಿದರು, ನಂತರ ಲಕ್ಷ್ಮಿದೇವಿ ಕನಸಿನಲ್ಲಿ ಕಾಣಿಸಿಕೊಂಡರು ಮತ್ತು 16 ದಿನಗಳ ಉಪವಾಸದ ಬಗ್ಗೆ ತಿಳಿಸಿದರು. ಮಹಾರಾಜನು ತನ್ನ ಕನಸಿನಲ್ಲಿ ಲಕ್ಷ್ಮಿದೇವಿಯನ್ನು ನೋಡಿದ ನಂತರ ಅದೇ ರೀತಿ ಮಾಡಿದನು. ವ್ರತವನ್ನು ಆಚರಿಸಿದ ನಂತರ ಅವರಿಗೆ ಮಗುವಾಯಿತು ಎಂದು ಹೇಳಲಾಗುತ್ತದೆ, ಅಂದಿನಿಂದ ಈ ಸಂಪ್ರದಾಯವು ನಡೆದುಕೊಂಡು ಬಂದಿದೆ.
ಇದನ್ನೂ ಓದಿ: ರಾತ್ರಿ ಲೈಟ್ ಆನ್ ಮಾಡಿ ಮಲಗುವುದರಿಂದ ಕಾಡುವುದು ಈ ಸಮಸ್ಯೆಗಳ ಅಪಾಯ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.