ಬೆಂಗಳೂರು : ರಾಶಿಯನ್ನು ಬದಲಾಯಿಸಿದ ನಂತರ ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಸೂರ್ಯ ಈಗಾಗಲೇ ಸ್ವರಾಶಿ ಸಿಂಹದಲ್ಲಿದ್ದಾನೆ. ಸೂರ್ಯ ತನ್ನ ಸ್ವರಾಶಿಯಾದ ಸಿಂಹದಲ್ಲಿರುವಾಗಲೇ, ಆ ರಾಶಿಗೆ ಶುಕ್ರನ ಪ್ರವೇಶವಾದರೆ ಜ್ಯೋತಿಷ್ಯದಲ್ಲಿ ಇದಕ್ಕೆ ಬಹಳ ಪ್ರಾಮುಖ್ಯತೆ ಇದೆ. ಶುಕ್ರ-ಸೂರ್ಯನ ಸಂಯೋಗವು ಎಲ್ಲಾ 12 ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇದು ಮೂರೂ ರಾಶಿಯವರ ಅದೃಷ್ಟವೇ ಬದಲಾಗಲಿದೆ. ಮುಂದಿನ 15 ದಿನಗಳಲ್ಲಿ ಈ ಮೂರು ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಲಿದೆ. ಶುಕ್ರ ಸಂಕ್ರಮಣ ಮತ್ತು ಸೂರ್ಯ-ಶುಕ್ರ ಸಂಯೋಗವು ಈ ರಾಶಿಯವರ ಅದೃಷ್ಟವನ್ನು ಉಜ್ವಲಗೊಳಿಸಲಿದೆ.
ಸೂರ್ಯ-ಶುಕ್ರ ಸಂಯೋಗವು ಈ ರಾಶಿಯವರ ಅದೃಷ್ಟ ಬೆಳಗಲಿದೆ :
ವೃಷಭ ರಾಶಿ : ಶುಕ್ರ ಸಂಕ್ರಮಣದಿಂದ ರೂಪುಗೊಂಡ ಸೂರ್ಯ ಮತ್ತು ಶುಕ್ರನ ಸಂಯೋಗವು, ವೃಷಭ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಅವರು ಹೊಸ ಉದ್ಯೋಗವನ್ನು ಪಡೆಯಬಹುದು. ವೃತ್ತಿ ಜೀವನದಲ್ಲಿ ದೊಡ್ಡ ಸಾಧನೆ ಮಾಡಲಿದ್ದಾರೆ. ಬಡ್ತಿ, ವೇತನ ಹೆಚ್ಚಳದ ಸಾಧ್ಯತೆಗಳಿವೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.
ಇದನ್ನೂ ಓದಿ : ನೈಸರ್ಗಿಕವಾಗಿ ಸಿಗುವ ಈ ವಸ್ತು ನಿಮ್ಮ ಮುಖದ ಅಂದವನ್ನು ವೃದ್ಧಿಸುತ್ತೆ: ಇದು ನೂರಕ್ಕೆ ನೂರರಷ್ಟು ಸತ್ಯ!
ಸಿಂಹ ರಾಶಿ: ಸೂರ್ಯ ಮತ್ತು ಶುಕ್ರರು ಸಿಂಹ ರಾಶಿಯಲ್ಲಿ ಸಂಯೋಗವಾಗುವುದರಿಂದ ಈ ರಾಶಿಯವರಿಗೆ ವಿಶೇಷ ಲಾಭವಾಗಲಿದೆ. ಈ ರಾಶಿಯವರಿಗೆ ಇದ್ದಕ್ಕಿದ್ದಂತೆ ಎಲ್ಲಿಂದಲೋ ಹಣ ಹರಿದು ಬರಬಹುದು. ಆದಾಯದ ಹೊಸ ಮೂಲ ಸೃಷ್ಟಿಯಾಗಲಿದೆ. ಸಿಂಹ ರಾಶಿಯವರ ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಗೌರವ ಹೆಚ್ಚಾಗಲಿದೆ.
ತುಲಾ ರಾಶಿ : ತುಲಾ ರಾಶಿಯ ಅಧಿಪತಿ ಶುಕ್ರ. ಸೂರ್ಯ ಮತ್ತು ಶುಕ್ರನ ಸಂಯೋಜನೆಯು ತುಲಾ ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ. ಅವರ ಆದಾಯ ಹೆಚ್ಚಾಗಬಹುದು. ಸಂಬಳ ಹೆಚ್ಚಳವಾಗುವ ಸಾಧ್ಯತೆಗಳು ಹೆಚ್ಚಿರಲಿವೆ. ಹಣ ಗಳಿಸಲು ಉತ್ತಮ ಅವಕಾಶಗಳು ದೊರೆಯಲಿವೆ.
ಇದನ್ನೂ ಓದಿ : ವೃತ್ತಿಜೀವನದಲ್ಲಿ ಯಶಸ್ಸು, ಆರ್ಥಿಕ ಪ್ರಗತಿಗಾಗಿ ಫೆಂಗ್ ಶೂಯಿ ಸಲಹೆಗಳು
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.