ಬೆಂಗಳೂರು: ನಿಮ್ಮ ಜೀವನದ ಮೊದಲ 14-15 ವರ್ಷಗಳಲ್ಲಿ,  ನೀವು ಸುಮಾರು 2000 ವಿದ್ಯಾರ್ಥಿಗಳೊಂದಿಗೆ ಶಾಲೆಗೆ ಹೋಗಿದ್ದೀರಿ. ಆ ದಿನಗಳಲ್ಲಿ,  ಆ 14-15 ವರ್ಷಗಳಲ್ಲಿ ನೀವು ಎಷ್ಟು ಜನ ಸ್ನೇಹಿತರನ್ನು ಸಂಪಾದಿಸಿದ್ದೀರಿ ಎಂದು ನೆನಪಿಸಿಕೊಳ್ಳಿ.  ಬೆರಳೆಣಿಕೆಯಷ್ಟು ಇರಬಹುದು!, ಆ ಸ್ನೇಹಿತರ ಜೊತೆ ಜಗಳ ಆಡಿರಬಹುದು, ಅಸೂಯೆ ಪಟ್ಟಿರಬಹುದು ಅಥವಾ ಅವರೊಂದಿಗೆ ಸ್ಪರ್ಧಿಸಿರಬಹುದು, ಅವರನ್ನು ದೂಷಿಸಿರಬಹುದು ಅಥವಾ ಹೊಗಳಿರಬಹುದು. ಅದೇ ನಿಮ್ಮ ಜಗತ್ತಾಗಿತ್ತು .ಈ ರೀತಿಯಾಗಿ,  ನಮ್ಮ ಜೀವನವು ಸೀಮಿತವಾಗಿ ಉಳಿಯಿತು. ಚಿಕ್ಕ ಬಾವಿಯಂತೆ, ಅಷ್ಟೇ ನಮ್ಮ ಜೀವನ ಆಗಿತ್ತು.ಆದರೆ ಜಗತ್ತಿನಲ್ಲಿ ಸಾವಿರಾರು ಜನರು ಇದ್ದಾರೆ,  ಸ್ನೇಹ ಬೆಳೆಸಲು ನಮ್ಮ ಮುಂದೆ ಮನುಷ್ಯ ಜಾತಿಯ ವಿಶಾಲ ಸಾಗರವೇ ಇದೆ.


COMMERCIAL BREAK
SCROLL TO CONTINUE READING

ಪ್ರತಿದಿನ ನಾವು ಒಂದು ಹೊಸ ಗೆಳೆತನ ಬೆಳೆಸಲು ಸಾಧ್ಯವಾದರೆ, ಪ್ರಪಂಚದ ಬಗ್ಗೆ ನಮ್ಮ ದೃಷ್ಟಿಕೋನವು ಸಂಪೂರ್ಣ ಬದಲಾಗುತ್ತದೆ, ಮತ್ತು ನಮ್ಮ ಮನಸ್ಸು ವಿಶಾಲವಾಗುತ್ತಾ ಹೋಗುತ್ತದೆ. ಮನಸ್ಸಿನ ಆಳದಲ್ಲಿ ನೀವು ಸ್ಥಿರವಾಗಿ ಹಾಗೂ ಕೇಂದ್ರೀಕೃತರಾಗಿದ್ದರೆ, ಇದನ್ನು ಸಾಧಿಸುವುದು ಕಷ್ಟವೇನೂ ಅಲ್ಲ. ನೀವು ಆ ಹಾದಿಯಲ್ಲಿ ಒಂದು ಹೆಜ್ಜೆ ಹಾಕಬೇಕು ಮತ್ತು ಸ್ನೇಹ ಹಸ್ತವನ್ನು ನೀವೇ ಮೊದಲು  ಚಾಚಬೇಕು. 


ಇದನ್ನೂ ಓದಿ-ಓಂ ಸಿನಿಮಾ ತರ ರೌಡಿಸಂ ಬಿಡಿಸಿ ಒಳ್ಳೆ ಜೀವನ ನಡೆಸಲು ಮುಂದಾಗಿದ್ದ ಸಿದ್ದಾಪುರ ಮಹೇಶನ ಹೆಂಡತಿ..!


ಜೀವನದಲ್ಲಿ ಮುನ್ನಡೆಯುವ ಮಾರ್ಗವೆಂದರೆ ಸ್ನೇಹಪರರಾಗಿರುವುದು. ನಿಮಗೆ ಯಾವಾಗಲೂ ಕಿರಿಕಿರಿ ಉಂಟುಮಾಡುವ, ಅಹಂಕಾರಿ ಆಗಿರುವ ಮತ್ತು ನಿಮ್ಮನ್ನು ಕೆಟ್ಟದಾಗಿ ನಡೆಸೆಕೊಳ್ಳುವ ಯಾರೊಂದಿಗಾದರೂ ನೀವು ಕೆಲಸ ಮಾಡಲು ಬಯಸುವಿರಾ? ಈ ನಿಟ್ಟಿನಲ್ಲಿ  ನೀವು ನಿಮ್ಮ ಬಗ್ಗೆಯೂ ಪರಾಮರ್ಶೆ ಮಾಡಿಕೊಳ್ಳಬೇಕು. ನೀವು ಇತರರೊಂದಿಗೆ ಕೋಪದಿಂದ,  ಕಿರಿಕಿರಿ ಉಂಟು ಮಾಡಿ , ಮತ್ತು ಕೆಟ್ಟದಾಗಿ ನಡೆಸಿಕೊಂಡಿದ್ದೀರಾ? ಹಾಗೆ ಮಾಡಿದ್ದಲ್ಲಿ, ಪ್ರತಿದಿನ ಕೆಲವೇ ನಿಮಿಷಗಳಾದರೂ ನೀವು ಧ್ಯಾನ ಮಾಡಬೇಕಾಗುತ್ತದೆ. ನಿಯಮಿತವಾಗಿ ಧ್ಯಾನ ಮಾಡುವುದರಿಂದ ನಿಮ್ಮ ದೇಹದ ಕಂಪನಗಳು ಬದಲಾಗುವುದನ್ನು ನೀವು ಗಮನಿಸಬಹುದು, ನೀವು ಹೆಚ್ಚು ಸ್ನೇಹಮಯ ಕಂಪನಗಳನ್ನು ಹೊರಸೂಸುತ್ತೀರಿ , ಹಾಗೂ ನಿಮ್ಮ ಒಡನಾಟವನ್ನು ಜನರು ಇಷ್ಟ ಪಡುತ್ತಾರೆ. ನಿಮಗೆ ಸಾಧ್ಯ ಆದಷ್ಟು ಸ್ನೇಹಿತರನ್ನು ಸಂಪಾದಿಸಿ,  ಹಾಗೂ ಜೀವನದ ಬಗ್ಗೆ ವಿಶಾಲ ದೃಷ್ಟಿಕೋನವನ್ನು ಹೊಂದಲು ಅವರನ್ನು ಪ್ರೇರೇಪಿಸಿ. 


ಒಳ್ಳೆಯ ಸ್ನೇಹಿತರಾಗುವುದು ಹೇಗೆ?


ಆಡುವ ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಡಿ. ಅವುಗಳನ್ನು ಮೀರಿ ಬದುಕನ್ನು ನೋಡಲು ಕಲಿಯಿರಿ. ಕೆಲವೊಮ್ಮೆ ನೀವು ಏನಾದರೂ ಮಾತನ್ನು ಆಡಿರಬಹುದು,  ಆದರೆ ನೀವು ಅಂದುಕೊಂಡ ಅರ್ಥ ಆ ಮಾತುಗಳಲ್ಲಿ ಇರುವುದಿಲ್ಲ. ಆ ನಿಮ್ಮ  ಮಾತುಗಳನ್ನು ಕೇಳಿಸಿಕೊಂಡ ಜನರು, ಅದನ್ನೇ ಮನಸ್ಸಿನಲ್ಲಿಟ್ಟು ಸಾಧಿಸಿದರೆ,  ನೀವು ಅದನ್ನು ಇಷ್ಟ ಪಡುತ್ತೀರಾ? ಪದಗಳ ಅರ್ಥವನ್ನು ಮೀರಿದ ಸತ್ಯವನ್ನು ಅವರು ಗ್ರಹಿಸಬೇಕೆಂದು ಬಯಸುತ್ತೀರಿ. ಇತರರಿಗೆ ನೀವು ಅದೇ ಸೌಜನ್ಯವನ್ನು ತೋರುವಿರಾ ? ಇಲ್ಲ. ಬೇರೆಯವರು ನಿಮ್ಮ ಮಾತುಗಳಿಗೆ ಜೋತುಬೀಳಬಾರದು  ಎಂದು ಬಯಸುತ್ತೀರಿ,  ಮಾತಿನಾಚೆಯ ಸತ್ಯವನ್ನು ಗಮನಿಸಬೇಕೆಂದು ಇಷ್ಟ ಪಡುತ್ತೀರಿ,  ಆದರೆ ಅದೇ ಇತರರ ನುಡಿಗಳಿಗೆ ಅರ್ಥ ಕಲ್ಪಿಸುತ್ತೀರಿ,  ಅವರನ್ನು ಕ್ಷಮಿಸುವುದಿಲ್ಲ.  ಹೀಗೆ ಅದೆಷ್ಟೋ ಜನರ ಸ್ನೇಹವನ್ನು ಕಳೆದುಕೊಳ್ಳುತ್ತೀವಿ. ನಿಮ್ಮಂತೆಯೇ, 
ಬೇರೆಯವರೂ ಸಹ ಯಾವಾಗಲೂ ಏನು ಹೇಳುತ್ತಾರೆಂದು ಅರ್ಥೈಸುವುದಿಲ್ಲ.  ಕೇವಲ ಮಾತಿನ ಪದಗಳ ಮೂಲಕ ಇತರರೊಂದಿಗೆ ಸಂಪರ್ಕ ಹೊಂದಿದವರು ಉತ್ತಮ ಸ್ನೇಹಿತರಾಗಲು ಸಾಧ್ಯವಿಲ್ಲ. ಅವು ಕೇವಲ ಬಾಹ್ಯ ಬಂಧನಗಳು. ಸುಸಂಸ್ಕೃತ,  ನಾಗರಿಕ ವ್ಯಕ್ತಿಯ ಗುರುತು ಏನೆಂದರೆ,  ಅವರು ಬೇರೆಯವರ ಮಾತುಗಳನ್ನು ಮನಸ್ಸಿಲ್ಲಿ ಇರಿಸಿ ಸಾಧಿಸುವುದಿಲ್ಲ,  ಮತ್ತು ಅದರಲ್ಲೇ ಮುಳುಗಿ ಹೋಗುವುದಿಲ್ಲ. 


ಇದನ್ನೂ ಓದಿ-"ಸರಕಾರದ ದುಡ್ಡು ಸಾರ್ವಜನಿಕರ ದುಡ್ಡೇ ಆಗಿರುವುದರಿಂದ ಅದನ್ನು ಇತಿಮಿತಿಯಲ್ಲಿ ಬಳಸಬೇಕು"


"ಒಂದು ಕಾರಣಕ್ಕಾಗಿ ಸ್ನೇಹ"
ನಾವು,  ನಮ್ಮ ಸ್ನೇಹವನ್ನು ಪರಾಮರ್ಶಿಸಿಕೊಳ್ಳಬೇಕು. ಸಾಮಾನ್ಯವಾಗಿ ನಮ್ಮ ಸ್ನೇಹ, ಸಮಾನ ಶತ್ರುಗಳು, ಸಮಾನ ಸಮಸ್ಯೆಗಳು ಅಥವಾ ಸಮಾನ ಆಸಕ್ತಿಗಳಿಂದ ಹುಟ್ಟಿಕೊಳ್ಳುತ್ತದೆ. ಸಾಮಾನ್ಯವಾಗಿ ಭಯ ಅಥವಾ ಬದುಕುಳಿಯುವ ಬೆದರಿಕೆ,  ಜನರನ್ನು ಒಟ್ಟಿಗೆ ತರುತ್ತದೆ.  ಕೆಲವರು ಸಹಾನುಭೂತಿ ಅಥವಾ ಕರುಣೆಯಿಂದ ಯಾರೊಂದಿಗಾದರೂ ಸ್ನೇಹಿತರಾಗಬಹುದು,  ಮತ್ತು ಕೆಲವೊಮ್ಮೆ ಜನರು ದೀರ್ಘಕಾಲದಿಂದ ಪರಸ್ಪರ ತಿಳಿದಿರುವ ಕಾರಣದಿಂದ ಸ್ನೇಹಿತರಾಗಿ ಉಳಿಯುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.