ವಾರದ ಬಳಿಕ ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿವೆ ಮಾಲವ್ಯ & ಹಂಸ ರಾಜ ಯೋಗ
Malavya-Hamsa Raja Yoga Effects: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರೇಮಿಗಳ ದಿನಾಚರಣೆಯ ಮರುದಿನ ಮೀನ ರಾಶಿಯಲ್ಲಿ ಅತ್ಯಂತ ಮಂಗಳಕರವಾದ ಮಾಲವ್ಯ ರಾಜ ಯೋಗ ಮತ್ತು ಹಂಸ ರಾಜ ಯೋಗ ನಿರ್ಮಾಣವಾಗುತ್ತಿದೆ. ಇದು ಕೆಲವು ರಾಶಿಯವರ ಜೀವನವನ್ನೇ ಬದಲಾಯಿಸಲಿದೆ ಎಂದು ಹೇಳಲಾಗುತ್ತಿದೆ.
Malavya-Hamsa Raja Yoga Effects: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಾಲೆಂಟೈನ್ಸ್ ಡೇ ಮರುದಿನ ಎಂದರೆ ಫೆಬ್ರವರಿ 15ರಂದು ಗುರು-ಶುಕ್ರ ಎರಡೂ ಶುಭ ಗ್ರಹಗಳು ಮೀನ ರಾಶಿಯಲ್ಲಿ ಪ್ರವೇಶಿಸಲಿವೆ. ಒಂದೇ ರಾಶಿಯಲ್ಲಿ ಗುರು-ಶುಕ್ರರ ಯುತಿಯಿಂದಾಗಿ ಬಹಳ ಮಂಗಳಕರ ಯೋಗಗಳಾದ ಮಾಲವ್ಯ ಮತ್ತು ಹಂಸ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ಶುಭ ಯೋಗದಿಂದ ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ, ಫೆಬ್ರವರಿ 15ರಂದು ಗುರು-ಶುಕ್ರರ ಸಂಯೋಗದಿಂದ ರೂಪುಗೊಳ್ಳಲಿರುವ ಮಾಲವ್ಯ ರಾಜಯೋಗ ಮತ್ತು ಹಂಸ ರಾಜ ಯೋಗವು ಐದು ರಾಶಿಯವರ ಜೀವನದಲ್ಲಿ ಬಹಳ ಮಂಗಳಕರ ಫಲಿತಾಂಶಗಳನ್ನು ತರಲಿದೆ. ಇದರ ಪರಿಣಾಮವಾಗಿ ಅವರ ಜೀವನದ ದಿಕ್ಕೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ವ್ಯಾಲೆಂಟೈನ್ಸ್ ಡೇ ಮರುದಿನದಿಂದ ಗುರು-ಶುಕ್ರರ ಯುತಿಯಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ:
ಮೇಷ ರಾಶಿ:
ಗುರು-ಶುಕ್ರರ ಸಂಯೋಗದಿಂದ ರೂಪುಗೊಳ್ಳಲಿರುವ ಮಾಲವ್ಯ ರಾಜಯೋಗ ಮತ್ತು ಹಂಸ ರಾಜ ಯೋಗವು ಮೇಷ ರಾಶಿಯವರ ಸಂಸಾರಿಕ ಜೀವನದಲ್ಲಿ ಮಧುರತೆಯನ್ನು ತರಲಿದೆ. ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ.
ಇದನ್ನೂ ಓದಿ- ವ್ಯಾಲೆಂಟೈನ್ಸ್ ಡೇ- ರೋಸ್ ಡೇಯಂದು ರಾಶಿಗನುಗುಣವಾಗಿ ನಿಮ್ಮ ಪ್ರೇಮಿಗೆ ಯಾವ ಬಣ್ಣದ ರೋಸ್ ನೀಡಬೇಕು
ವೃಷಭ ರಾಶಿ:
ಗುರು-ಶುಕ್ರರ ಯುತಿಯಿಂದ ರೂಪುಗೊಳ್ಳುತ್ತಿರುವ ಎರಡು ಶುಭ ಯೋಗಗಳು ವೃಷಭ ರಾಶಿಯವರ ಆದಾಯದ ಮೂಲವನ್ನು ಹೆಚ್ಚಿಸಲಿವೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿವೆ. ವೃತ್ತಿ ಜೀವನದಲ್ಲಿ ಯಶಸ್ಸಿನ ಹೊಸ ಉತ್ತುಂಗವನ್ನು ಏರುವಿರಿ. ವ್ಯಾಪಾರ-ವ್ಯವಹಾರದಲ್ಲಿಯೂ ಅಧಿಕ ಲಾಭವಾಗಲಿದ್ದು ಸಂಪತ್ತಿನ ಒಡೆಯರಾಗುತ್ತೀರಿ.
ಧನು ರಾಶಿ:
ಗುರು-ಶುಕ್ರರ ಸಂಯೋಗದಿಂದ ರೂಪುಗೊಳ್ಳಲಿರುವ ಮಾಲವ್ಯ ರಾಜಯೋಗ ಮತ್ತು ಹಂಸ ರಾಜ ಯೋಗದ ಪರಿಣಾಮವಾಗಿ ಈ ರಾಶಿಯವರು ವೃತ್ತಿ ರಂಗದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ಹೊಸ ಕೆಲಸ ಹುಡುಕುತ್ತಿರುವವರಿಗೆ ನಿಮ್ಮ ನೆಚ್ಚಿನ ಉದ್ಯೋಗ ಪ್ರಾಪ್ತಿಯಾಗಲಿದೆ. ಮಾತ್ರವಲ್ಲ, ಉದ್ಯೋಗಸ್ಥರಿಗೆ ಪ್ರಯೋಶನ್ ಸಿಗುವ ಸಾಧ್ಯತೆಯೂ ಇದೆ.
ಇದನ್ನೂ ಓದಿ- ವಾಸ್ತು ಪ್ರಕಾರ, ಈ ವಸ್ತುಗಳನ್ನು ಎಂದಿಗೂ ನಿಮ್ಮ ಪ್ರೇಮಿಗಳಿಗೆ ನೀಡಲೇಬಾರದು
ಮೀನ ರಾಶಿ:
ಮೀನ ರಾಶಿಯಲ್ಲಿಯೇ ಗುರು-ಶುಕ್ರರ ಯುತಿ, ಮಾಲವ್ಯ ರಾಜಯೋಗ ಮತ್ತು ಹಂಸ ರಾಜ ಯೋಗ ರೂಪುಗೊಳ್ಳುತ್ತಿದ್ದು ಇದರ ಗರಿಷ್ಠ ಪರಿಣಾಮ ಈ ರಾಶಿಯವರ ಮೇಲೆಯೇ ಕಂಡು ಬರಲಿದೆ. ಈ ಸಮಯದಲ್ಲಿ ಅಪಾರ ಸಂಪತ್ತು ನಿಮ್ಮನ್ನು ಹರಸಿ ಬರಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ. ವಾಹನ, ಮನೆ ಖರೀದಿ ಯೋಗವೂ ಇದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.