ನಾಳೆಯಿಂದ ಈ ರಾಶಿಯವರ ಜೀವನದಲ್ಲಿ ಹರಿಯುವುದು ಹಣದ ಹೊಳೆ

ಫೆಬ್ರವರಿ ತಿಂಗಳು ಗ್ರಹಗಳ ಚಲೆಯ ವಿಷಯದಲ್ಲಿ  ವಿಶೇಷವಾಗಿದೆ. ಈ ತಿಂಗಳು ಬುಧ, ಶುಕ್ರ ಮತ್ತು ಸೂರ್ಯ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸಲಿವೆ. ಸೂರ್ಯನು ಈಗ ಮಕರ ರಾಶಿಯಲ್ಲಿದ್ದು, ನಾಳೆ ಬುಧ ಕೂಡಾ ಈ ರಾಶಿಯನ್ನು ಪ್ರವೇಶಿಸಲಿದೆ. ಈ ರೀತಿಯಾಗಿ, ಶನಿಯ ಅಧಿಪಥ್ಯದ ರಾಶಿಯಲ್ಲಿ ಬುಧ ಮತ್ತು ಸೂರ್ಯನ ಸಂಯೋಗವು ಬುಧಾದಿತ್ಯ ಯೋಗವನ್ನು ಉಂಟುಮಾಡುತ್ತದೆ. ಈ ಬುಧಾದಿತ್ಯ ಯೋಗವು ಐದು ರಾಶಿಯವರ ಪಾಲಿನ ಅದೃಷ್ಟದ ಬಾಗಿಲು ತೆರೆಯಲಿದೆ.

ಬೆಂಗಳೂರು : ಫೆಬ್ರವರಿ ತಿಂಗಳು ಗ್ರಹಗಳ ಚಲೆಯ ವಿಷಯದಲ್ಲಿ  ವಿಶೇಷವಾಗಿದೆ. ಈ ತಿಂಗಳು ಬುಧ, ಶುಕ್ರ ಮತ್ತು ಸೂರ್ಯ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸಲಿವೆ. ಸೂರ್ಯನು ಈಗ ಮಕರ ರಾಶಿಯಲ್ಲಿದ್ದು, ನಾಳೆ ಬುಧ ಕೂಡಾ ಈ ರಾಶಿಯನ್ನು ಪ್ರವೇಶಿಸಲಿದೆ. ಈ ರೀತಿಯಾಗಿ, ಶನಿಯ ಅಧಿಪಥ್ಯದ ರಾಶಿಯಲ್ಲಿ ಬುಧ ಮತ್ತು ಸೂರ್ಯನ ಸಂಯೋಗವು ಬುಧಾದಿತ್ಯ ಯೋಗವನ್ನು ಉಂಟುಮಾಡುತ್ತದೆ. ಈ ಬುಧಾದಿತ್ಯ ಯೋಗವು ಐದು ರಾಶಿಯವರ ಪಾಲಿನ ಅದೃಷ್ಟದ ಬಾಗಿಲು ತೆರೆಯಲಿದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮೇಷ ರಾಶಿ: ಮಕರ ರಾಶಿಯಲ್ಲಿ ಬುಧಾದಿತ್ಯ ಯೋಗದ ರಚನೆಯು ಮೇಷ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಉದ್ಯೋಗ ಹುಡುಕುತ್ತಿರುವವರ ಹುಡುಕಾಟ ಕೊನೆಯಾಗಲಿದೆ. ವೃತ್ತಿಜೀವನದಲ್ಲಿ ದೊಡ್ಡ ಅವಕಾಶ ಸಿಗಲಿದೆ. ಉದ್ಯಮಿಗಳ ಪಾಲಿಗೂ ಈ ಸಮಯ ಅನುಕೂಲಕರವಾಗಿರಲಿದೆ.  ಹೊಸ ಮನೆ ಅಥವಾ ಕಾರು ಖರೀದಿಸಳು ಇದು ಸರಿಯಾದ ಸಮಯ. 

2 /5

ಕರ್ಕಾಟಕ ರಾಶಿ : ಬುಧ ಸಂಚಾರವು ಕರ್ಕಾಟಕ ರಾಶಿಯವರಿಗೆ ಉತ್ತಮ ಯಶಸ್ಸನ್ನು ತರಲಿದೆ. ಹಣಕಾಸಿನ ಪ್ರಯೋಜನವಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ,  ಈ ಸಮಯ ಉತ್ತಮವಾಗಿರಲಿದೆ. 

3 /5

ಸಿಂಹ ರಾಶಿ : ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ರೂಪುಗೊಂಡ ಬುಧಾದಿತ್ಯ ಯೋಗವು ಸಿಂಹ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡಲಿದೆ. ಕೆಲಸದಲ್ಲಿ ಯಶಸ್ಸು, ಗೌರವ ಹೆಚ್ಚಾಗಲಿದೆ.  ದಾಯಾದಿಯಿಂದ ಲಾಭ ಪಡೆಯುವ ಅವಕಾಶವಿರುತ್ತದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.   

4 /5

ತುಲಾ ರಾಶಿ : ಬುಧ ಸಂಕ್ರಮಣದಿಂದಾಗಿ ತುಲಾ ರಾಶಿಯವರಿಗೆ ಭಾರೀ ಆರ್ಥಿಕ ಲಾಭಗಳು ಆಗುವ ಸಾಧ್ಯತೆ ಇದೆ. ಆಸ್ತಿಗೆ ಸಂಬಂಧಿಸಿದ ಏನೇ ಕಿರಿ ಕಿರಿ ಇದ್ದರೂ ನಿವಾರಣೆಯಾಗುವುದು. ಈ ಸಮಯ ನಿಮ್ಮ ಪಾಲಿಗೆ ಅತ್ಯುತ್ತಮವಾಗಿರಲಿದೆ. ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಅಪಾರ ಲಾಭ ಗಳಿಸುವ ಸಾಧ್ಯತೆಗಳಿವೆ.

5 /5

ಮೀನ ರಾಶಿ : ಮೀನ ರಾಶಿಯವರಿಗೆ ಬುಧ ಸಂಕ್ರಮಣ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ವೇತನ ಹೆಚ್ಚಾಗಲಿದೆ.  ನಿಮ್ಮ ಮನಸ್ಸಿನ ದೊಡ್ಡ ಬಯಕೆಯೊಂದು ಈಡೇರುವುದು.  (  ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

You May Like

Sponsored by Taboola