Mangala Dosha: ಯಾವುದೇ ವ್ಯಕ್ತಿಯ ಜೀವನದಲ್ಲಿ ಅವರ ಏಳು-ಬೀಳುಗಳಿಗೆ ಅವರ ಜಾತಕದಲ್ಲಿನ ಗ್ರಹಗತಿಗಳೇ ಕಾರಣ. ಕುಂಡಲಿಯಲ್ಲಿ ಯಾವುದಾದರೂ ಗ್ರಹ ದುರ್ಬಲವಾಗಿದ್ದಾಗ ಅದರ ಪರಿಣಾಮ ವ್ಯಕ್ತಿಯ ಜೀವನದಲ್ಲಿ ಗೋಚರಿಸುತ್ತದೆ. ಆದರೆ, ಅದನ್ನು ಸರಿಯಾದ ಸಮಯದಲ್ಲಿ ಗುರುತಿಸಿ ಅದಕ್ಕೆ ಸೂಕ್ತ ಪರಿಹಾರವನ್ನು ಕೈಗೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ, ವ್ಯಕ್ತಿಯು ನಾನಾ ರೀತಿಯ ತೊಂದರೆ-ತಾಪತ್ರಯಗಳಲ್ಲಿ ಸಿಲುಕುತ್ತಾನೆ. ಮಂಗಳ ಗ್ರಹ ದೋಷ ಅಂದರೆ ಜಾತಕದಲ್ಲಿ ಮಂಗಳ ದುರ್ಬಲನಾಗಿದ್ದಾಗಲೂ ಸಹ ವ್ಯಕ್ತಿಯು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಮೊದಲು ಜಾತಕದಲ್ಲಿ ದುರ್ಬಲ ಮಂಗಳನ ಲಕ್ಷಣಗಳೇನು ಮತ್ತು ಕುಂಡಲಿಯಲ್ಲಿ ಮಂಗಳ ಗ್ರಹವನ್ನು ಬಲಪಡಿಸುವುದು ಹೇಗೆ ಎಂದು ತಿಳಿಯುವುದು ಬಹಳ ಮುಖ್ಯ.


COMMERCIAL BREAK
SCROLL TO CONTINUE READING

ಜಾತಕದಲ್ಲಿ ದುರ್ಬಲ ಮಂಗಳನ ಲಕ್ಷಣಗಳೇನು? 
* ಅನಗತ್ಯ ವಾದ-ವಿವಾದ, ಕೋರ್ಟು-ಕಚೇರಿ ಪ್ರಕರಣಗಳಲ್ಲಿ ಸಿಲುಕಿಕೊಳ್ಳುವುದು:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಕುಂಡಲಿಯಲ್ಲಿ ಮಂಗಳನು ದುರ್ಬಲ ಸ್ಥಾನದಲ್ಲಿದ್ದಾನೆ ಆತ ಸುಖಾ-ಸುಮ್ಮನೆ ವಾದ-ವಿವಾದಗಳಲ್ಲಿ ಸಿಲುಕುತ್ತಾನೆ. ಮಾತ್ರವಲ್ಲ, ಸಣ್ಣ-ಪುಟ್ಟ ವಿಚಾರಗಳಿಗೂ ಕೂಡ ಕೋರ್ಟು-ಕಚೇರಿ ಸುತ್ತುವಂತಾಗಬಹುದು. 


* ದಾಯಾದಿ ಕಲಹ: 
ಯಾವ ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹ ದುರ್ಬಲವಾಗಿದೆಯೋ ಅಂತಹವರು ದಾಯಾದಿ ಕಲಹವನ್ನು ಅನುಭವಿಸಬೇಕಾಗಬಹುದು.


ಇದನ್ನೂ ಓದಿ- Shani Deva: ಜನವರಿ 16ರವರೆಗೆ ಈ ರಾಶಿಯವರಿಗೆ ಶನಿ ಕೃಪೆಯಿಂದ ಗೋಲ್ಡನ್ ಡೇಸ್


* ಅನಾರೋಗ್ಯ:
ಕುಂಡಲಿಯಲ್ಲಿ ದುರ್ಬಲ ಸ್ಥಿತಿಯಲ್ಲಿರುವ ಮಂಗಳನು ವ್ಯಕ್ತಿಯನ್ನು ನಾನಾ ರೀತಿಯ ಅನಾರೋಗ್ಯದಿಂದ ಬಳಲುವಂತೆ ಮಾಡುತ್ತಾನೆ. ಅದರಲ್ಲೂ ಮುಖ್ಯವಾಗಿ ಹೈ ಬಿಪಿ, ಕಿಡ್ನಿ ಸ್ಟೋನ್, ಸಂಧಿವಾತದಂತಹ ಸಮಸ್ಯೆಗಳು ಹೆಚ್ಚು ಕಾಡುತ್ತವೆ ಎಂದು ಹೇಳಲಾಗುತ್ತದೆ.


* ಕೆಲಸ-ಕಾರ್ಯಗಳಲ್ಲಿ ಅಡಚಣೆ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹ ದುರ್ಬಲನಾಗಿದ್ದಾರೆ ಅಂತಹ ವ್ಯಕ್ತಿಯು ಮೋಸದ ಜಾಲದಲ್ಲಿ ಸುಲಭವಾಗಿ ಬೀಳುತ್ತಾನೆ. ಮಾತ್ರವಲ್ಲ, ಅವನ ಎಲ್ಲಾ ಕೆಲಸ-ಕಾರ್ಯಗಳಲ್ಲಿ ಅಡಚಣೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Grah Gochar 2023: ಜನವರಿಯಲ್ಲಿ ಶನಿ ಸೇರಿದಂತೆ 5 ಗ್ರಹಗಳ ರಾಶಿ ಪರಿವರ್ತನೆ, ಈ ರಾಶಿಯವರಿಗೆ ಸಂಕಷ್ಟ


ಕುಂಡಲಿಯಲ್ಲಿ ಮಂಗಳ ಗ್ರಹವನ್ನು ಬಲಪಡಿಸಲು ಇಂದೇ ಈ ಸುಲಭ ಪರಿಹಾರಗಳನ್ನು ಕೈಗೊಳ್ಳಿ:
ಕುಂಡಲಿಯಲ್ಲಿ ಮಂಗಳ ಗ್ರಹವನ್ನು ಬಲಪಡಿಸಲು ಮಂಗಳವಾರವನ್ನು ತುಂಬಾ ಪ್ರಾಶಸ್ತ್ಯ ಎಂದು ಬಣ್ಣಿಸಲಾಗುತ್ತದೆ. ಮಂಗಳವಾರದಂದು ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಜಾತಕದಲ್ಲಿ ಮಂಗಳ ಗ್ರಹವನ್ನು ಬಲಪಡಿಸಬಹುದು ಎಂದು ಹೇಳಲಾಗುತ್ತದೆ. ಇದಕ್ಕಾಗಿ ಈ ಕೆಳಗೆ ನೀಡಲಾದ ಪರಿಹಾರ ಕ್ರಮಗಳನ್ನು ಕೈಗೊಳ್ಳಬಹುದು.
>> ಕುಂಡಲಿಯಲ್ಲಿ ಮಂಗಳ ಗ್ರಹವು ದುರ್ಬಲ ಸ್ಥಾನದಲ್ಲಿದ್ದರೆ, ಮಂಗಳವಾರದಂದು ಕೆಂಪು ಬಣ್ಣದ ವಸ್ತ್ರವನ್ನು ಧರಿಸಿ.
>> ಮಂಗಳವಾರದ ದಿನ ಸುಂದರಕಾಂಡ, ಹನುಮಾನ್ ಚಾಲೀಸಾವನ್ನು ಪಠಿಸಿ.
>> ಗೋವಿಗೆ ಆಹಾರವನ್ನು ನೀಡಿ.
>> ನಿರ್ಗತಿಕರಿಗೆ ಆಹಾರವನ್ನು ನೀಡಿ.
>> ಹರಿಯುವ ನೀರಿನಲ್ಲಿ ಬಿಳಿ ಬಣ್ಣದ ಸಿಹಿ ತಿನಿಸನ್ನು ಹಾಕಿ.
>> ಮಂಗಳವಾರದಂದು ಅಗತ್ಯವಿರುವವರಿಗೆ ಗೋಧಿ, ತಾಮ್ರ, ಕೆಂಪು ಬಟ್ಟೆ ಮತ್ತು ಬೆಲ್ಲವನ್ನು ದಾನ ಮಾಡುವುದು ವಿಶೇಷವಾಗಿ ಫಲಪ್ರದವಾಗಿದೆ ಎಂದು ಹೇಳಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.