ಬೆಂಗಳೂರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿ ರಾಶಿಗೂ ಒಂದು ಅಧಿಪತಿ ಗ್ರಹವಿರುತ್ತದೆ. ಹಾಗೆಯೇ ಕುಂಭ ರಾಶಿಯ ಅಧಿಪತಿ ಶನಿ. ಶನಿಯು 30 ವರ್ಷಗಳ ಬಳಿಕ ತನ್ನ ರಾಶಿಯನ್ನು ಬದಲಿಸಿ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಈ ಮೂಲಕ ಶನಿಯ ಶಶ ರಾಜಯೋಗ ರೂಪುಗೊಳ್ಳಲಿದೆ. ಶನಿಯ ಈ ಯೋಗವು ನಿಮ್ಮ ಅದೃಷ್ಟವನ್ನೇ ಬದಲಾಯಿಸಲಿದೆ. ಶನಿ ಸೃಷ್ಟಿಸುತ್ತಿರುವ ರಾಜಯೋಗವು ಬಹಳ ಅದೃಷ್ಟವನ್ನು ನೀಡಲಿದೆ.
ಈ ರೀತಿ ನಿರ್ಮಾಣಗೊಳ್ಳುತ್ತದೆ ಶನಿಯ ಶಶ ರಾಜಯೋಗ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ರಾಜಯೋಗವನ್ನು ಶಶ ರಾಜಯೋಗ ಎಂದೂ ಕರೆಯಲಾಗುತ್ತದೆ. ಶನಿಯು ತನ್ನ ರಾಶಿಯಾದ ಮಕರ, ಕುಂಭ ಅಥವಾ ತುಲಾ ರಾಶಿಯಲ್ಲಿ ಲಗ್ನ ಅಥವಾ ಚಂದ್ರನಿಂದ ಮೊದಲ, ನಾಲ್ಕನೇ, ಏಳನೇ ಮತ್ತು ಹತ್ತನೇ ಮನೆಯಲ್ಲಿದ್ದಾಗ ಈ ಯೋಗವು ರೂಪುಗೊಳ್ಳುತ್ತದೆ. ಈ ರಾಜಯೋಗದ ರಚನೆಯಿಂದ, ವ್ಯಕ್ತಿಯು ಶೀಘ್ರದಲ್ಲೇ ರೋಗದಿಂದ ಮುಕ್ತನಾಗುತ್ತಾನೆ. ಇದು ವ್ಯಕ್ತಿಯ ವಯಸ್ಸನ್ನು ಹೆಚ್ಚಿಸುತ್ತದೆ. ಜಾತಕದಲ್ಲಿ ಶನಿಯ ರಾಜಯೋಗವು ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ವ್ಯಕ್ತಿಯ ಮೇಲೆ ಧೈಯ್ಯಾ ಮತ್ತು ಸಾಡೇಸಾತಿ ಪ್ರಭಾವ ಬೀರುವುದಿಲ್ಲ.
ಇದನ್ನೂ ಓದಿ : Paush Purnima 2023: ವರ್ಷದ ಮೊದಲ ಹುಣ್ಣಿಮೆಯ ದಿನ 3 ಶುಭಯೋಗಗಳ ನಿರ್ಮಾಣ, ಲಕ್ಷ್ಮಿಯ ಕೃಪಾವೃಷ್ಟಿಗಾಗಿ ಈ ಕೆಲಸ ಮಾಡಿ
ಈ ರಾಶಿಯವರಿಗೆ ಸಿಗಲಿದೆ ಅದ್ಬುತ ಪ್ರಯೋಜನ :
ಮೇಷ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ರಾಹು ಮೇಷ ರಾಶಿಯಲ್ಲಿ ಕುಳಿತಿದ್ದು, ಮುಂದಿನ ವರ್ಷ ಗುರು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮೇಷ ರಾಶಿಯ ಹನ್ನೊಂದನೇ ಮನೆಯಲ್ಲಿ ಶನಿ ಸಂಕ್ರಮಣ ನಡೆಯಲಿದೆ. ಈ ಸಮಯದಲ್ಲಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಸಿಗಲಿದೆ. ಆದಾಯದಲ್ಲಿ ಸಂಪೂರ್ಣ ಹೆಚ್ಚಳವಾಗುವ ಸಾಧ್ಯತೆ ಇದೆ.
ವೃಷಭ ರಾಶಿ : ಶನಿಯು ಜನವರಿಯಲ್ಲಿ ಈ ರಾಶಿಯ ಹತ್ತನೇ ಮನೆಯನ್ನು ಪ್ರವೇಶಿಸಲಿದ್ದಾನೆ. ಹೀಗಾದಾಗ ಕೆಲಸದ ಸ್ಥಳದಲ್ಲಿ ಪ್ರಗತಿಯನ್ನು ಕಾಣಬಹುದು. ಶನಿಯನ್ನು ಈ ರಾಶಿಯ ಒಂಭತ್ತನೇ ಮತ್ತು ಹತ್ತನೇ ಮನೆಯ ಅಧಿಪತಿ ಎಂದು ಕರೆಯಲಾಗುತ್ತದೆ. ನಿಂತು ಹೋಗಿದ್ದ ಕೆಲಸ ಪೂರ್ಣಗೊಳ್ಳಲಿದೆ.
ಇದನ್ನೂ ಓದಿ : Vaikuntha Ekadashi 2023:ಜನವರಿಯ ಈ ದಿನ 'ಮಹಾ ಉಪವಾಸ', ಮೂರು ಅದ್ಭುತ ಶುಭ ಯೋಗಗಳಿಂದ ದ್ವಿಗುಣ ಫಲಿತಾಂಶ
ಧನು ರಾಶಿ : ಶನಿಯು ಈ ರಾಶಿಯ ಮೂರನೇ ಮನೆಯನ್ನು ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿ, ಧನು ರಾಶಿಯವರಿಗೆ ಶನಿಯ ಏಳೂವರೆ ವರ್ಷದ ಶನಿ ದೆಸೆಯಿಂದ ಮುಕ್ತಿ ಸಿಗಲಿದೆ. ಹೂಡಿಕೆ ಮಾಡುವುದರಿಂದ ಲಾಭ ಸಿಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧನು ರಾಶಿಯವರಿಗೆ ಶನಿಯ ಏಳೂವರೆ ವರ್ಷದಿಂದ ಸಂಪೂರ್ಣ ಮುಕ್ತಿ ಸಿಗಲಿದೆ.
ಕುಂಭ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ಕುಂಭ ರಾಶಿಯ ಲಗ್ನದ ಮನೆಯಲ್ಲಿ ಸಂಚರಿಸಲಿದ್ದಾನೆ. ಇದು ನಿಮ್ಮ ಸ್ವಭಾವದ ಜೊತೆಗೆ ಅದೃಷ್ಟವನ್ನೇ ಬದಲಾಯಿಸುತ್ತದೆ. ಈ ಸಮಯದಲ್ಲಿ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಸಿಗಲಿದೆ. ಪೂರ್ವಿಕರ ಆಸ್ತಿಯಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.