Mangala Gochar: ಮೂರು ರಾಶಿಯವರಿಗೆ ಅಪಾರ ಧನ-ಸಂಪತ್ತಿನ ಜೊತೆ ರಾಜಯೋಗ ನೀಡಲಿದ್ದಾನೆ ಮಂಗಳ
Mars Transit: ನವಗ್ರಹಗಳಲ್ಲಿ ಗ್ರಹಗಳ ಕಮಾಂಡರ್ ಎಂತಲೇ ಕರೆಯಲ್ಪಡುವ ಮಂಗಳನು ಇನ್ನೂ ಕೆಲವೇ ದಿನಗಳಲ್ಲಿ ಶುಕ್ರನ ರಾಶಿಚಕ್ರ ಚಿಹ್ನೆಯಾದ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಮೂರು ರಾಶಿಯವರಿಗೆ ಅಪಾರ ಧನ-ಸಂಪತ್ತು, ನೆಮ್ಮದಿಯ ಜೀವನ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ.
Mangala Rashi Parivartane: ಜ್ಯೋತಿಷ್ಯ ಶಾಸ್ತ್ರದಲ್ಲಿ, ಮಂಗಳ ಗ್ರಹವನ್ನು ಧೈರ್ಯ, ಶೌರ್ಯ, ಭೂಮಿ, ಮಂಗಳ ಕಾರ್ಯಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಮಂಗಳ ಗ್ರಹದ ಸಂಚಾರದಲ್ಲಿನ ಸಣ್ಣ ಬದಲಾವಣೆಯು ಕೂಡ ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಸದ್ಯ ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿರುವ ಮಂಗಳನು ಅಕ್ಟೋಬರ್ 3, 2023 ರಂದು, ಕನ್ಯಾ ರಾಶಿಯನ್ನು ತೊರೆದು ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ.
ಸಂಪತ್ತು, ಐಶ್ವರ್ಯದ ಪ್ರತೀಕನಾದ ಶುಕ್ರನ ರಾಶಿಚಕ್ರ ಚಿಹ್ನೆಯಾದ ತುಲಾ ರಾಶಿಯಲ್ಲಿ ಮಂಗಳನ ಸಂಚಾರವು ಮೂರು ರಾಶಿಯವರ ಜೀವನದಲ್ಲಿ ಮಂಗಳಕರ ಫಲಿತಾಂಶಗಳ ಜೊತೆಗೆ ಅವರ ಜೀವನದಲ್ಲಿ ಹಣದ ಹೊಳೆಯನ್ನೇ ಹರಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಇದನ್ನೂ ಓದಿ- Guru Vakri 2023: ಡಿಸೆಂಬರ್ 31ರವರೆಗೆ ಈ ರಾಶಿಯವರು ತುಂಬಾ ಎಚ್ಚರಿಕೆಯಿಂದಿರಿ
ಮಂಗಳ ರಾಶಿ ಪರಿವರ್ತನೆಯಿಂದ ಈ ಮೂರು ರಾಶಿಯವರಿಗೆ ಖಜಾನೆ ತುಂಬಾ ಹಣ:-
ಮೇಷ ರಾಶಿ:
ಮೇಷ ರಾಶಿಯ ಅಧಿಪತಿಯೂ ಆಗಿರುವ ಮಂಗಳನ ಸಂಚಾರವು ಈ ರಾಶಿಯ ಜನರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ. ಈ ಸಂದರ್ಭದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು, ನೀವು ಕೈ ಹಾಕಿದ ಪ್ರತಿ ಕೆಲಸದಲ್ಲೂ ಯಶಸ್ಸಿನ ಬೆಂಬಲ ದೊರೆಯಲಿದೆ. ವ್ಯಾಪಾರಸ್ಥರು, ಉದ್ಯಮಿಗಳು ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಯೋಚಿಸುತ್ತಿದ್ದರೆ ಇದು ಒಳ್ಳೆಯ ಸಮಯ.
ಕನ್ಯಾ ರಾಶಿ:
ಶೀಘ್ರದಲ್ಲೇ ಕನ್ಯಾ ರಾಶಿಯನ್ನು ತೊರೆದು ತುಲಾ ರಾಶಿಯನ್ನು ಪ್ರವೇಶಿಸಲಿರುವ ಮಂಗಳನು ಈ ರಾಶಿಯವರಿಗೆ ದಿಢೀರ್ ಹಣಕಾಸಿನ ಲಾಭವನ್ನು ನೀಡಲಿದ್ದಾನೆ. ಮಾತ್ರವಲ್ಲ, ನಿಮ್ಮ ವೃತ್ತಿ ಬದುಕಿನಲ್ಲಿಯೂ ಒಳ್ಳೆಯ ಅವಕಾಶಗಳು ಲಭ್ಯವಾಗಲಿವೆ. ಈ ಸಮಯದಲ್ಲಿ ಹಣಕಾಸಿನ ಸ್ಥಿತಿ ಉತ್ತಮವಾಗಿರುವುದರಿಂದ ಹೊಸ ಮನೆ, ಕಾರು ಖರೀದಿಸುವ ಯೋಗವೂ ಇದೆ. ಒಟ್ಟಿನಲ್ಲಿ ಈ ಸಮಯದಲ್ಲಿ ನೀವು ರಾಜ ಯೋಗವನ್ನು ಅನುಭವಿಸುವಿರಿ.
ಇದನ್ನೂ ಓದಿ- Shani Margi: 2024ರವರೆಗೆ ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಯಶಸ್ಸು ನೀಡಲಿದ್ದಾನೆ ಶನಿ ದೇವ
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಅಧಿಪತಿಯೂ ಆಗಿರುವ ಮಂಗಳನ ರಾಶಿ ಪರಿವರ್ತನೆಯು ವೃಶ್ಚಿಕ ರಾಶಿಯವರಿಗೆ ಹಣಕಾಸಿನ ಮೂಲಗಳನ್ನು ಹೆಚ್ಚಿಸಲಿದೆ. ಈ ಸಂದರ್ಭದಲ್ಲಿ ಹಣದ ಹರಿವು ಹೆಚ್ಚಾಗಲಿದ್ದು ಹೂಡಿಕೆಯಿಂದಲೂ ಲಾಭವಾಗಲಿದೆ. ಮಾತ್ರವಲ್ಲ, ಉದ್ಯೋಗ ರಂಗದಲ್ಲಿ ಎದುರಾಗಿದ್ದ ಸಮಸ್ಯೆಗಳು ಬಗೆಹರಿದು ನೆಮ್ಮದಿಯ ಬದುಕನ್ನು ಆನಂದಿಸುವಿರಿ. ಒಟ್ಟಾರೆಯಾಗಿ, ಇದು ನಿಮಗೆ ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.