ನವದೆಹಲಿ: ಹಿಂದೂ ಧರ್ಮದಲ್ಲಿ ಪ್ರತಿ ತಿಂಗಳು ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಪ್ರತಿ ತಿಂಗಳು ಯಾವುದಾದರೊಂದು ದೇವತೆಗೆ ಸಮರ್ಪಿತವಾಗಿದ್ದು, ಆ ಮಾಸದಲ್ಲಿ ಆ ದೇವರನ್ನು ಭಕ್ತಿಯಿಂದ ಪೂಜಿಸುವುದರಿಂದ ವಿಶೇಷ ಫಲಗಳು ಲಭಿಸುತ್ತವಂತೆ. ಶಾಸ್ತ್ರಗಳ ಪ್ರಕಾರ ಮಾರ್ಗಶೀರ ಮಾಸವು ಶ್ರೀಕೃಷ್ಣನಿಗೆ ಸಮರ್ಪಿತವಾಗಿದೆ. ಇದನ್ನು ಅಘನ್ ಮಾಸ ಎಂತಲೂ ಕರೆಯುತ್ತಾರೆ. ಈ ಮಾಸದಲ್ಲಿ ಶ್ರೀ ಕೃಷ್ಣನ ಭಕ್ತಿಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಗೀತೆಯಲ್ಲಿ ಶ್ರೀ ಕೃಷ್ಣನು ತನಗೆ ಮಾರ್ಗಶೀರ ಮಾಸವೆಂದರೆ ಇಷ್ಟವೆಂದು ವಿವರಿಸಿದ್ದಾನೆ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಮಾಸದಲ್ಲಿ ಶಿವ, ರಾಮ ಮತ್ತು ಸೀತೆಯ ಮದುವೆಯಾದ ಕಾರಣ ಈ ತಿಂಗಳ ಮಹತ್ವವು ಹೆಚ್ಚಾಗುತ್ತದೆ. ಮಾರ್ಗಶೀರ ಮಾಸದಿಂದಲೇ ಹೊಸ ವರ್ಷ ಪ್ರಾರಂಭವಾಗುತ್ತಿತ್ತು. ಈ ತಿಂಗಳು ನವೆಂಬರ್ 9 ಬುಧವಾರದಿಂದ ಪ್ರಾರಂಭವಾಗುತ್ತದೆ. ಈ ಮಾಸದಲ್ಲಿ ಕೆಲವು ಪ್ರಮುಖ ಕೆಲಸಗಳನ್ನು ಮಾಡುವುದರಿಂದ ಶ್ರೀಕೃಷ್ಣನ ಅನುಗ್ರಹವನ್ನು ಪಡೆಯಬಹುದು. ಈ ಮಾಸದಲ್ಲಿ ಯಾವ 3 ಕೆಲಸಗಳಿಗೆ ವಿಶೇಷ ಮಹತ್ವವಿದೆ ಎಂದು ತಿಳಿಯಿರಿ.


ಇದನ್ನೂ ಓದಿ: Chandra Grahan 2022: ಶನಿಯ ನೆಚ್ಚಿನ ರಾಶಿಗಳಿಗೆ ಚಂದ್ರಗ್ರಹಣದಿಂದ ಶುಭ, ಪ್ರತಿ ಕೆಲಸದಲ್ಲಿ ಯಶಸ್ಸು ಸಿಗುತ್ತದೆ!


ಪವಿತ್ರ ನದಿಯಲ್ಲಿ ಸ್ನಾನ


ಸ್ಕಂದ ಪುರಾಣದ ಪ್ರಕಾರ, ಶ್ರೀ ಕೃಷ್ಣನು ಮಾರ್ಗಶೀರ ಮಾಸವನ್ನು ತನ್ನ ನೆಚ್ಚಿನ ತಿಂಗಳು ಎಂದು ವಿವರಿಸಿದ್ದಾನೆ. ಈ ಸಮಯದಲ್ಲಿ ಮುಂಜಾನೆ ಎದ್ದು ಪೂಜೆ ಮಾಡುವುದರಿಂದ ಶುಭ ಫಲ ಸಿಗುತ್ತದೆ. ಈ ಮಾಸದಲ್ಲಿ ನದಿಯಲ್ಲಿ ಸ್ನಾನ ಮಾಡುವ ಮಹತ್ವವನ್ನು ಸಾರಲಾಗಿದೆ. ಪವಿತ್ರ ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ಸ್ನಾನದ ನೀರಿಗೆ ಗಂಗಾಜಲ ಸೇರಿಸಿ ಸ್ನಾನ ಮಾಡಬಹುದು ಎಂದು ಹೇಳಲಾಗುತ್ತದೆ. ಇದು ಶ್ರೀಕೃಷ್ಣನನ್ನು ಮೆಚ್ಚಿಸುತ್ತದೆ.


ಒಂದು ಹೊತ್ತು ಉಪವಾಸ


ಮಹಾಭಾರತದ ಅಧ್ಯಾಯದಲ್ಲಿ ಮಾರ್ಗಶೀರ ಮಾಸದಲ್ಲಿ ಒಬ್ಬ ವ್ಯಕ್ತಿಯು ಒಂದು ಹೊತ್ತು ಉಪವಾಸ ಮಾಡುವಂತೆ ಹೇಳಲಾಗಿದೆ. ಈ ದಿನದಂದು ಬ್ರಾಹ್ಮಣರಿಗೆ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ದಾನ ನೀಡಬೇಕು. ಈ ಎಲ್ಲಾ ವಿಷಯಗಳನ್ನು ಅನುಸರಿಸುವುದರಿಂದ ಎಲ್ಲಾ ರೋಗಗಳು ಮತ್ತು ಪಾಪಗಳಿಂದ ಮುಕ್ತಿ ಸಿಗುತ್ತದಂತೆ. ಈ ಮಾಸದಲ್ಲಿ ಉಪವಾಸ ಆಚರಿಸುವುದರಿಂದ ವ್ಯಕ್ತಿಯು ಆರೋಗ್ಯವಂತ ಮತ್ತು ಸದೃಢನಾಗುತ್ತಾನೆ ಎಂದು ಹೇಳಲಾಗುತ್ತದೆ. ಅಲ್ಲದೆ, ವ್ಯಕ್ತಿಯ ಮುಂದಿನ ಜನ್ಮವೂ ಸಂತೋಷವಾಗಿರುತ್ತದಂತೆ.


ಇದನ್ನೂ ಓದಿ: Astro Tips : ಮಂಗಳವಾರ ಈ ವಸ್ತುಗಳನ್ನು ತಪ್ಪಿಯೂ ಖರೀದಿಸಬೇಡಿ, ಆಂಜನೇಯನ ಕೋಪಕ್ಕೆ ಕಾರಣವಾಗುತ್ತದೆ!


ಬೆಳ್ಳಿ ಮತ್ತು ಆಹಾರ ದಾನ


ಮಾರ್ಗಶೀರ ಮಾಸದಲ್ಲಿ ಬೆಳ್ಳಿ ಮತ್ತು ಆಹಾರವನ್ನು ದಾನ ಮಾಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಅದೇ ರೀತಿ ಈ ಮಾಸದಲ್ಲಿ ಅನ್ನದಾನ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ದುಃಖಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.