ಚಂದ್ರಗ್ರಹಣದ ಅಶುಭ ಫಲ ತಪ್ಪಿಸಲು ರಾಶಿಗನುಸಾರ ಈ ಕೆಲಸ ಮಾಡಿ

Chandra Grahan Effect on Rashi 2022 : ಚಂದ್ರಗ್ರಹಣದ ದುಷ್ಪರಿಣಾಮಗಳನ್ನು ತಪ್ಪಿಸಲು, ರಾಶಿಚಕ್ರದ ಪ್ರಕಾರ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು.

Written by - Ranjitha R K | Last Updated : Nov 8, 2022, 10:42 AM IST
  • ಚಂದ್ರಗ್ರಹಣವು ಹಲವು ವಿಧಗಳಲ್ಲಿ ವಿಶೇಷವಾಗಿದೆ.
  • ಮೇಷ ರಾಶಿಯಲ್ಲಿ ಗೋಚರಿಸಲಿರುವ ಚಂದ್ರಗ್ರಹಣ
  • ರಾಶಿಚಕ್ರದ ಪ್ರಕಾರ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು.
ಚಂದ್ರಗ್ರಹಣದ ಅಶುಭ ಫಲ ತಪ್ಪಿಸಲು ರಾಶಿಗನುಸಾರ ಈ ಕೆಲಸ ಮಾಡಿ  title=
Chandragrahana 2022

Chandra Grahan Effect on Rashi 2022 : ಜ್ಯೋತಿಷ್ಯದ ಪ್ರಕಾರ, ಕಾರ್ತಿಕ ಪೂರ್ಣಿಮೆಯಂದು ಅಂದರೆ ಇಂದು  ಸಂಭವಿಸುವ ಚಂದ್ರಗ್ರಹಣವು ಹಲವು ವಿಧಗಳಲ್ಲಿ ವಿಶೇಷವಾಗಿದೆ. ಈ ಚಂದ್ರಗ್ರಹಣವು ಮೇಷ ರಾಶಿಯಲ್ಲಿ ಗೋಚರಿಸುತ್ತಿದ್ದು, ಚಂದ್ರಗ್ರಹಣದ ನಂತರ 5 ಗ್ರಹಗಳು ರಾಶಿಯನ್ನು ಬದಲಾಯಿಸಲಿವೆ. ಈ ಹಿನ್ನೆಲೆಯಲ್ಲಿ  ಚಂದ್ರಗ್ರಹಣದ ದುಷ್ಪರಿಣಾಮಗಳನ್ನು ತಪ್ಪಿಸಲು, ರಾಶಿಚಕ್ರದ ಪ್ರಕಾರ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು.

ಮೇಷ ರಾಶಿ : ಚಂದ್ರಗ್ರಹಣದ ನಂತರ ಮೇಷ ರಾಶಿಯವರು ಚಂದ್ರ ದೇವರಿಗೆ ನೀರಿನಲ್ಲಿ ಸಕ್ಕರೆ ಮಿಠಾಯಿ ಬೆರೆಸಿ ಅರ್ಘ್ಯವನ್ನು ಅರ್ಪಿಸಬೇಕು. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.

ವೃಷಭ ರಾಶಿ : ವೃಷಭ ರಾಶಿಯವರಿಗೆ ಚಂದ್ರಗ್ರಹಣದ ಸಮಯದಲ್ಲಿ ಕಣ್ಣಿನ ಸಮಸ್ಯೆಗಳು ಎದುರಾಗಬಹುದು. ಈ ರಾಶಿಯವರು ಸೀಮಿತ ಪ್ರಮಾಣದಲ್ಲಿ ಉಪ್ಪನ್ನು ಸೇವಿಸಬೇಕು.

ಇದನ್ನೂ ಓದಿ : ಚಂದ್ರಗ್ರಹಣದ ವೇಳೆ ಆಹಾರ ಸೇವಿಸಬಹುದೇ? ಏನು ಹೇಳುತ್ತದೆ ವಿಜ್ಞಾನ ?

ಮಿಥುನ ರಾಶಿ : ಚಂದ್ರಗ್ರಹಣದ ನಂತರ ಮಿಥುನ ರಾಶಿಯವರು ಶಿವನಿಗೆ ಹಸಿ ಹಾಲಿನ ಅಭಿಷೇಕ ಮಾಡಬೇಕು. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. 

ಕರ್ಕಾಟಕ ರಾಶಿ : ಚಂದ್ರಗ್ರಹಣವು ಕರ್ಕಾಟಕ ರಾಶಿಯವರಿಗೆ ದೈಹಿಕ ನೋವನ್ನು ನೀಡುತ್ತದೆ. ಗ್ರಹಣದ ಸಮಯದಲ್ಲಿ ನಿರಂತರವಾಗಿ 'ಓಂ ಸೋಮೇ ನಮಃ' ಎಂದು ಪಠಿಸುವುದರಿಂದ ಪ್ರಯೋಜನವಾಗುತ್ತದೆ. 

ಸಿಂಹ ರಾಶಿ : ಈ ಚಂದ್ರಗ್ರಹಣದಿಂದ ಸಿಂಹ ರಾಶಿಯವರಿಗೆ ದೈಹಿಕ ತೊಂದರೆಗಳು ಉಂಟಾಗಬಹುದು. ಖರ್ಚು ಹೆಚ್ಚಾಗಬಹುದು. ಓಂ ನಮಃ ಶಿವಾಯ’ ಎಂಬ ಮಂತ್ರವನ್ನು ಹಗಲಿನಲ್ಲಿ ಜಪಿಸಿದರೆ ಪರಿಹಾರ ಸಿಗುತ್ತದೆ. 

ಇದನ್ನೂ ಓದಿ : Tuesday Tips: ಮಂಗಳವಾರದಂದು ಈ ಕೆಲಸಗಳನ್ನು ಮಾಡುವುದು ಅಶುಭ

ಕನ್ಯಾ ರಾಶಿ : ಚಂದ್ರಗ್ರಹಣದ ನಂತರ ಕನ್ಯಾ ರಾಶಿಯವರು ಸ್ನಾನ ಮಾಡಿ ಶಿವಲಿಂಗಕ್ಕೆ ಒಂದು ಚಿಟಿಕೆ ಅಕ್ಕಿ ಅಥವಾ ಅಕ್ಷತೆಯನ್ನು ಅರ್ಪಿಸಬೇಕು. 

ತುಲಾ ರಾಶಿ : ತುಲಾ ರಾಶಿಯವರಿಗೂ ಚಂದ್ರಗ್ರಹಣ ಒಳ್ಳೆಯದೆಂದು ಹೇಳಲಾಗದು. ವೃತ್ತಿ ಜೀವನದಲ್ಲಿ ಸಮಸ್ಯೆಗಳಿರಬಹುದು. ಶಿವ ಚಾಲೀಸಾ ಪಠಿಸಿ.

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರ ತಂದೆಯ ಆರೋಗ್ಯ ಕೆಡಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಾಧ್ಯವಾದರೆ ಇಂದು ಬೆಳ್ಳಿಯ ಪಾತ್ರೆಯಲ್ಲಿ ನೀರು ಕುಡಿಯಿರಿ. 

ಧನು ರಾಶಿ: ಚಂದ್ರಗ್ರಹಣವು ಧನು ರಾಶಿಯವರ ಜೀವನದಲ್ಲಿ ಸಮಸ್ಯೆಗಳನ್ನು ತರಬಹುದು. ಅತ್ತಿಗೆಯೊಂದಿಗಿನ ಸಂಬಂಧವು ಹದಗೆಡಬಹುದು. ಆಹಾರ ಮತ್ತು ನೀರನ್ನು ದಾನ ಮಾಡಿ.

ಇದನ್ನೂ ಓದಿ : ಚಂದ್ರಗ್ರಹಣದ ಸೂತಕ ಸಮಯದಲ್ಲಿ ಈ ಕೆಲಸಗಳನ್ನು ಮಾಡಲೇಬಾರದು.!

ಮಕರ ರಾಶಿ : ಚಂದ್ರಗ್ರಹಣದ ದುಷ್ಪರಿಣಾಮಗಳನ್ನು ತಪ್ಪಿಸಲು ಮಕರ ರಾಶಿಯವರು ಚಂದ್ರ ಸ್ತೋತ್ರವನ್ನು ಪಠಿಸಬೇಕು. 

ಕುಂಭ ರಾಶಿ : ಕುಂಭ ರಾಶಿಯವರು ಶಿವಾಷ್ಟಕ ಸ್ತೋತ್ರವನ್ನು ಪಠಿಸಬೇಕು. ರಹಸ್ಯ ಶತ್ರುಗಳಿಂದ ಪರಿಹಾರ  ಸಿಗಲಿದೆ. 

ಮೀನ ರಾಶಿ : ಚಂದ್ರಗ್ರಹಣವು ಮೀನ ರಾಶಿಯವರಿಗೆ ಪ್ರೇಮ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಶಿವನನ್ನು ಆರಾಧಿಸಿ.

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News