Budh Margi 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಬುದ್ಧಿವಂತಿಕೆ, ತರ್ಕ, ಸಂವಹನಕಾರಕ ಎಂದು ಕರೆಯಲ್ಪಡುವ ಬುಧನ್ ಗ್ರಹವನ್ನು ಶುಭ ಗ್ರಹಗಳಲ್ಲಿ ಒಂದು ಎಂತಲೂ ಹೇಳಲಾಗುತ್ತದೆ. ಅಷ್ಟೇ ಅಲ್ಲ, ಗ್ರಹಗಳ ರಾಜಕುಮಾರ ಎಂತಲೂ ಬಣ್ಣಿಸಲಾಗುತ್ತದೆ. ಪ್ರಸ್ತುತ, ಹಿಮ್ಮುಖ ಸ್ಥಿತಿಯಲ್ಲಿ ಚಲಿಸುತ್ತಿರುವ ಶೀಘ್ರದಲ್ಲೇ ತನ್ನ ನೇರ ಚಲನೆಯನ್ನು ಆರಂಭಿಸಲಿದ್ದಾನೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಸೆಪ್ಟೆಂಬರ್ 16, 2023 ರಂದು ಮಧ್ಯಾಹ್ನ 1:21 ಕ್ಕೆ ಗ್ರಹಗಳ ರಾಜಕುಮಾರ ಬುಧ ಸಿಂಹ ರಾಶಿಯಲ್ಲಿ ಮಾರ್ಗಿಯಾಗಲಿದ್ದಾನೆ. ಐದು ದಿನಗಳ ಬಳಿಕ ಸಿಂಹ ರಾಶಿಯಲ್ಲಿ ಬುಧನ ನೇರ ಸಂಚಾರವು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡಲಿದೆ. ಆದರೂ, ಈ ಸಮಯದಲ್ಲಿ ಬುಧನು ಆರು ರಾಶಿಯವರ ವೃತ್ತಿ ಬದುಕಿನಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 


ಐದು ದಿನಗಳ ಬಳಿಕ ಆರು ರಾಶಿಯವರ ವೃತ್ತಿ ಬದುಕಿನಲ್ಲಿ ಅದೃಷ್ಟದ ಬಾಗಿಲು ತೆರೆಯಲಿದ್ದಾನೆ ಬುಧ: 
ವೃಷಭ ರಾಶಿ: 

ಮಾರ್ಗಿ ಬುಧನು ವೃಷಭ ರಾಶಿಯವರ ವೃತ್ತಿ ಬದುಕಿನಲ್ಲಿ ಧನಾತ್ಮಕ ಫಲಗಳನ್ನು ನೀಡಲಿದ್ದಾನೆ. ಇದರಿಂದಾಗಿ, ವೃತ್ತಿ ಕ್ಷೇತ್ರದಲ್ಲಿ ನೀವು ಇಷ್ಟು ದಿನಗಳಿಂದ ಎದುರಿಸುತ್ತಿದ್ದ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುವಿರಿ. ಸ್ವಂತ ಬಿಸಿನೆಸ್ ಮಾಡುವವರಿಗೆ ವಿದೇಶಗಳಿಂದ ಹೊಸ ಹೊಸ ಅವಕಾಶಗಳು ಲಭ್ಯವಾಗಲಿದ್ದು, ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಸುವರ್ಣ ಸಮಯ ಎಂತಲೇ ಹೇಳಬಹುದು. 


ಇದನ್ನೂ ಓದಿ- ಮುಂದಿನ ಒಂದೂವರೆ ವರ್ಷ ಈ ರಾಶಿಗೆ ಸುವರ್ಣಯುಗ: ಕೈಹಿಡಿಯುವಳು ಅದೃಷ್ಟಲಕ್ಷ್ಮೀ, ದುಡ್ಡಿನ ಮಳೆ, ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ ಸಮೀಪ


ಮಿಥುನ ರಾಶಿ: 
ಬುಧನ ನೇರ ಸಂಚಾರವು ಮಿಥುನ ರಾಶಿಯವರಿಗೂ ಕೂಡ ಉದ್ಯೋಗ ರಂಗದಲ್ಲಿ ಉತ್ತಮ ಅವಕಾಶಗಳನ್ನು ತರಲಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಸುಸಮಯ ಇದಾಗಿದೆ. ಆದಾಗ್ಯೂ, ನೀವು ಸೋಮಾರಿತನವನ್ನು ಬಿಟ್ಟು ಮುಂದುವರೆದರಷ್ಟೇ ಪ್ರಗತಿಯನ್ನು ಕಾಣಬಹುದು. 


ಸಿಂಹ ರಾಶಿ: 
ಸಿಂಹ ರಾಶಿಯಲ್ಲಿಯೇ ಬುಧ ಮಾರ್ಗಿ ಆಗಳಿದ್ದು, ಈ ಸಮಯದಲ್ಲಿ ನೀವು ವೃತ್ತಿ ಕ್ಷೇತ್ರದಲ್ಲಿ ಯಶಸ್ಸಿನ ಹೊಸ ಎತ್ತರವನ್ನು ಏರುವಿರಿ. ನಿಮ್ಮ ಕಚೇರಿಯಿಂದಲೇ ನೀವು ವಿದೇಶಕ್ಕೆ ಹೋಗಲು ಅವಕಾಶಗಳಿವೆ. ವೃತ್ತಿ ಜೀವನದಲ್ಲಿ ಸಂಪೂರ್ಣ ಗಮನಹರಿಸಿದರೆ ಆದಾಯವೂ ಹೆಚ್ಚಾಗಲಿದ್ದು ಉನ್ನತ ಹುದ್ದೆಯನ್ನು ಕೂಡ ಅಲಂಕರಿಸುವಿರಿ. 


ಧನು ರಾಶಿ: 
ಬುಧನು ಸಿಂಹರಾಶಿಯಲ್ಲಿ ನೇರವಾಗಿ ಚಲಿಸಿದಾಗ ಧನು ರಾಶಿಯವರಿಗೆ ಆದಾಯಕ್ಕೆ ಹೊಸ ಅವಕಾಶಗಳು ಲಭ್ಯವಾಗಲಿದೆ. ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮ ಜೊತೆಗಿದ್ದು ಬಂಪರ್ ಲಾಭವನ್ನು ಗಳಿಸುವಿರಿ. ಕಛೇರಿಯಲ್ಲಿ ನಿಮ್ಮ ಉತ್ತಮ ಕೆಲಸಕ್ಕಾಗಿ ಅಧಿಕಾರಿಗಳಿಂದ ಪ್ರಶಂಸೆಯನ್ನೂ ಪಡೆಯುವಿರಿ. 


ಇದನ್ನೂ ಓದಿ- ಮುಂದಿನ 111 ದಿನಗಳಲ್ಲಿ ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ: ವೃತ್ತಿಯಲ್ಲಿ ಬ್ರಹ್ಮಾಂಡ ಗೆಲುವು, ಸಿರಿತನ ಹುಡುಕಿ ಬರುತ್ತೆ


ಕುಂಭ ರಾಶಿ: 
ಮಾರ್ಗಿ ಬುಧ ಕುಂಭ ರಾಶಿಯವರಿಗೂ ವೃತ್ತಿ ಬದುಕಿನಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ. ಇದರಿಂದಾಗಿ ಕುಂಭ ರಾಶಿಯವರ ಕೆಲಸಕ್ಕೆ ಮನ್ನಣೆ ದೊರೆಯುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು  ನಿಮ್ಮ ಪರಿಶ್ರಮವನ್ನು ಮೆಚ್ಚುತ್ತಾರೆ. ಉದ್ಯಮಿಗಳಿಗೆ ಇದು ಲಾಭದಾಯಕ ಸಮಯ.


ಮೀನ ರಾಶಿ: 
ಮಾರ್ಗಿ ಬುಧನು ಮೀನ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಫಲಗಳನ್ನು ನೀಡಲಿದ್ದಾನೆ. ನಿಮ್ಮ ವೃತ್ತಿಜೀವನದಲ್ಲಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಸರಿಯಾದ ಸಮಯ ಇದಾಗಿದೆ. ಸಮಯವನ್ನು ಸದುಪಯೋಗ ಪಡಿಸಿಕೊಂಡರೆ ನೀವು ಬಯಸಿದಂತೆ ಉನ್ನತ ಹುದ್ದೆಯನ್ನು ಅಲಂಕರಿಸುವಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.