Budh Ast 2024: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ, ತರ್ಕ, ಹಣ, ವ್ಯವಹಾರ, ಬುದ್ದಿವಂತಿಕೆಯ ಅಂಶ ಎಂದು ಪರಿಗಣಿಸಲಾಗಿರುವ ಬುಧ ಗ್ರಹ ಜಾತಕದಲ್ಲಿ ದುರ್ಬಲನಾಗಿದ್ದರೆ ಅಂತಹ ವ್ಯಕ್ತಿಯ ಜೀವನದಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗಲಿವೆ. ಅದರಲ್ಲೂ ಮುಖ್ಯವಾಗಿ ವೃತ್ತಿ ಬದುಕಿನಲ್ಲಿ ಅಡೆತಡೆಗಳು ಹೆಚ್ಚಾಗಳಿವೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಪ್ರಸ್ತುತ ಮೇಷ ರಾಶಿಯಲ್ಲಿರುವ ಬುಧ  ಏಪ್ರಿಲ್ 4, 2024 ರಂದು ಬೆಳಿಗ್ಗೆ 10:36 ಕ್ಕೆ ಅಸ್ತಮಿಸಿದ್ದು, ಮೇ 01ರಂದು ಉದಯಿಸಲಿದ್ದಾನೆ. ಬುಧ ಅಸ್ತ (Budh Asta) ಸ್ಥಿತಿಯು ಎಲ್ಲಾ ರಾಶಿಯವರ ಮೇಲೆ ಪ್ರಭಾವ ಬೀರುತ್ತದೆ. ಆದರೂ, ಈ ಸಮಯದಲ್ಲಿ ಕೆಲವು ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ, ವೃತ್ತಿ ಜೀವನದಲ್ಲಿ ನಾನಾ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎನ್ನಲಾಗುತ್ತದೆ. ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯೋಣ... 


ಬುಧ ಅಸ್ತ:  ಮೇ 1ರವರೆಗೆ ಈ ರಾಶಿಯವರು ಜಾಗರೂಕರಾಗಿರಬೇಕು! 
ಮೇಷ ರಾಶಿ: 

ಸ್ವ ರಾಶಿಯಲ್ಲಿ ಬುಧ ಅಸ್ತಮಿಸಿರುವುದರಿಂದ ಮೇಷ ರಾಶಿಯ ಜನರು ವೃತ್ತಿ ರಂಗಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಹೆಚ್ಚಾಗಲಿವೆ. ಕೆಲಸದ ಸ್ಥಳದಲ್ಲಿ ನಿಮ್ಮ ಮನಸ್ಸು ವಿಚಲಿತಗೊಳ್ಳಬಹುದು. ಆದಾಗ್ಯೂ, ಉದ್ಯೋಗ ಬದಲಾವಣೆಯ ಚಿಂತನೆಯನ್ನು ಮುಂದೂಡುವುದು ಒಳ್ಳೆಯದು. 


ಇದನ್ನೂ ಓದಿ- Sun Transit: 24 ಗಂಟೆಗಳಲ್ಲಿ ಬದಲಾಗಲಿದೆ ಈ ರಾಶಿಯವರ ಅದೃಷ್ಟ, ಒಂದು ತಿಂಗಳು ಅಪಾರ ಹಣ, ಖ್ಯಾತಿ


ವೃಷಭ ರಾಶಿ
ಬುಧ ಅಸ್ತಮವು (Mercury Set) ವೃಷಭ ರಾಶಿಯವರಿಗೂ ಕೂಡ ಅಷ್ಟು ಶುಭಕರವಾಗಿರುವುದಿಲ್ಲ. ಈ ವೇಳೆ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿದ್ದು, ಇದರಿನಾಗಿ ಒತ್ತಡವೂ ಹೆಚ್ಚಾಗಲಿದೆ. ಆದಾಗ್ಯೂ, ತಾಳ್ಮೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. 


ಕರ್ಕಾಟಕ ರಾಶಿ:
ಬುಧ ಸಂಚಾರ ಬದಲಾವಣೆಯು  ಕರ್ಕಾಟಕ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲಿದೆ.  ಉದ್ಯೋಗದಲ್ಲಿ ಗಮನ ಕೇಂದ್ರೀಕರಿಸದೆ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬಹುದು.  


ಕನ್ಯಾ ರಾಶಿ: 
ಬುಧ ಗ್ರಹವು ಕನ್ಯಾ ರಾಶಿಯವರಿಗೂ ಕೂಡ ವೃತ್ತಿ ಸಂಬಂಧಿತ ಕೆಲಸಗಳಲ್ಲಿ ಹಲವು ಸಮಸ್ಯೆಗಳನ್ನು ತಂದೊಡ್ಡಬಹುದು. ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳ್ಳದೇ ಇರುವುದು ನಿಮ್ಮ ಆತಂಕಕ್ಕೆ ಕಾರಣವಾಗಬಹುದು.  


ಇದನ್ನೂ ಓದಿ- Ugadi Horoscope 2024: ಯುಗಾದಿ ವರ್ಷ ಭವಿಷ್ಯ, ದ್ವಾದಶ ರಾಶಿಗಳ ಫಲಾಫಲ


ಧನು ರಾಶಿ: 
ಬುಧ ಅಸ್ತ ಸ್ಥಿತಿಯು ಧನು ರಾಶಿಯ ಜನರಿಗೂ ಕೂಡ ಅಷ್ಟು ಮಂಗಳಕರವಾಗಿರುವುದಿಲ್ಲ. ಈ ವೇಳೆ ಉದ್ಯೋಗ ಕ್ಷೇತ್ರದಲ್ಲಿ ಸವಾಲುಗಳು ಹೆಚ್ಚಾಗಲಿವೆ. ಸಹೋದ್ಯೋಗಿಗಳೊಂದಿಗೆ ಸಂಯಮ ಕಾಯ್ದುಕೊಳ್ಳದಿದ್ದರೆ ಪರಿಸ್ಥಿತಿ ಬಿಗಡಾಯಿಸಬಹುದು.  


ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.