Happy Nag Panchami 2024 Wishes: ಶ್ರಾವಣ ಮಾಸ ಎಂದರೆ ಶಿವನನ್ನು ವಿಶೇಷವಾಗಿ ಆಚರಣೆ ಮಾಡುವ ತಿಂಗಳು. ಈ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ನಾಗರ ಪಂಚಮಿ ಹಬ್ಬವನ್ನು ಆಗಸ್ಟ್ 9 ರಂದು ಆಚರಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭಾರತೀಯ ಹಾಕಿಗೆ ಗತವೈಭವ ಮರುಕಳಿಸಿದ ಹಾಕಿ ದಂತಕಥೆ ಪಿ.ಆರ್ ಶ್ರೀಜೇಶ್


ಹಿಂದೂ ಧರ್ಮದಲ್ಲಿ, ನಾಗದೇವರನ್ನು ಶಿವ ಮತ್ತು ವಿಷ್ಣುವಿನ ಜೊತೆಯಾಗಿ ಕಾಣಬಹುದು. ಇನ್ನು ಇಂತಹ ಶುಭ ಸಂದರ್ಭದಲ್ಲಿ ನೀವು ನಿಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ಪರಿಚಯಸ್ಥರಿಗೆ ಶುಭಾಶಯ ಸಂದೇಶಗಳನ್ನು ಕಳುಹಿಸುವ ಮೂಲಕ ಈ ಹಬ್ಬವನ್ನು ಆಚರಿಸಬಹುದು. ಇಲ್ಲಿ ಕೆಲವೊಂದು ಸೂಪರ್‌ ಸಂದೇಶಗಳಿದ್ದು, ಇವುಗಳನ್ನ ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಕಳುಹಿಸಿ, ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿಕೊಳ್ಳಿ.


  • ಪವಿತ್ರ ಶ್ರಾವಣ ಮಾಸದ ಮೊದಲ ಹಬ್ಬ ನಾಗ ಪಂಚಮಿಯು ಸರ್ವರಿಗೂ ಒಳಿತನ್ನುಂಟು ಮಾಡಲಿ: ನಾಗರ ಪಂಚಮಿ ಹಬ್ಬದ ಶುಭಾಶಯಗಳು.

  • ನಾಗ ದೇವತೆ ಸರ್ವರಿಗೂ ಸಕಲ ಶ್ರೇಯಾಭಿವೃದ್ಧಿಯನ್ನು ಕರುಣಿಸಿ ಆಶೀರ್ವಾದಿಸಲಿ, ನಾಡಿನ ಸಮಸ್ತ ಪ್ರೀತಿಬಾಂಧವರಿಗೆ ನಾಗರ ಪಂಚಮಿಯ ಶುಭಾಶಯಗಳು.

  • ನಾಗದೇವನು ನಿಮ್ಮೆಲ್ಲಾ ಆಸೆಗಳನ್ನು ಈಡೇರಿಸಲಿ. ಆಯಸ್ಸು-ಆರೋಗ್ಯ ಕರುಣಿಸಲಿ: ಎಲ್ಲರಿಗೂ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಹಬ್ಬದ ಶುಭಾಶಯಗಳು.

  • ನಿಮಗೂ, ನಿಮ್ಮ ಕುಟುಂಬಕ್ಕೂ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು.


ಇದನ್ನೂ ಓದಿ: ಕಣ್ಣು ಮತ್ತು ಮೊಬೈಲ್‌ ಸ್ಕ್ರೀನ್‌ ನಡುವೆ ಎಷ್ಟು ದೂರ ಅಂತರವಿರಬೇಕು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.