24 ವರ್ಷಗಳ ನಂತರ ನಾಗರ ಪಂಚಮಿ ದಿನ ಮೂರು ಶುಭ ಯೋಗ ! ಈ ರಾಶಿಯವರಿಗೆ ಅಪಾರ ನಿಧಿ ಕರುಣಿಸಲಿದ್ದಾನೆ ನಾಗಪ್ಪ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇಂದು ಅಂದರೆ ನಾಗ ಪಂಚಮಿಯ ದಿನ ಕೆಲವು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ.
ಬೆಂಗಳೂರು : ಇಂದು ನಾಗರಪಂಚಮಿ. 24 ವರ್ಷಗಳ ನಂತರ ನಾಗರಪಂಚಮಿಯಂದು ಅಪರೂಪದ ಯೋಗ ನಿರ್ಮಾಣಗೊಂಡಿದೆ. ಈ ಕಾರಣದಿಂದ ಇಂದು ಉಪವಾಸ ಮಾಡಿದರೆ ಪೂಜೆಯ ಎರಡು ಪಟ್ಟು ಫಲ ಸಿಗುತ್ತದೆ. ಇದಲ್ಲದೇ ಇಂದು ನಾಗಪಂಚಮಿಯಂದು ಶುಕ್ಲ, ಶುಭ, ಸಧ್ಯದಂತಹ ಅತ್ಯಂತ ಶುಭ ಯೋಗಗಳು ರೂಪುಗೊಳ್ಳುತ್ತಿವೆ.
ನಾಗ ಪಂಚಮಿ ಈ ರಾಶಿಗಳಿಗೆ ಮಂಗಳಕರವಾಗಿದೆ :
ನಾಗಪಂಚಮಿಯಂದು ನಿರ್ಮಾಣವಾದ ಶುಭ ಯೋಗಗಳಿಂದಾಗಿ, ಇಂದಿನ ದಿನವು ವಿಶೇಷವಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇಂದು ಅಂದರೆ ನಾಗ ಪಂಚಮಿಯ ದಿನ ಕೆಲವು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಇಂದು ಈ ಜನರು ನಾಗದೇವತೆಯ ಕೃಪೆಯಿಂದ ಲಾಭ ಪಡೆಯುವ ಬಲವಾದ ಅವಕಾಶಗಳಿವೆ.
ಇದನ್ನೂ ಓದಿ : Weekly Horoscope: ಈ ವಾರ ನಾಲ್ಕು ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ, ಬಂಪರ್ ಧನಲಾಭ
ಮೇಷ ರಾಶಿ : ಮೇಷ ರಾಶಿಯವರಿಗೆ ನಾಗಪಂಚಮಿಯ ದಿನದಂದು ಶಿವ ಮತ್ತು ನಾಗದೇವರ ಕೃಪೆಯಿಂದ ಲಾಭವಾಗಲಿದೆ. ಉದ್ಯಮಿಗಳು ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ. ಕುಟುಂಬದ ಎಲ್ಲರ ಸಹಕಾರ ಇರುತ್ತದೆ. ಗೌರವ ಹೆಚ್ಚಾಗುತ್ತದೆ. ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಬಹುದು.
ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರಿಗೆ ಇಂದು ಶುಭ ದಿನ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಹೊಸ ಚೈತನ್ಯವನ್ನು ಅನುಭವಿಸುವಿರಿ. ಹೊರಗೆ ಸುತ್ತಾಡಲು ಹೋಗಬಹುದು. ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಬಹುದು.
ಇದನ್ನೂ ಓದಿ : Shani Vakri 2023: ನವೆಂಬರ್ 3ರವರೆಗೆ ಈ ರಾಶಿಯವರಿಗೆ ಹಣ, ಸುಖ, ಸಂಪತ್ತು ಎಲ್ಲವನ್ನೂ ನೀಡಲಿದ್ದಾನೆ ಶನಿ
ಸಿಂಹ ರಾಶಿ : ಸಿಂಹ ರಾಶಿಯ ಜನರು ಇಂದು ಹಣಕಾಸಿನ ಲಾಭವನ್ನು ಪಡೆಯಬಹುದು. ಇದರಿಂದಾಗಿ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ವೃತ್ತಿಯಲ್ಲಿ ಹೊಸ ಅವಕಾಶಗಳು ಸಿಗಬಹುದು. ವ್ಯಾಪಾರ ವ್ಯವಹಾರ ಉತ್ತಮವಾಗಿ ನಡೆಯಲಿದೆ. ಹೊಸ ವಾಹನ ಖರೀದಿಸುವ ಆಸೆ ಈಡೇರಬಹುದು.
ಧನು ರಾಶಿ : ಧನು ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮ ಸಾಮಾಜಿಕ ಚಟುವಟಿಕೆಯು ಹೆಚ್ಚಾಗುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ಹೊಸ ಯೋಜನೆ ಮಾಡಬಹುದು. ಹೊಸ ವಾಹನ ಖರೀದಿಗೆ ಸರಿಯಾದ ಸಮಯ.
ಇದನ್ನೂ ಓದಿ : ಮುಂದಿನ 118 ದಿನ ಈ ರಾಶಿಯ ಸಂಪತ್ತಿಗಿರಲ್ಲ ಕಿಂಚಿತ್ತೂ ಕೊರತೆ: ದುಡ್ಡಿನ ಮಳೆ-ವರ್ಷಪೂರ್ತಿ ಅದೃಷ್ಟ, ಯಶಸ್ಸು, ಪ್ರಗತಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.