ದಿನಭವಿಷ್ಯ 31-10-2024: ನರಕ ಚತುರ್ದಶಿಯ ಈ ದಿನ ದ್ವಾದಶ ರಾಶಿಗಳಲ್ಲಿ ಯಾರಿಗೆ ಲಾಭ
Today Horoscope 31st October 2024: ನರಕ ಚತುರ್ದಶಿಯ ಈ ದಿನ ಗುರುವಾರದಂದು ಚಿತ್ರಾ ನಕ್ಷತ್ರ, ವಿಷ್ಕಂಭ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಗುರುವಾರದಂದು ಚಿತ್ರಾ ನಕ್ಷತ್ರ, ವಿಷ್ಕಂಭ ಯೋಗ, ಚತುಷ್ಪಾದ ಕರಣ. ನರಕ ಚತುರ್ದಶಿಯ ಈ ದಿನ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ತಾಳ್ಮೆಯಿಂದ ಕೆಲಸಗಳನ್ನು ಪೂರ್ಣಗೊಳಿಸಿದರಷ್ಟೇ ನೀವು ಯಶಸ್ವಿಯಾಗುತ್ತೀರಿ. ಇಲ್ಲದಿದ್ದರೆ, ಕೆಲಸಗಳಲ್ಲಿ ವಿಘ್ನ ಉಂಟಾಗಬಹುದು. ಮಕ್ಕಳಿಂದ ಒಳ್ಳೆಯ ಸುದ್ದಿ ನಿಮ್ಮ ದಿನವನ್ನು ಬೆಳಗಿಸಲಿದೆ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ನರಕ ಚತುರ್ದಶಿಯಲ್ಲಿ ಈ ರಾಶಿಯವರಿಗೆ ಮಾನಸಿಕ ಹೊರೆಯಿಂದ ಮುಕ್ತಿ ದೊರೆಯಲಿದೆ. ನಿಮ್ಮ ದೈನಂದಿನ ಅಗತ್ಯತೆಗಳನ್ನು ಪೂರೈಸಲು ಸಂಬಂಧಿಕರು ಸಹಾಯ ಮಾಡಬಹುದು. ವ್ಯಾಪಾರದಲ್ಲಿ ಧನಲಾಭ ಹೆಚ್ಚಾಗಲಿದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಸೋಮಾರಿತನವನ್ನು ತ್ಯಜಿಸಿದರೆ ಮಾತ್ರ ಕೆಲಸಗಳು ಪೂರ್ಣಗೊಳ್ಳುತ್ತವೆ. ವ್ಯಾಪಾರದಲ್ಲಿ ನಿಗಾವಹಿಸದಿದ್ದರೆ ನಷ್ಟ ಸಾಧ್ಯತೆ. ಕೆಲಸದ ಬಗ್ಗೆ ಭಾವನಾತ್ಮಕವಾಗಿ ಕಾಳಜಿವಹಿಸಿ. ಕುಟುಂಬಸ್ಥರೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು ಹಲವು ಕ್ಷೇತ್ರಗಳಲ್ಲಿ ಲಾಭವನ್ನು ಪಡೆಯಿರಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿರುವವರಿಗೆ ಶುಭ ದಿನ. ಕೆಲವು ದೊಡ್ಡ ಸಮಸ್ಯೆಗಳು ಕೂಡ ಸುಲಭವಾಗಿ ಬಗೆಹರಿಯಲಿವೆ.
ಇದನ್ನೂ ಓದಿ- ದೀಪಾವಳಿ ವೇಳೆ ಶುಕ್ರ ಸಂಚಾರ: ಈ ಜನರಿಗೆ ಕೆಲಸದಲ್ಲಿ ಗೆಲುವು, ಹಣದ ರಾಶಿಯೇ ಹುಡುಕಿ ಬರುವ ಸುವರ್ಣಕಾಲ!
ಸಿಂಹ ರಾಶಿಯವರ ಭವಿಷ್ಯ (Leo Horoscope):
ಬಹಳ ದಿನಗಳಿಂದ ಎದುರಾಗಿದ್ದ ಅನಿಶ್ಚಿತ ಪರಿಸ್ಥಿತಿ ಇಂದು ಮರೆಯಾಗಲಿದೆ. ವ್ಯವಹಾರದಲ್ಲಿ ಭರವಸೆಯ ಶುಭ ಸುದ್ದಿಗಳನ್ನು ಕೇಳುವಿರಿ. ಹೊಸ ಕೆಲಸಗಳು ಲಾಭದಾಯಕವಾಗಿರುತ್ತದೆ. ಕುಟುಂಬದಲ್ಲಿ ಸುಖ-ಸಂತೋಷವನ್ನು ಕಾಣುವಿರಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಹಳೆಯ ಸ್ನೇಹಿತರ ಭೇಟಿಯು ಹೊಸ ಭರವಸೆಗಳನ್ನು ಹುಟ್ಟುಹಾಕಲಿವೆ. ಲೌಕಿಕ ಸುಖಗಳು ಹೆಚ್ಚಾಗಳಿವೆ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್ ಸಿಗಲಿದೆ. ಮಕ್ಕಳ ಮದುವೆ ಪ್ರಸ್ತಾಪಗಳನ್ನು ಸ್ವೀಕರಿಸಬಹುದು.
ತುಲಾ ರಾಶಿಯವರ ಭವಿಷ್ಯ (Libra Horoscope):
ಕೆಲಸದ ಹೊರೆ ಹೆಚ್ಚಾಗಬಹುದು. ಆದರೂ, ಪ್ರಮುಖ ಕೆಲಸಗಳನ್ನು ಮುಂದೂಡಬೇಡಿ. ಇಂದು ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಾಗಬಹುದು. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಯಾವುದೇ ಪ್ರಮುಖ ಕೆಲಸಗಳಿಗೆ ಸಂಬಂಧಿಸಿದಂತೆ ನಿಮ್ಮ ವಿಚಾರಗಳನ್ನು ತಕ್ಷಣ ಕಾರ್ಯರೂಪಕ್ಕೆ ತನ್ನಿ. ಇಲ್ಲವೇ, ಶತ್ರುಗಳೂ ಇದರ ಲಾಭ ಪಡೆಯಬಹುದು. ನಿಮ್ಮ ಸಂಗಾತಿಯಿಂದ ಸಂಪೂರ್ಣ ಬೆಂಬಲ, ಮಕ್ಕಳ ಒಳ್ಳೆ ಕೆಲಸದಿಂದ ಮನಸ್ಸಿಗೆ ನೆಮ್ಮದಿ.
ಇದನ್ನೂ ಓದಿ- ದೀಪಾವಳಿ ನಂತರ ಈ ರಾಶಿಯವರಿಗೆ ಕುಬೇರ ರಾಜಯೋಗ, ಜೀವನದಲ್ಲಿ ಅನಿರೀಕ್ಷಿತ ತಿರುವುಗಳು, ವೃತ್ತಿಯಲ್ಲಿ ಯಶಸ್ಸು, ತುಂಬಲಿದೆ ಖಜಾನೆ
ಧನು ರಾಶಿಯವರ ಭವಿಷ್ಯ (Sagittarius Horoscope):
ಸಂಗಾತಿಯ ಆರೋಗ್ಯ ಕ್ಷೀಣತೆಯಿಂದ ಚಿಂತಯಾಗಬಹುದು. ಧಾರ್ಮಿಕ ಕೈಂಕರ್ಯಗಳಲ್ಲಿ ಭಾಗವಹಿಸುವುದರಿಂದ ಶುಭ. ವ್ಯವಹಾರದಲ್ಲಿ ಲಾಭವಾಗಲಿದೆ. ಬೇರೆಯವರಿಗೆ ಸಾಲ ನೀಡುವುದನ್ನು ತಪ್ಪಿಸಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಸ್ಮರಣೀಯವಾದುದ್ದನ್ನು ನೀವಿಂದು ಮಾಡಬಹುದು. ಉದ್ಯಮಿಗಳಿಗೆ ವ್ಯಾಪಾರದಿಂದ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬರದೇ ಇರಬಹುದು. ಸಮಾಜದಲ್ಲಿ ಉತ್ತಮ ಮನ್ನಣೆಯನ್ನು ಪಡೆಯುತ್ತೀರಿ. ಸ್ನೇಹಿತರಿಂದ ಆರ್ಥಿಕ ಲಾಭ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಮಕ್ಕಳ ಭವಿಷ್ಯದ ಯೋಜನೆಗಳಿಗೆ ಹೂಡಿಕೆ ಮಾಡುವಿರಿ. ಪ್ರಯಾಣದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ನೆಚ್ಚಿನ ವಸ್ತುಗಳನ್ನು ಕಳೆದುಕೊಳ್ಳುವ ಭಯವಿರುವುದು, ಜಾಗರೂಕರಾಗಿರಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಉದ್ಯೋಗಸ್ಥರಿಗೆ ಇಂದು ಮನೆ, ಕಚೇರಿ ಎರಡೂ ಕಡೆಗಳಲ್ಲಿ ಕೆಲಸಗಳು ಹೆಚ್ಚಾಗಬಹುದು. ನಿಮ್ಮ ಯೋಜನೆಗಳಿಗೆ ಸಂಗಾತಿಯಿಂದ ಬೆಂಬಲ ದೊರೆಯುವುದು. ಮಕ್ಕಳನ್ನು ಹೊಸ ಕೋರ್ಸ್ ಗೆ ಸೇರಿಸಲು ಉತ್ತಮ ದಿನ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.