ದೀಪಾವಳಿ ನಂತರ ಈ ರಾಶಿಯವರಿಗೆ ಕುಬೇರ ರಾಜಯೋಗ, ಜೀವನದಲ್ಲಿ ಅನಿರೀಕ್ಷಿತ ತಿರುವುಗಳು, ವೃತ್ತಿಯಲ್ಲಿ ಯಶಸ್ಸು, ತುಂಬಲಿದೆ ಖಜಾನೆ

Written ByYashaswini V
Published: Oct 30, 2024, 06:39 AM IST|Updated: Oct 30, 2024, 06:39 AM IST

Kubera Rajayoga: ದೀಪಗಳ ಹಬ್ಬ ದೀಪಾವಳಿಯಲ್ಲಿ ಕೆಲವು ರಾಶಿಯವರ ಅದೃಷ್ಟ ಉಜ್ವಲಿಸಲಿದೆ. 

Kubera Rajayoga 2024: ದೀಪಾವಳಿಯು ಜನರ ಜೀವನದಲ್ಲಿ ಸುಖ-ಶಾಂತಿ, ಸಮೃದ್ಧಿಯನ್ನು ತರುತ್ತದೆ. ಈ ಸಂದರ್ಭದಲ್ಲಿ ಶನಿಯಿಂದಾಗಿ ಕೆಲವರ ಬದುಕಿನಲ್ಲಿ ಕುಬೇರ ರಾಜಯೋಗ ಸಂಭವವಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Diwali Lucky Zodiac sings 1/7

ದೀಪಾವಳಿಯಲ್ಲಿ ಅದೃಷ್ಟ

ದೀಪಾವಳಿಯು ಜನರ ಜೀವನದಲ್ಲಿ ಹೊಸ ಬೆಳಕು, ಹೊಸ ಉತ್ಸಾಹವನ್ನೂ ತರುತ್ತದೆ. ಜೊತೆಗೆ ಶುಭ ಯೋಗಗಳ ಪರಿಣಾಮವಾಗಿ ಜೀವನದಲ್ಲಿ ಸಂಪತ್ತಿನ ದೇವ ಕುಬೇರನ ಆಶೀರ್ವಾದದಿಂದ ಹೊಸ ತಿರುವುಗಳು, ಅದೃಷ್ಟದಿಂದ ಭಾರೀ ಸಂಪತ್ತನ್ನು ಕೂಡ ನೀಡಲಿದೆ. 

Kubera Rajayoga2/7

ದೀಪಾವಳಿಯಲ್ಲಿ ಕುಬೇರ ರಾಜಯೋಗ

ದೀಪಾವಳಿಯ ಸಂದರ್ಭದಲ್ಲಿ ಶನಿ ನೇರ ಸಂಚಾರದ ಪ್ರಭಾವದಿಂದಾಗಿ ಕುಬೇರ ರಾಜಯೋಗ ನಿರ್ಮಾಣವಾಗುತ್ತಿದೆ. ಇದರ ಪ್ರಭಾವದಿಂದ ಕುಬೇರನ ನೆಚ್ಚಿನ  ಕೆಲವು ರಾಶಿಯವರಿಗೆ ಸಕಲೈಶ್ವರ್ಯ ಪ್ರಾಪ್ತಿಯಾಗುತ್ತದೆ. 

Aries3/7

ಮೇಷ ರಾಶಿ

ಕುಬೇರ ರಾಜಯೋಗವು ನಿಮ್ಮ ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ನೀಡಲಿದೆ. ಸುಖ-ಸಂತೋಷದಿಂದ ರಾಜವೈಭೋಗವನ್ನು ಅನುಭವಿಸುವಿರಿ. ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ದೊರೆಯುವ ಸುವರ್ಣ ಸಮಯ. 

Cancer4/7

ಕರ್ಕಾಟಕ ರಾಶಿ

ಕರ್ಕ ರಾಶಿಯ ಜನರಿಗೆ ಕುಬೇರ ದೇವನ ವಿಶೇಷ ಆಶೀರ್ವಾದದಿಂದ ಅತ್ಯಂತ ಸಂತೋಷದಾಯಕ ಸಮಯವಾಗಿದೆ. ಜೀವನದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳಿಂದ ಹಣಕಾಸಿನ ಹರಿವು ಹೆಚ್ಚಾಗಿ ಕನಸಿನ ಮನೆ ಖರೀದಿಸುವ ಪರ್ವಕಾಲ. 

Virgo5/7

ಕನ್ಯಾ ರಾಶಿ

ಕುಬೇರನ ಕೃಪಾಕಟಾಕ್ಷದಿಂದ  ಕೌಟುಂಬಿಕ ಸುಖ ಹೆಚ್ಚಾಗಲಿದೆ. ಲಕ್ಷ್ಮೀ ಆಶೀರ್ವಾದದಿಂದ ಆದಾಯದ ಮೂಲಗಳು ಹೆಚ್ಚಾಗಿ ಜೀವನದಲ್ಲಿ ಹೊಸತನವನ್ನು ಅನುಭವಿಸುವಿರಿ. ಇನ್ನೂ ಮದುವೆಯಾಗದವರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. 

Capricorn6/7

ಮಕರ ರಾಶಿ

ಕುಬೇರ ರಾಜಯೋಗವು ವೃತ್ತಿ ಮುಂಭಾಗದಲ್ಲಿ ನೀವು ಕಂಡ ಕನಸನ್ನು ನನಸಾಗಿಸಲಿದೆ. ವಿದೇಶ ವ್ಯವಹಾರದಿಂದ ಭಾರೀ ಲಾಭವಾಗಲಿದ್ದು ಖಜಾನೆ ಭರ್ತಿಯಾಗಲಿದೆ. ವೈಯಕ್ತಿಕ ಬದುಕಿನಲ್ಲೂ ಸೌಕರ್ಯಗಳು ಹೆಚ್ಚಾಗಲಿವೆ. 

Kubera blessing zodiac sign7/7

ಕುಬೇರನ ನೆಚ್ಚಿನ ರಾಶಿಗಳು

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.